'ನಂದಿನಿ' ಸೀರಿಯಲ್ ನಲ್ಲಿ ನಿತ್ಯ ರಾಮ್ ಬಿಟ್ಟು ಹೋದ ಜಾಗಕ್ಕೆ ಬಂದ್ರು 'ಈ' ನಟಿ.!

ಉದಯ ಟಿವಿಯಲ್ಲಿ ಪ್ರಸಾರ ಆಗುತ್ತಿರುವ 'ನಂದಿನಿ' ಧಾರಾವಾಹಿಯಲ್ಲಿ ಕನ್ನಡ ನಟಿ ರಚಿತಾ ರಾಮ್ ಸಹೋದರಿ ನಿತ್ಯ ರಾಮ್ ಬಹು ಮುಖ್ಯ ಪಾತ್ರ ನಿರ್ವಹಿಸುತ್ತಿರುವುದು ನಿಮಗೆಲ್ಲಾ ಗೊತ್ತೇ ಇದೆ. ವರ್ಷಗಳಿಂದ 'ನಂದಿನಿ' ಧಾರಾವಾಹಿಯಲ್ಲಿ ಅಭಿನಯಿಸುತ್ತಿರುವ ನಿತ್ಯ ರಾಮ್ ಇದೀಗ ಕಿರುತೆರೆ ಲೋಕದಿಂದ ಬ್ರೇಕ್ ತೆಗೆದುಕೊಳ್ಳಲಿದ್ದಾರೆ.

ನಿಮ್ಮ 'ಫಿಲ್ಮಿಬೀಟ್ ಕನ್ನಡ'ದಲ್ಲಿ ನಾವು ಈಗಾಗಲೇ ವರದಿ ಮಾಡಿದಂತೆ ಡಿಸೆಂಬರ್ 5-6 ರಂದು ನಟಿ ನಿತ್ಯ ರಾಮ್ ವಿವಾಹ ಮಹೋತ್ಸವ ನಡೆಯಲಿದೆ. ಆಸ್ಟ್ರೇಲಿಯಾದಲ್ಲಿ ಸೆಟಲ್ ಆಗಿರುವ ಉದ್ಯಮಿಯೊಬ್ಬರ ಜೊತೆಗೆ ನಿತ್ಯ ರಾಮ್ ಸಪ್ತಪದಿ ತುಳಿಯಲಿದ್ದಾರೆ.

ಮದುವೆ ಬಳಿಕ ನಿತ್ಯ ರಾಮ್ ಆಸ್ಟ್ರೇಲಿಯಾಗೆ ಹಾರಲಿದ್ದಾರೆ ಎಂಬ ಗುಸುಗುಸು ಕೇಳಿಬರುತ್ತಿದೆ. ಹೀಗಿರುವಾಗಲೇ, 'ನಂದಿನಿ' ಧಾರಾವಾಹಿಯಲ್ಲಿ ನಿತ್ಯ ರಾಮ್ ಜಾಗಕ್ಕೆ ಬೇರೆ ನಟಿ ಎಂಟ್ರಿಕೊಡುತ್ತಿದ್ದಾರೆ. ಯಾರು 'ಆ' ನಟಿ ಅಂತೀರಾ.? ನೀವೇ ನೋಡಿ...

ನಿತ್ಯ ರಾಮ್ ಜಾಗಕ್ಕೆ ಬಂದವರು 'ಇವರೇ'.!

ನಿತ್ಯ ರಾಮ್ ಜಾಗಕ್ಕೆ ಬಂದವರು 'ಇವರೇ'.!

'ನಂದಿನಿ' ಸೀರಿಯಲ್ ತಂಡಕ್ಕೆ ಛಾಯಾ ಸಿಂಗ್ ಆಗಮನವಾಗಿದೆ. ಇನ್ಮುಂದೆ ನಿತ್ಯ ರಾಮ್ ಪಾತ್ರದಲ್ಲಿ ಛಾಯಾ ಸಿಂಗ್ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ, 'ಸರೋಜಿನಿ', 'ಪ್ರೇಮ ಕಥೆಗಳು' ಧಾರಾವಾಹಿಗಳಲ್ಲಿ ಅಭಿನಯಿಸಿರುವ ಛಾಯಾ ಸಿಂಗ್ ಇದೀಗ ಮತ್ತೊಮ್ಮೆ 'ನಂದಿನಿ' ಮೂಲಕ ಕನ್ನಡಿಗರ ಮನೆ-ಮನ ತಲುಪಲಿದ್ದಾರೆ.

ಛಾಯಾ ಸಿಂಗ್ ಗೆ ಕಿರುತೆರೆ ಹೊಸತಲ್ಲ

ಛಾಯಾ ಸಿಂಗ್ ಗೆ ಕಿರುತೆರೆ ಹೊಸತಲ್ಲ

ಬೆಂಗಳೂರಿನಲ್ಲಿ ಬೆಳೆದು, ವಿದ್ಯಾಭ್ಯಾಸ ಮುಗಿಸಿರುವ ಛಾಯಾ ಸಿಂಗ್ ಗೆ ಕಿರುತೆರೆ ಲೋಕ ಹೊಸದೇನಲ್ಲ. ತೆಲುಗಿನಲ್ಲಿ 'ಕಾಂಚನ ಗಂಗಾ', ತಮಿಳಿನಲ್ಲಿ 'ನಾಗಮ್ಮ', 'ರನ್' ಧಾರಾವಾಹಿಗಳಲ್ಲಿ ನಟಿಸಿರುವ ಛಾಯಾ ಸಿಂಗ್ ಕನ್ನಡದ 'ಕುಣಿಯೋಣು ಬಾರಾ' ರಿಯಾಲಿಟಿ ಶೋನಲ್ಲಿ ಜಡ್ಜ್ ಆಗಿದ್ದರು. ಹಾಗೇ, 'ಹಾಲು ಜೇನು ನಾನು ನೀನು' ಕಾರ್ಯಕ್ರಮವನ್ನು ಹೋಸ್ಟ್ ಮಾಡಿದ್ದರು.

ಕನ್ನಡ ಚಿತ್ರಗಳಿಂದ ಗುರುತಿಸಿಕೊಂಡ ನಟಿ

ಕನ್ನಡ ಚಿತ್ರಗಳಿಂದ ಗುರುತಿಸಿಕೊಂಡ ನಟಿ

ರಜ್ ಪೂತ ಕುಟುಂಬದ ಹುಡುಗಿ ಛಾಯಾ ಸಿಂಗ್ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟಿದ್ದು ಕನ್ನಡದ 'ಮುನ್ನುಡಿ' ಚಿತ್ರದ ಮೂಲಕ. ರಾಷ್ಟ್ರ ಪ್ರಶಸ್ತಿ ಗಳಿಸಿದ 'ಮುನ್ನುಡಿ' ಚಿತ್ರದಲ್ಲಿ ಛಾಯಾ ಸಿಂಗ್ ಉನ್ನೀಸಾ ಪಾತ್ರಕ್ಕೆ ಜೀವ ತುಂಬಿದ್ದರು. ಬಳಿಕ 'ಚಿಟ್ಟೆ', 'ಗುಟ್ಟು', 'ತುಂಟಾಟ', 'ಬಲಗಾಲಿಟ್ಟು ಒಳಗೆ ಬಾ', 'ಪ್ರೀತಿಸಲೇಬೇಕು', 'ರೌಡಿ ಅಳಿಯ' ಮುಂತಾದ ಕನ್ನಡ ಚಿತ್ರಗಳಲ್ಲಿ ನಟಿಸಿದರು. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ 'ಮಫ್ತಿ' ಸಿನಿಮಾದಲ್ಲೂ ಛಾಯಾ ಸಿಂಗ್ ಮುಖ್ಯ ಪಾತ್ರ ನಿರ್ವಹಿಸಿದ್ದಾರೆ.

ತಮಿಳಿನಲ್ಲಿ ಬಿಜಿ ನಟಿ

ತಮಿಳಿನಲ್ಲಿ ಬಿಜಿ ನಟಿ

'ತಿರುಡಾ ತಿರುಡಿ', 'ಅರುಳ್', 'ಉಯಿರೇ ಉಯಿರೇ', 'ಪವರ್ ಪಾಂಡಿ' ಸೇರಿದಂತೆ ಹಲವು ತಮಿಳು ಚಿತ್ರಗಳಲ್ಲಿ ಅಭಿನಯಿಸಿರುವ ಛಾಯಾ ಸಿಂಗ್ ಕೈಯಲ್ಲಿ ಸದ್ಯ 'ಮಹಾ', 'ತಮಿಳರಸನ್' ಚಿತ್ರಗಳಿವೆ. ಸಿನಿಮಾಗಳ ಶೂಟಿಂಗ್ ನಡುವೆ 'ನಂದಿನಿ' ಧಾರಾವಾಹಿಯನ್ನೂ ಛಾಯಾ ಸಿಂಗ್ ಒಪ್ಪಿಕೊಂಡಿದ್ದಾರೆ.

More from Filmibeat

English summary
Kannada Actress Chaya Singh to replace Nithya Ram in Nandini Serial.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X