ನಟಿ ರಮ್ಯಾ ಆರೋಗ್ಯದಲ್ಲಿ ಚೇತರಿಕೆ: ಆಸ್ಪತ್ರೆಯಿಂದ ಡಿಸ್ಚಾರ್ಜ್
ಫುಡ್ ಪಾಯ್ಸನ್ನಿಂಗ್ ಕಾರಣದಿಂದಾಗಿ ನಿನ್ನೆ (ಶನಿವಾರ, ಮಾರ್ಚ್ 11) ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ ದಾಖಲಾಗಿದ್ದ ನಟಿ ರಮ್ಯಾ ರವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ. ಹೀಗಾಗಿ ಇಂದು (ಭಾನುವಾರ, ಮಾರ್ಚ್ 12) ಮಧ್ಯಾಹ್ನ 11 ಗಂಟೆ ಸುಮಾರಿಗೆ ವಿಕ್ರಂ ಆಸ್ಪತ್ರೆಯಿಂದ ನಟಿ ರಮ್ಯಾ ಡಿಸ್ಚಾರ್ಜ್ ಆಗಿದ್ದಾರೆ.
ಆಹಾರದಲ್ಲಿ ವ್ಯತ್ಯಾಸ ಉಂಟಾಗಿದ್ರಿಂದ ಅಸ್ವಸ್ಥಗೊಂಡು, ನಟಿ ರಮ್ಯಾ ಆಸ್ಪತ್ರೆ ಸೇರಿದ್ದರು. ಫುಡ್ ಪಾಯ್ಸನ್ಸಿಂಗ್ ಆಗಿದ್ರಿಂದ ಅಗತ್ಯ ಪರೀಕ್ಷೆಗಳನ್ನು ನಡೆಸಿ, ರಮ್ಯಾ ರವರಿಗೆ ವಿಕ್ರಂ ಆಸ್ಪತ್ರೆಯ ವೈದ್ಯ ಡಾ.ಧೀರಜ್ ಕಾರಂತ್ (Consultant, Medical Gastroenterologist) ಚಿಕಿತ್ಸೆ ನೀಡಿದ್ದರು.[ಅನಾರೋಗ್ಯದಿಂದ ನಟಿ ರಮ್ಯಾ ಅಸ್ವಸ್ಥ: ವಿಕ್ರಂ ಆಸ್ಪತ್ರೆಗೆ ದಾಖಲು]

ಇಂದು ಸಂಪೂರ್ಣ ಗುಣಮುಖರಾಗಿರುವ ರಮ್ಯಾ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ತೆರಳಿದ್ದಾರೆ.
ಕಳೆದ ಮೂರು ತಿಂಗಳುಗಳಲ್ಲಿ ಅನಾರೋಗ್ಯದಿಂದ ಎರಡು ಬಾರಿ ನಟಿ ರಮ್ಯಾ ಆಸ್ಪತ್ರೆಗೆ ದಾಖಲಾಗಿದ್ದಾರೆ.!
2016 ರ ಡಿಸೆಂಬರ್ ತಿಂಗಳಿನಲ್ಲಿ ವೈರಲ್ ಫೀವರ್ ನಿಂದ ಬಳಲುತ್ತಿದ್ದ ರಮ್ಯಾ ಬೆಂಗಳೂರಿನ ಮಲ್ಯ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ನಿನ್ನೆ ರಮ್ಯಾ ರವರಿಗೆ ಫುಡ್ ಪಾಯ್ಸನ್ನಿಂಗ್ ಆಗಿತ್ತು.


Click it and Unblock the Notifications











