Deepika Das: ಮತ್ತೊಮ್ಮೆ ಇಂಟರ್‌ನೆಟ್‌ನಲ್ಲಿ ಬಿರುಗಾಳಿ ಎಬ್ಬಿಸಿದ ದೀಪಿಕಾ ದಾಸ್

ನಾಗಿಣಿ ಧಾರಾವಾಹಿಯಿಂದ ಜನಪ್ರಿಯತೆಯ ಉತ್ತುಂಗಕ್ಕೆ ಏರಿದ ನಟಿ ದೀಪಿಕಾ ದಾಸ್. ಮನೆ ಮಂದಿಗೆಲ್ಲಾ ನಾಗಿಣಿ ಎಂದು ಪರಿಚಯವಿದ್ದ ಇವರನ್ನು ಜನರಿಗೆ ಮತ್ತಷ್ಟು ಹತ್ತಿರವಾಗಿಸಿದ್ದು ಬಿಗ್‌ಬಾಸ್. ಬಿಗ್‌ಬಾಸ್ ಮೂಲಕ ಗಟ್ಟಿ ಸ್ಪರ್ಧಿ ಎಂದು ಸಾಬೀತು ಪಡಿಸಿದ ದೀಪಿಕಾ ದಾಸ್‌ಗೆ ಸಾಮಾಜಿಕ ಜಾಲತಾಣದಲ್ಲಿ ಬಿಗ್ ಫ್ಯಾನ್ ಫಾಲೋಯಿಂಗ್ ಇದೆ.

ಹೀಗಾಗಿಯೇ ಆಗ್ಗಾಗೆ ನಟಿ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹೊಸ ಹೊಸ ಫೋಟೋಗಳನ್ನು ಹಂಚಿಕೊಂಡು ಅಭಿಮಾನಿಗಳ ಮನಸ್ಸಿಗೆ ಹತ್ತಿರವಾಗುತ್ತಾರೆ. ಈಗ ಕೂಡ ಹೊಸ ಫೋಟೋ ಶೂಟ್ ಮಾಡಿಸಿಕೊಂಡಿದ್ದು, ಅದರ ಪೋಟೋಗಳು ಅಭಿಮಾನಿಗಳ ಹೃದಯ ಬಡಿತ ಏರಿಸಿದೆ. ಕಡು ಹಸಿರು ಬಣ್ಣದ ಉಡುಗೆಯಲ್ಲಿ ಬಾಲಿವುಡ್ ನಟಿಮಣಿಯರನ್ನು ಮೀರಿಸುವಂತೆ ಫೋಸ್ ನೀಡಿದ್ದಾರೆ.

actress-deepika-dass-latest-pics

ಹಸಿರು ಬಣ್ಣದ ಕ್ರಾಪ್ ಟಾಪ್ ಮತ್ತು ಪ್ಯಾಂಟ್ ಧರಿಸಿರುವ ಅವರು ವಿಭಿನ್ನ ಫೋಸ್‌ಗಳನ್ನು ನೀಡಿದ್ದಾರೆ. ಬಟ್ಟೆಯ ಮೇಲೆ ಸಿಲ್ವರ್‌ ಕಲರ್‌ನ ಎಳೆಗಳು ಅಂದವನ್ನು ಮತ್ತಷ್ಟು ಹೆಚ್ಚಿಸಿವೆ. ಧಾರಾವಾಹಿಯಲ್ಲಿ ತಮ್ಮ ನಟನೆಯಿಂದ ಜನರ ಪ್ರೀತಿ ಗಳಿಸಿದ್ದ ಅವರು ಸಾಮಾಜಿಕ ಜಾಲತಾಣಗಳಲ್ಲಿ ಮಾಡ್ರನ್ ಫೋಟೋಗಳ ಮೂಲಕ ಯುವ ಜನತೆಯ ಮನಕ್ಕೆ ಕಚಗುಳಿ ಇಡುತ್ತಿದ್ದಾರೆ.

ಈ ಹಿಂದೆ ಇನ್ನೂ ಮೂರು ಚಿತ್ರಗಳನ್ನು ಹಂಚಿಕೊಂಡಿದ್ದ ಅವರು, ಅದರಲ್ಲಿ, ಹೈ-ನೆಕ್ ಪರ್ಪಲ್ ಕ್ರಾಪ್ ಟಾಪ್ ಧರಿಸಿ ಅದನ್ನು ಡೆನಿಮ್ ಜೀನ್ಸ್‌ನೊಂದಿಗೆ ಮ್ಯಾಚ್ ಮಾಡಿದ್ದರು. ಈ ಚಿತ್ರಗಳು ಮತ್ತು ಅದರ ಬ್ಯಾಗ್ರೌಂಡ್ ಜೊತೆಗೆ ಮಾಡ್ರನ್ ದೇವತೆಯ ರೀತಿ ಕಾಣುತ್ತಿದ್ದರು. ಈ ಫೋಟೋಗಳಿಗೆ ಅಭಿಮಾನಿಗಳು ಕೂಡ ಪರ್ಪಲ್ ಹಾರ್ಟ್ ಕಾಮೆಂಟ್ ಮಾಡುವ ಮೂಲಕ ಪ್ರೀತಿ ವ್ಯಕ್ತಪಡಿಸಿದ್ದರು.

ದೀಪಿಕಾ ದಾಸ್ ಸಾಂಪ್ರದಾಯಿಕ ಉಡುಗೆಯಿರಲಿ ಅಥವಾ ವೆಸ್ಟ್ರನ್ ಬಟ್ಟೆ ತೊಟ್ಟಿರಲಿ, ಆಕೆಯ ನೋಟ ಜನರನ್ನು ಹಿಡಿದಿಡುತ್ತದೆ. ಕೆಲವು ದಿನಗಳ ಹಿಂದಷ್ಟೇ ಗುಲಾಬಿ ಬಣ್ಣದ ಬಾಂದಿನಿ ಸೀರೆಯಲ್ಲಿ ಫೋಟೋಗೆ ಪೋಸ್ ನೀಡಿ ತಾವು ಸೀರೆಯಲ್ಲಿಯೂ ಮಿಂಚಬಲ್ಲೇ ಎಂಬುದನ್ನು ಸಾಬೀತು ಪಡಿಸಿದ್ದರು.

ಇನ್ನು, ಕೆಲಸದ ವಿಚಾರದಲ್ಲಿ, ದೀಪಿಕಾ ದಾಸ್ ಕನ್ನಡ ಇಂಡಸ್ಟ್ರಿಯಲ್ಲಿ ತಮ್ಮದೆ ಛಾಪು ಮೂಡಿಸಿದ್ದಾರೆ. ನಟಿ ದೂಧ್ ಸಾಗರ್ ಚಿತ್ರದ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದ್ದಾರೆ. 2016 ರಲ್ಲಿ ಜೀ ಕನ್ನಡದಲ್ಲಿ ಪ್ರಸಾರವಾದ ನಾಗಿಣಿ ಧಾರಾವಾಹಿಯ ಅಮೃತಾ ಪಾತ್ರದ ಮೂಲಕ ಜನರ ನೆನಪಿನಲ್ಲಿ ಇನ್ನು ಉಳಿದ್ದಾರೆ. ಜೊತೆಗೆ ಕೆಲವು ಕನ್ನಡ ಮತ್ತು ತೆಲುಗು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ದೀಕ್ಷಿತ್ ಶೆಟ್ಟಿ ಅವರೊಂದಿಗೆ ಡ್ಯಾನ್ಸ್ ರಿಯಾಲಿಟಿ ಶೋ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್: ಫ್ಯಾಮಿಲಿ ವಾರ್ ಸೀಸನ್ 1 ನಲ್ಲಿ ಭಾಗವಹಿಸಿದ್ದಾರೆ. ಬಿಗ್ ಬಾಸ್ ಕನ್ನಡ ಸೀಸನ್ 7 ರಲ್ಲಿ ಕಾಣಿಸಿಕೊಂಡಿದ್ದಾರೆ. ಇದಾದ ನಂತರ ಕಿರುತೆರೆಯ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದು, ಬೆಳ್ಳಿತೆರೆಗೆ ಕಾಲಿಡಲು ಸಜ್ಜಾಗಿದ್ದಾರೆ.

More from Filmibeat

English summary
Kannada Actress Deepika Das's Latest Pics.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X