»   » ಸದ್ದಿಲ್ಲದೆ 'ಶಾದಿ' ಮಾಡಿಕೊಂಡ ಸ್ಯಾಂಡಲ್ ವುಡ್ ನ ಮತ್ತೋರ್ವ ನಟಿಮಣಿ.!

ಸದ್ದಿಲ್ಲದೆ 'ಶಾದಿ' ಮಾಡಿಕೊಂಡ ಸ್ಯಾಂಡಲ್ ವುಡ್ ನ ಮತ್ತೋರ್ವ ನಟಿಮಣಿ.!

Posted By:
Subscribe to Filmibeat Kannada

ಕನ್ನಡ ಸಿನಿಮಾರಂದಲ್ಲಿ ಸದ್ಯ ಮದುವೆ ದಿಬ್ಬಣದ ಸಂಭ್ರಮ ಜೋರಾಗಿದೆ. ಒಬ್ಬರ ನಂತರ ಒಬ್ಬರಂತೆ ಸಾಲು ಸಾಲಾಗಿ ತಾರೆಯರು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಸದ್ಯ, ಚಂದನವನದ ನಟಿಯೊಬ್ಬರು ಸದ್ದಿಲ್ಲದೆ ಸೈಲೆಂಟ್ ಆಗಿ ಶಾದಿ ಮಾಡಿಕೊಂಡಿದ್ದಾರೆ.

'ಕಿರೀಟ', 'ಜಲ್ವಂತಂ', 'ಮಾಲ್ಗುಡಿ ಸ್ಟೇಷನ್', 'ಹನಿ ಹನಿ ಇಬ್ಬನಿ', 'ಉಪೇಂದ್ರ ಮತ್ತೆ ಬಾ' ಹೀಗೆ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿರುವ ನಟಿ ದೀಪ್ತಿ ಕಾಪ್ಸೆ ಮದುವೆ ಮಾಡಿಕೊಂಡಿದ್ದಾರೆ. ಕಳೆದ ತಿಂಗಳು (ಅಕ್ಟೋಬರ್ 15) ದೀಪ್ತಿ ತನ್ನ ಬಾಲ್ಯದ ಗೆಳೆಯನ ಜೊತೆ ಹೊಸ ಜೀವನಕ್ಕೆ ಕಾಲಿಟ್ಟರು.

 Kannada Actress Deepthi Kapse got married to her boyfriend on october 15th

ದೀಪ್ತಿ ಕಾಪ್ಸೆ ಮದುವೆಯ ಫೋಟೋಗಳು ಫೇಸ್ ಬುಕ್ ನಲ್ಲಿ ಹರಿದಾಡುತ್ತಿದ್ದು, ಚಿತ್ರರಂಗದ ಹತ್ತಿರದ ಗೆಳೆಯರು ಹಾಗೂ ಸಂಬಂಧಿಕರು ಮಾತ್ರ ಮದುವೆಯಲ್ಲಿ ಭಾಗಿಯಾಗಿದ್ದರು. ಪ್ರಿಯಾಮಣಿ, ರಮ್ಯಾ ಬಾರ್ನಾ ನಂತ್ರ ದೀಪ್ತಿ ಕೂಡ ಅದೇ ದಾರಿಯಲ್ಲಿ ತಮ್ಮ ದಾಂಪತ್ಯ ಜೀವನ ಪ್ರಾರಂಭ ಮಾಡಿದ್ದಾರೆ.

English summary
Kannada Actress Deepthi Kapse got married to her boyfriend on October 15th. ದೀಪ್ತಿ ತನ್ನ ಬಾಲ್ಯದ ಗೆಳೆಯನ ಜೊತೆ ಹೊಸ ಜೀವನಕ್ಕೆ ಕಾಲಿಟ್ಟರು

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada