'ನಿನ್ನಿಂದಲೇ' ಬೆಡಗಿ ಎರಿಕಾ ಫರ್ನಾಂಡಿಸ್ ಈಗೆಲ್ಲಿ?
'ನೀನು ಇರುವಾಗ ಬೇರೇನು ಬೇಕಿಲ್ಲಾ...' ಅಂತ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಜೊತೆ 'ನಿನ್ನಿಂದಲೇ' ಚಿತ್ರದಲ್ಲಿ ಡ್ಯುಯೆಟ್ ಹಾಡಿದ್ದ ಎರಿಕಾ ಫರ್ನಾಂಡಿಸ್ ಗೊತ್ತಲ್ವಾ.?
ಸ್ಯಾಂಡಲ್ ವುಡ್ ನಲ್ಲಿ 'ನಿನ್ನಿಂದಲೇ' ಸಿನಿಮಾ ಮುಗಿದ್ಮೇಲೆ 'ಬುಗುರಿ' ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಎರಿಕಾ ಫರ್ನಾಂಡಿಸ್ ಈಗ ಗಾಂಧಿನಗರದಲ್ಲಿ ಪತ್ತೆನೇ ಇಲ್ಲ. ಅವಕಾಶ ಸಿಗಲಿಲ್ಲವೋ ಅಥವಾ ಸಿಕ್ಕ ಚಾನ್ಸ್ ಒಪ್ಪಿಕೊಳ್ಳಲಿಲ್ಲವೋ ಗೊತ್ತಿಲ್ಲ. ಒಟ್ನಲ್ಲಿ ಚಂದನವನದಲ್ಲಿ ಎರಿಕಾ ಫರ್ನಾಂಡಿಸ್ ಮಾತ್ರ ಸದ್ದು-ಸುದ್ದಿ ಮಾಡ್ತಿಲ್ಲ. [ಕುಡ್ಲದ ಬಾಲೆ ಎರಿಕಾ ಚಂದನದ ಗೊಂಬೆ]
ಹಾಗಾದ್ರೆ, ಎರಿಕಾ ಫರ್ನಾಂಡಿಸ್ ಈಗ ಎಲ್ಲಿದ್ದಾರೆ? ಏನು ಮಾಡ್ತಿದ್ದಾರೆ? ಎನ್ನುವ ಕುರಿತು ಒಂದು ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ. ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ ಮಾಡಿ.....

'ಬುಗುರಿ' ಚಿತ್ರವೇ ಕೊನೆ!
ಗೋಲ್ಡನ್ ಸ್ಟಾರ್ ಗಣೇಶ್ ರವರ 'ಬುಗುರಿ' ಚಿತ್ರದ ನಂತರ ಎರಿಕಾ ಫರ್ನಾಂಡಿಸ್ ಯಾವ ಚಿತ್ರಕ್ಕೂ ಬಣ್ಣ ಹಚ್ಚಿಲ್ಲ ಅಂದ್ರೆ ನೀವು ನಂಬಲೇಬೇಕು. [ಸದ್ದೂ ಇಲ್ಲ ಸುದ್ದೀನೂ ಇಲ್ಲ : ಬುಗುರಿ ತಿರುಗುತ್ತಿಲ್ಲ]

ಹಾಗಾದ್ರೆ, ಈಗೆಲ್ಲಿ?
ನೀವು ನಂಬ್ತೀರೋ, ಬಿಡ್ತೀರೋ ಎರಿಕಾ ಫರ್ನಾಂಡಿಸ್ ಸದ್ಯ ಹಿಂದಿ ಸೀರಿಯಲ್ ನಲ್ಲಿ ಅಭಿನಯಿಸುತ್ತಿದ್ದಾರೆ. 'ಕುಚ್ ರಂಗ್ ಪ್ಯಾರ್ ಕೆ ಐಸಿ ಭಿ' ಧಾರಾವಾಹಿಯಲ್ಲಿ ಎರಿಕಾ ಫರ್ನಾಂಡಿಸ್ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. [ಗೋಲ್ಡನ್ ಸ್ಟಾರ್ ಜೊತೆ ಬುಗುರಿ ಆಡಲಿರುವ ಎರಿಕಾ]

ಹಿಂದಿ ಕಿರುತೆರೆಗೆ ಕಾಲಿಟ್ಟ ನಟಿ
ಚಿತ್ರರಂಗದಿಂದ ಅವಕಾಶಗಳು ಕಡಿಮೆ ಆದ ಪರಿಣಾಮವೋ ಏನೋ ಕಿರುತೆರೆ ಕಡೆ ಎರಿಕಾ ಫರ್ನಾಂಡಿಸ್ ಮುಖ ಮಾಡಿದ್ದಾರೆ. ಮಾಡೆಲ್ ಕಮ್ ನಟ ಶಾಹೀರ್ ಶೇಖ್ ಮುಖ್ಯ ಭೂಮಿಕೆಯಲ್ಲಿರುವ 'ಕುಚ್ ರಂಗ್ ಪ್ಯಾರ್ ಕೆ ಐಸಿ ಭಿ' ಧಾರಾವಾಹಿಯಲ್ಲಿ ಎರಿಕಾ ನಟಿಸುತ್ತಿದ್ದಾರೆ. [ಹಾಫ್ ಸೆಂಚುರಿಗೆ ಮುನ್ನವೇ ಪುನೀತ್ ಚಿತ್ರ ಎತ್ತಂಗಡಿ]

ಧಾರಾವಾಹಿ ಬಗ್ಗೆ ಎರಿಕಾ ಮಾತು
''ಕುಚ್ ರಂಗ್ ಪ್ಯಾರ್ ಕೆ ಐಸಿ ಭಿ' ಧಾರಾವಾಹಿ ಕಿರುತೆರೆಯಲ್ಲಿ ನನ್ನ ಮೊದಲ ಪ್ರಯತ್ನ. ಈ ಪ್ರಾಜೆಕ್ಟ್ ಬಗ್ಗೆ ನನಗೆ ಹೆಚ್ಚು ನಿರೀಕ್ಷೆ ಇದೆ. ಕಿರುತೆರೆಯ ಖ್ಯಾತ ನಾಮರ ತಂಡದಲ್ಲಿ ಕೆಲಸ ಮಾಡುವುದು ನನ್ನ ಹೆಮ್ಮೆ'' ಅಂತಾರೆ ಎರಿಕಾ ಫರ್ನಾಂಡಿಸ್.

ಧಾರಾವಾಹಿ ಪ್ರಸಾರ ಯಾವಾಗ?
ಈಗಾಗಲೇ ಚಿತ್ರೀಕರಣಕ್ಕೆ ಚಾಲನೆ ನೀಡಲಾಗಿದ್ದು, ಫೆಬ್ರವರಿ ಅಂತ್ಯದಿಂದ 'ಕುಚ್ ರಂಗ್ ಪ್ಯಾರ್ ಕೆ ಐಸಿ ಭಿ' ಧಾರಾವಾಹಿ ಸೋನಿ ಟಿವಿಯಲ್ಲಿ ಪ್ರಸಾರವಾಗಲಿದೆ.

ಎರಿಕಾ ಚಿತ್ರ ಬದುಕು!
ಸ್ಯಾಂಡಲ್ ವುಡ್ ನಲ್ಲಿ 'ನಿನ್ನಿಂದಲೇ' ಮತ್ತು 'ಬುಗುರಿ' ಚಿತ್ರಗಳಲ್ಲಿ ಎರಿಕಾ ಫರ್ನಾಂಡಿಸ್ ಅಭಿನಯಿಸಿದ್ದಾರೆ. ['ನಿನ್ನಿಂದಲೇ' ರಿವ್ಯೂ: ಎಡವಟ್ಟಾಯ್ತು ತಲೆಕೆಟ್ಟೋಯ್ತು]

'ಐರಾವತ'ನ ಸಖಿ ಆಗ್ಲಿಲ್ಲ.!
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಐರಾವತ' ಚಿತ್ರದಲ್ಲೂ ಎರಿಕಾ ಫರ್ನಾಂಡಿಸ್ ಅಭಿನಯಿಸಬೇಕಿತ್ತು. ಆದ್ರೆ, ಕಾರಣಾಂತರಗಳಿಂದ ಅದು ಆಗ್ಲಿಲ್ಲ. [ನಿನ್ನಿಂದಲೇ ಚಿತ್ರದ ನಾಯಕಿ ದರ್ಶನ್ ಚಿತ್ರದಿಂದ ಔಟ್]

ಪರಭಾಷೆಯಲ್ಲಿ ಎರಿಕಾ.
ತಮಿಳಿನಲ್ಲಿ 'ಐಂತು ಐಂತು ಐಂತು' ಮತ್ತು 'ವಿಳಿಥಿರು', ತೆಲುಗಿನಲ್ಲಿ 'ಗಾಳಿಪಟಂ' ಹಾಗು ಹಿಂದಿಯಲ್ಲಿ 'ಬಬ್ಲೂ ಹ್ಯಾಪಿ ಹೈ' ಚಿತ್ರಗಳಲ್ಲಿ ಎರಿಕಾ ಫರ್ನಾಂಡಿಸ್ ಅಭಿನಯಿಸಿದ್ದಾರೆ.

ಎರಿಕಾ ಪೂರ್ವಾಪರ
ಮಂಗಳೂರಿನಲ್ಲಿ ಹುಟ್ಟಿದ ಎರಿಕಾ ಫರ್ನಾಂಡಿಸ್, ಬೆಳದಿದ್ದು ಮಾತ್ರ ಮುಂಬೈನಲ್ಲಿ. ಕಾಲೇಜಿನಲ್ಲಿ ಓದುವಾಗಲೇ ಮಾಡೆಲಿಂಗ್ ಮಾಡುತ್ತಿದ್ದ ಎರಿಕಾ 2011ರ 'ಮಿಸ್ ಇಂಡಿಯಾ' ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.


Click it and Unblock the Notifications











