»   » ಬಿಗ್ ಬಾಸ್ ಗೌತಮಿ ಗೌಡ ಅವರ ಅದೃಷ್ಟ ನೆಟ್ಟಗಿದೆ ಕಣ್ರೀ

ಬಿಗ್ ಬಾಸ್ ಗೌತಮಿ ಗೌಡ ಅವರ ಅದೃಷ್ಟ ನೆಟ್ಟಗಿದೆ ಕಣ್ರೀ

Posted By:
Subscribe to Filmibeat Kannada

ಕಿರುತೆರೆ ಕ್ಷೇತ್ರದಿಂದ ಹಿರಿತೆರೆ ಕ್ಷೇತ್ರಕ್ಕೆ ಹಲವಾರು ನಟ-ನಟಿಯರು ಈಗಾಗಲೇ ಕಾಲಿಟ್ಟಿದ್ದಾರೆ. ಅದರಲ್ಲಿ ಇದೀಗ ಹೊಸ ಸೇರ್ಪಡೆ ಬಿಗ್ ಬಾಸ್ ಮನೆಯಲ್ಲಿ ಖ್ಯಾತಿ ಪಡೆದ ಕಿರುತೆರೆ ನಟಿ ಗೌತಮಿ ಗೌಡ.

ಅಂದಹಾಗೆ ಗೌತಮಿ ಅವರು ಮೊದಲು ಖ್ಯಾತಿ ಗಳಿಸಿದ್ದು, ಚಿ.ಸೌ ಸಾವಿತ್ರಿ ಎಂಬ ಧಾರಾವಾಹಿ ಮೂಲಕ. ಅದರಲ್ಲಿ ನಟ ಜೈ ಜಗದೀಶ್ ಅವರ ಪತ್ನಿಯ ಪಾತ್ರದಲ್ಲಿ ಕಾಣಿಸಿಕೊಂಡು ಎಲ್ಲರ ಸಿಂಪತಿ ಗಿಟ್ಟಿಸಿಕೊಂಡಿದ್ದರು.[ಹುಚ್ಚ ವೆಂಕಟ್ ಚಿತ್ರಕ್ಕೆ 'ಬಿಗ್ ಬಾಸ್' ಗೌತಮಿ ಹೀರೋಯಿನ್!]

Kannada Actress Gowthami Gowda in Kannada movie 'Khaleja'

ಇದೀಗ ಬಿಗ್ ಬಾಸ್ ಮನೆಯಿಂದ ಹೊರಗಡೆ ಕಾಲಿಟ್ಟಿದ್ದೇ ತಡ ಇವರಿಗೆ ಆಫರ್ ಗಳ ಸುರಿಮಳೆಯೇ ಸುರಿಯುತ್ತಿದೆ. ಹುಚ್ಚ ವೆಂಕಟ್ ಅವರ ಜೊತೆ 'ಡಿಕ್ಟೇಟರ್' ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಸುದ್ದಿಯಾದ ಬೆನ್ನಲ್ಲೇ ಇದೀಗ 'ಖಲೇಜ' ಎಂಬ ಹೊಸ ಸಿನಿಮಾದಲ್ಲಿ ಮಿಂಚುತ್ತಿದ್ದಾರೆ.['ಬಿಗ್ ಬಾಸ್-3' ವೈಲ್ಡ್ ಕಾರ್ಡ್ ಸ್ಪರ್ಧಿಗಳು ಇವರೇ?]

Kannada Actress Gowthami Gowda in Kannada movie 'Khaleja'

ನಿರ್ದೇಶಕ ರಾಜು.ಡಿ ಪದ್ಮಶಾಲಿ ಆಕ್ಷನ್-ಕಟ್ ಹೇಳುತ್ತಿರುವ 'ಖಲೇಜ' ಚಿತ್ರ ಇತ್ತೀಚೆಗಷ್ಟೇ ಮುಹೂರ್ತ ನೆರವೇರಿಸಿಕೊಂಡಿದೆ. ಈ ಚಿತ್ರದಲ್ಲಿ ಗೌತಮಿ ಅವರು ವಿಭಿನ್ನ ಪಾತ್ರ ವಹಿಸಲಿದ್ದಾರೆ. ಇಬ್ಬರು ಸ್ಲಂ ಹುಡುಗರನ್ನು ಸರಿ ದಾರಿಗೆ ತರುವ ಪ್ರಯತ್ನ ಮಾಡಿದ್ದಾರೆ.

'ಸ್ಲಂನಲ್ಲಿ ಬೆಳೆದ ಹುಡುಗರು ಐಶಾರಾಮಿ ಬದುಕೇ ನಿಜವಾದ ಜೀವನ ಎಂದುಕೊಂಡಿರುತ್ತಾರೆ. ಹೀಗಾಗಿ ಅವರು ಅಡ್ಡ ದಾರಿ ಹಿಡಿದು ಹಣ ಗಳಿಸಲು ಮುಂದಾಗುತ್ತಾರೆ. ಅದನ್ನು ತಡೆದು ಅವರಿಗೆಲ್ಲಾ ಹೊಸ ಜೀವನ ತೋರಿಸುವ ಕೆಲಸದ ಪಾತ್ರವನ್ನು ನಾನು ಮಾಡುತ್ತಿದ್ದೇನೆ ಎನ್ನುತ್ತಾರೆ ಗೌತಮಿ.[ಬಿಗ್ ಮನೆಯಿಂದ ಕಿಟ್ಟಿ ಮತ್ತು ಗೌತಮಿ ಔಟ್ ಆದ್ರಾ?]

Kannada Actress Gowthami Gowda in Kannada movie 'Khaleja'

ಇನ್ನು ಸದ್ಯಕ್ಕೆ 'ಡಿಕ್ಟೇಟರ್', 20ಲಕ್ಷ ವೆಚ್ಚದಲ್ಲಿ ತಯಾರಾಗುತ್ತಿರುವ 'ಮುತ್ತಿನ ಪಲ್ಲಕ್ಕಿ' ಹಾಗೂ 'ಖಲೇಜ' ಚಿತ್ರಗಳಲ್ಲಿ ಬ್ಯುಸಿಯಾಗಿರುವ ನಟಿ ಗೌತಮಿ ಗೌಡ ಅವರು ಬಿಗ್ ಬಾಸ್ ಮನೆಗೆ ಹೋಗಿ ಬಂದಿದ್ದೇ ತಡ ಅವರ ಅದೃಷ್ಟ ಬಹಳ ಚೆನ್ನಾಗಿದ್ದಂತಿದೆ. ಯಾಕೆಂದರೆ ಹಲವಾರು ಪ್ರಾಜೆಕ್ಟ್ ಗಳು ಅವರ ಕೈ ಸೇರುತ್ತಿವೆ.

English summary
Kannada Actress Gowthami Gowda is selected to play lead role in Kannada Movie 'Khaleja'. The movie is directed by Raju.d.Padmashali.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada