For Quick Alerts
  ALLOW NOTIFICATIONS  
  For Daily Alerts

  ನಟಿ ಹರಿಪ್ರಿಯಾ ಸಿಕ್ಕರು ಹೊಸ 'ಬಿಗ್ ಬ್ರದರ್'

  By Naveen
  |

  ಎಲ್ಲರಂತೆ ಇಂದು ನಟಿ ಹರಿಪ್ರಿಯಾ ಕೂಡ ರಕ್ಷಾ ಬಂಧನ ಹಬ್ಬವನ್ನು ಆಚರಣೆ ಮಾಡಿದ್ದಾರೆ. ಈ ಬಾರಿ ಹರಿಪ್ರಿಯಾಗೆ ಹೊಸ ಬಿಗ್ ಬ್ರದರ್ ಸಿಕ್ಕಿದ್ದು, ಅವರಿಗೆ ರಾಕಿ ಕಟ್ಟಿದ್ದಾರೆ.

  ಹರಿಪ್ರಿಯಾ ಅವರ ಸಹೋದರ ಬೇರೆ ಯಾರು ಅಲ್ಲ ನಿರ್ದೇಶಕ ದಿನಕರ್ ತೂಗುದೀಪ. ದರ್ಶನ್ ಸಹೋದರ ದಿನಕರ್ ರನ್ನು ಹರಿಪ್ರಿಯಾ ಸಹೋದರನ ರೀತಿ ಕಾಣುತ್ತಿದ್ದಾರೆ. ಈ ರಕ್ಷಾ ಬಂಧನದ ದಿನ ಅವರಿಗೆ ರಾಕಿ ಕಟ್ಟಿ ಆಶೀರ್ವಾದ ಪಡೆದಿದ್ದಾರೆ.

  ರಕ್ಷಾ ಬಂಧನ ವಿಶೇಷ : ಕನ್ನಡ ನಟಿಯರ ಪ್ರೀತಿಯ ಸಹೋದರರಿವರು ರಕ್ಷಾ ಬಂಧನ ವಿಶೇಷ : ಕನ್ನಡ ನಟಿಯರ ಪ್ರೀತಿಯ ಸಹೋದರರಿವರು

  ದಿನಕರ್ ಜೊತೆಗೆ ತೆಗೆಸಿಕೊಂಡ ಫೋಟೋವನನ್ನು ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿರುವ ಹರಿಪ್ರಿಯಾ 'ಮೈ ಬಿಗ್ ಬ್ರದರ್' ಎಂದು ಬರೆದುಕೊಂಡಿದ್ದಾರೆ.

  ವಿಶೇಷ ಅಂದರೆ, ಇತ್ತೀಚಿಗಷ್ಟೆ ರಿಲೀಸ್ ಆದ 'ಲೈಫ್ ಜೊತೆ ಒಂದ್ ಸೆಲ್ಫಿ' ಸಿನಿಮಾದಲ್ಲಿ ಕೂಡ ದಿನಕರ್ ಅವರನ್ನು ಹರಿಪ್ರಿಯಾ ಬಿಗ್ ಬ್ರದರ್ ಎಂದೇ ಕರೆಯುತ್ತಾರೆ. ಚಿತ್ರದ ನಿರ್ದೇಶನ ಮಾಡಿರುವ ದಿನಕರ್ ಸಿನಿಮಾದ ಕೊನೆಯ ದೃಶ್ಯದಲ್ಲಿ ಒಂದು ಸೆಲ್ಫಿಗೆ ಪೋಸ್ ನೀಡುತ್ತಾರೆ.

  ವಿಮರ್ಶೆ: ಇಷ್ಟ ಇದ್ರೆ ಒಮ್ಮೆ ಸೆಲ್ಫಿ ತೆಗೆದುಕೊಳ್ಳಬಹುದು ವಿಮರ್ಶೆ: ಇಷ್ಟ ಇದ್ರೆ ಒಮ್ಮೆ ಸೆಲ್ಫಿ ತೆಗೆದುಕೊಳ್ಳಬಹುದು

  ಇನ್ನು ಕಳೆದ ಶುಕ್ರವಾರ ಬಿಡುಗಡೆಯಾಗಿರುವ 'ಲೈಫ್ ಜೊತೆ ಒಂದ್ ಸೆಲ್ಫಿ' ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಸಿನಿಮಾದ ಸ್ನೇಹ, ಪ್ರೀತಿ, ವಾತ್ಸಲ್ಯ ಈ ಮೂರು ಭಾವನೆಯನ್ನು ತುಂಬ ಚೆನ್ನಾಗಿ ತೋರಿಸಲಾಗಿದೆ.

  English summary
  Raksha Bandhan 2018 : Kannada actress haripriya celebrating Raksha Bandhan with Director Dinakar Toogudeepa.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X