»   » ಹಾಟ್ ಲುಕ್ ನಲ್ಲಿ ಪಡ್ಡೆಹೈಕಳ ನಿದ್ದೆಗೆಡಿಸುವ, ನೀರ್ ದೋಸೆ' ಬೆಡಗಿ

ಹಾಟ್ ಲುಕ್ ನಲ್ಲಿ ಪಡ್ಡೆಹೈಕಳ ನಿದ್ದೆಗೆಡಿಸುವ, ನೀರ್ ದೋಸೆ' ಬೆಡಗಿ

Posted By:
Subscribe to Filmibeat Kannada

ಹಲವಾರು ವಿವಾದಗಳಿಂದ ಸಖತ್ ಸುದ್ದಿಯಲ್ಲಿದ್ದ ನಿರ್ದೇಶಕ ವಿಜಯ್ ಪ್ರಸಾದ್ ಅವರ 'ನೀರ್ ದೋಸೆ' ಸಿನಿಮಾ ಸದ್ಯಕ್ಕೆ ಹಾಟ್ ಬೆಡಗಿಯ ದೇಹಸಿರಿಯಿಂದಾಗಿ ಮತ್ತೆ ಸುದ್ದಿಯಲ್ಲಿದೆ.

ಹೌದು ಲಕ್ಕಿ ಸ್ಟಾರ್ ರಮ್ಯಾ ಅವರು ಬಿಟ್ಟು ಹೋಗಿದ್ದ ಜಾಗವನ್ನು 'ಉಗ್ರಂ' ಬೆಡಗಿ ಹರಿಪ್ರಿಯಾ ಅವರು ತುಂಬಿದ್ದು, ಈಗಾಗಲೇ ಬೇರೆ ಬೇರೆ ಕಡೆ ನೀರ್ ದೋಸೆ ಹುಯ್ಯುತ್ತಿದ್ದಾರೆ.

 Kannada Actress Haripriya hot in Kannada movie 'Neer dose'

ಅಂದಹಾಗೆ ಈ ಸಿನಿಮಾದಲ್ಲಿ ನಟಿ ಹರಿಪ್ರಿಯಾ ಅವರು ಕಾಲ್ ಗರ್ಲ್ ಕುಮುದಾ ಎಂಬ ಪಾತ್ರದಲ್ಲಿ ಮಿಂಚಿದ್ದಾರೆ. ಯಾವಾಗಲೂ ಪಕ್ಕದ್ಮನೆ ಪದ್ಮನ ಥರ ಸಂಪ್ರದಾಯಸ್ಥ ಉಡುಗೆ-ತೊಡುಗೆಗಳನ್ನು ತೊಡುತ್ತಿದ್ದ ನಟಿ ಹರಿಪ್ರಿಯಾ ಅವರು ಈ ಪಾತ್ರಕ್ಕಾಗಿ ಮೈ ಚಳಿ ಬಿಟ್ಟು ಬಿಕಿನಿ ಧರಿಸಿ ಸಖತ್ ಹಾಟ್ ಲುಕ್ ನಲ್ಲಿ ಮಿಂಚಿದ್ದಾರೆ.['ನೀರ್ ದೋಸೆ' ಬೆಡಗಿ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಇಲ್ಲಿದೆ ಅವಕಾಶ!]

'ನೀರ್ ದೋಸೆ' ಸಿನಿಮಾದ ಫೋಟೋ ಶೂಟ್ ಸಂದರ್ಭದಲ್ಲಿ ನಟಿ ಹರಿಪ್ರಿಯಾ ಅವರು ಬಿಸಿ ಬಿಸಿ ಫೋಸ್ ಕೊಟ್ಟಿದ್ದಾರೆ. ಕನ್ನಡ ಸಿನಿಮಾಗಳಲ್ಲಿ ಕೇವಲ ಸಿನಿಮಾದ ಪಾತ್ರಕ್ಕಾಗಿ ನಟಿಯೊಬ್ಬಳು ಇಷ್ಟೊಂದು ಬೋಲ್ಡ್ ಆಗಿ ಕಾಣಿಸಿಕೊಂಡಿದ್ದು, ಇದೇ ಮೊದಲು.

 Kannada Actress Haripriya hot in Kannada movie 'Neer dose'

ಈಗಾಗಲೇ ನಟಿ ಹರಿಪ್ರಿಯಾ ಅವರ ಬಿಸಿ ಬಿಸಿ ಫೋಟೋ ವೈರಲ್ ಆಗಿದ್ದು, ಈಕೆಯ ಹಾಟ್ ಲುಕ್ ನೋಡಿದ ಪಡ್ಡೆ ಹೈಕಳ ನಿದ್ದೆ ಕೆಡುವುದಂತೂ ಗ್ಯಾರಂಟಿ. ಇನ್ನು ಪಾತ್ರಕ್ಕಾಗಿ ಅಷ್ಟು ಹಾಟ್ ಆಗಿ ಕಾಣಿಸಿಕೊಳ್ಳುವುದು ಅವಶ್ಯವಾಗಿತ್ತು ಎಂಬುದು ನಿರ್ದೇಶಕ ವಿಜಯ್ ಪ್ರಸಾದ್ ಅವರ ಅಭಿಪ್ರಾಯ.

English summary
Kannada Actress Haripriya hot photo shoot in Kannada movie 'Neer dose'. The movie is directed by Vijay Prasad.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada