ಬಾಲಿಯ ಜಾಲಿ ಮೂಡ್ ನಲ್ಲಿ ಟ್ಯಾಟೂ ಹಾಕಿಸಿಕೊಂಡ ನಟಿ ಹರಿಪ್ರಿಯಾ

ಸ್ಯಾಂಡಲ್ ವುಡ್ ನಟಿ ಹರಿಪ್ರಿಯಾ ಸದ್ಯ ಚಿತ್ರೀಕರಣಕ್ಕೆ ಕೊಂಚ ಬ್ರೇಕ್ ಹಾಕಿ ವಿದೇಶಿ ಪ್ರವಾಸದಲ್ಲಿದ್ದಾರೆ. ಆಗಾಗ ವಿದೇಶದ ಕಡೆ ಪಯಣ ಬೆಳೆಸುತ್ತಿರುವ ನಟಿ ಹರಿಪ್ರಿಯಾ, ಈ ಬಾರಿ ಬಾಲಿ ದ್ವೀಪದ ಕಡೆ ಹೊರಟಿದ್ದಾರೆ. ಈಗಾಗಲೆ ಬಾಲಿ ತಲುಪಿರುವ ಹರಿಪ್ರಿಯಾ ಅಲ್ಲಿನ ಸುಂದರ ತಾಣಗಳಲ್ಲಿ ಸುತ್ತಾಡುತ್ತಿದ್ದಾರೆ.

ಇಂಡೋನೇಶಿಯದ ಸುಂದರ ತಾಣಗಳಿಗೆ ಭೇಟಿ ಮಾಡಿದ ನೆನಪಿಗೆ ಫೋಟೋವನ್ನು ಕ್ಲಿಕ್ಕಸಿಕೊಳ್ಳುತ್ತಿದ್ದಾರೆ. ಒಂದಿಷ್ಟೋ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುತ್ತಿದ್ದಾರೆ. ಹರಿಪ್ರಿಯಾ ಅವರ ತರಹೇವಾರಿ ಫೋಟೋಗಳಿಗೆ ಅಭಿಮಾನಿಗಳ ಲೈಕ್ಸ್ ಅಂಡ್ ಕಮೆಂಟ್ ಗಳು ಹರಿದು ಬರುತ್ತಿವೆ.

ಇತ್ತೀಚಿಗಷ್ಟೆ ಇಂಡೋನೇಶಿಯ ಹೋಗುವುದಾಗಿ ಅಭಿಮಾನಿಗಳಿಗೆ ತಿಳಿಸಿದ್ದರು. ಇಂಡೋನೇಶಿಯಾ ತಲುಪುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳಿಗೆ ತಿಳಿಸಿದ್ದ ಹರಿಪ್ರಿಯಾ, ಟ್ರಿಪ್ ಬಗ್ಗೆ ಕೂಡ ಅಪ್ ಡೇಟ್ ಮಾಡುತ್ತಲೆ ಇದ್ದಾರೆ. ಬಾಲಿಯಲ್ಲಿ ಕಂಡ ಸಾಕಷ್ಟು ವಿಶೇಷತೆಗಳನ್ನು ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಿದ್ದಾರೆ.

ಟ್ಯಾಟೂ ಹಾಕಿಕೊಂಡ ಹರಿಪ್ರಿಯಾ

ಟ್ಯಾಟೂ ಹಾಕಿಕೊಂಡ ಹರಿಪ್ರಿಯಾ

ವಿಶೇಷ ಅಂದ್ರೆ ಹರಿಪ್ರಿಯಾ ಇಂಡೋನೇಶಿಯಾದಲ್ಲಿ ಕೈಗೆ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಎಡಗೈಗೆ ಟ್ಯಾಟೂ ಹಾಕಿಕೊಳ್ಳುತ್ತಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಏನಂತ ಟ್ಯಾಟೂ ಹಾಕಿಸಿಕೊಂಡಿರುವುದಾಗಿ ಊಹಿಸಿ ಎಂದು ಅಭಿಮಾನಿಗಳಿಗೆ ಹೇಳಿದ್ದಾರೆ. ಹಾಗಾಗಿ ಟ್ಯಾಟೂ ಏನಾಗಿರಹುದು ಎಂದು ಅಭಿಮಾನಿಗಳು ಕಮೆಂಟ್ಸ್ ಹಾಕುತ್ತಿದ್ದಾರೆ.

ಟ್ಯಾಟೂ ಬಗ್ಗೆ ಊಹಿಸಿ ಎಂದ ಹರಿಪ್ರಿಯಾ

ಟ್ಯಾಟೂ ಬಗ್ಗೆ ಊಹಿಸಿ ಎಂದ ಹರಿಪ್ರಿಯಾ

ಹರಿಪ್ರಿಯಾ ಹಾಕಿಕೊಂಡಿರುವ ಟ್ಯಾಟು ಬಗ್ಗೆ ಸಾಕಷ್ಟು ಮಂದಿ ಕಮೆಂಟ್ಸ್ ಮಾಡುತ್ತಿದ್ದಾರೆ. ಅನೇಕರು ಅಮ್ಮ ಅಂತ ಹಾಕಿಸಿಕೊಂಡಿದ್ದಾರೆ ಎಂದು ಹೇಳುತ್ತಿದ್ದಾರೆ. ಇನ್ನು ಕೆಲವರು ಹರಿಪ್ರಿಯಾ ಅಂತ ಹಾಕಿಸಿಕೊಂಡಿದ್ದಾರೆಎಂದು ಹೇಳುತ್ತಿದ್ದಾರೆ. ಆದ್ರೆ ಹರಿಪ್ರಿಯಾ ಮಾತ್ರ ಟ್ಯಾಟೂ ಬಗ್ಗೆ ಏನು ಅಂತ ರಿವೀಲ್ ಮಾಡಿಲ್ಲ.

ಕುಟುಂಬದ ಜೊತೆ ಬಾಲಿ ಟ್ರಿಪ್

ಕುಟುಂಬದ ಜೊತೆ ಬಾಲಿ ಟ್ರಿಪ್

ಕುಟುಂಬದ ಜೊತೆ ಬಾಲಿಯಲ್ಲಿ ಜಾಲಿ ಮಾಡುತ್ತಿರುವ ಹರಿಪ್ರಿಯಾ ಸುಂದರ ತಾಣಗಳನ್ನು ಸುತ್ತಾಡುತ್ತಿದ್ದಾರೆ. ಅಲ್ಲಿಯ ಫುಡ್ ಅನ್ನು ಸಖತ್ ಎಂಜಾಯ್ ಮಾಡುತ್ತಿದ್ದಾರಂತೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳಿಗೆ ಎಲ್ಲಾ ಅಪ್ ಡೇಟ್ ಗಳನ್ನು ನೀಡುತ್ತಿದ್ದಾರೆ. ಸುಂದರ ಸ್ಥಳದಲ್ಲಿ ಪೋಟೋವನ್ನು ಕ್ಲಿಕ್ಕಿಸಿಕೊಂಡು ಅಪ್ ಡೇಟ್ ಮಾಡುತ್ತಿದ್ದಾರೆ.

ಸಾಲು ಸಾಲು ಸಿನಿಮಾಗಳು ರೆಡಿಯಾಗಿವೆ

ಸಾಲು ಸಾಲು ಸಿನಿಮಾಗಳು ರೆಡಿಯಾಗಿವೆ

ಹರಿಪ್ರಿಯಾ ಅಭಿನಯದ ಸಾಕಷ್ಟು ಸಿನಿಮಾಗಳು ರಿಲೀಸ್ ಗೆ ರೆಡಿಯಾಗಿವೆ. ಸದ್ಯ ಬಹುನಿರೀಕ್ಷೆಯ ಕುರುಕ್ಷೇತ್ರ ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ. ಜೊತೆಗೆ ಬಿಚ್ಚುಗತ್ತಿ, ಎಲ್ಲಿದ್ದೆ ಇಲ್ಲಿ ತನಕ, ಕನ್ನಡ್ ಗೊತ್ತಿಲ್ಲ, ಕಥಾಸಂಗಮ ಚಿತ್ರಗಳು ರಿಲೀಸ್ ಗೆ ರೆಡೆಯಾಗಿವೆ. ಹರಪ್ರಿಯಾ ಅಭಿನಯದ 'ಬೆಲ್ ಬಾಟಂ' ಸಿನಿಮಾ 150 ದಿನಗಳ ಪ್ರದರ್ಶನ ಕಂಡಿದೆ. ಸಾಕಷ್ಟು ಸಿನಿಮಾಗಳು ಹರಿಪ್ರಿಯಾ ಹುಡುಕಿಕೊಂಡು ಬರುತ್ತಿವೆ. ಮುಂದಿನ ಸಿನಿಮಾಗೆ ಗ್ರೀನ್ ಸಿಗ್ನಲ್ ನೀಡುವ ಮೊದಲೆ ಜಾಲಿ ಟ್ರಿಪ್ ಮುಗಿಸುವ ಪ್ಲಾನ್ ಮಾಡಿದ್ದಾರೆ.

More from Filmibeat

English summary
Kannada actress Haripriya is enjoying a Indonesia tour. Haripriya with a tattoo on his left hand in Indonesia tour
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X