ಮದುವೆ ಆಗ್ತಾರಂತೆ ನೀರ್ ದೋಸೆ ಬೆಡಗಿ ಹರಿಪ್ರಿಯಾ!
ಸಿನಿಮಾರಂಗದಲ್ಲಿ ತಮ್ಮ ನಟನೆಯಿಂದಲೇ ಗುರುತಿಸಿಕೊಂಡಿರುವ ನಟಿ ಹರಿಪ್ರಿಯಾ ಮದುವೆ ಆಗುತ್ತಾರಂತೆ. ಅಯ್ಯೋ ಕೈ ತುಂಬಾ ಸಿನಿಮಾಗಳನ್ನ ಇಟ್ಟುಕೊಂಡಿರುವ ಹರಿಪ್ರಿಯಾ ಇಷ್ಟು ಬೇಗ ಮದುವೆ ಆಗುತ್ತಾರಾ? ಅಂತ ಆಶ್ಚರ್ಯದಿಂದ ಕೇಳಬೇಡಿ. ಮದುವೆ ವಿಚಾರವನ್ನ ಹರಿಪ್ರಿಯಾ ಅವರೇ ಹೇಳಿಕೊಂಡಿದ್ದಾರೆ.
ಇತ್ತಿಚಿಗಷ್ಟೇ ಸಂದರ್ಶನವೊಂದರಲ್ಲಿ ಹರಿಪ್ರಿಯಾ ತಮ್ಮ ಮದುವೆ ಬಗ್ಗೆ ಮಾತನಾಡಿದ್ದಾರೆ. ಮದುವೆ ಆಗುವ ಹುಡುಗ ಹೇಗಿರಬೇಕು ಎನ್ನುವ ವಿಚಾರವನ್ನ ಹಂಚಿಕೊಂಡಿದ್ದಾರೆ. ಮದುವೆ ಆಗಲು ತಯಾರಾಗಿರುವ ನೀರ್ ದೋಸೆ ಬೆಡಗಿಗೆ ಒಳ್ಳೆ ಮನಸ್ಸಿರುವ ಹುಡುಗ ಬೇಕಂತೆ.
ಹರಿಪ್ರಿಯಾ ಅವರ ತಾಯಿ ಹಾಗೂ ಅಣ್ಣ ಈಗಾಗಲೇ ಹುಡುಗನ್ನ ನೋಡಲು ಶುರು ಮಾಡಿದ್ದಾರಂತೆ. ಒಳ್ಳೆ ಹುಡುಗ ಸಿಕ್ಕ ತಕ್ಷಣ ಕಲ್ಯಾಣ ಎಂದಿದ್ದಾರೆ. ಸದ್ಯ ಹರಿಪ್ರಿಯಾ 'ಸೂಜಿದಾರ' ಲೈಫ್ ಜೊತೆ ಒಂದ್ ಸೆಲ್ಫಿ ಹಾಗೂ 'ಬೆಲ್ ಬಾಟಂ' ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದಾರೆ. ಹರಿಪ್ರಿಯಾ ಅಭಿನಯದ ಕುರುಕ್ಷೇತ್ರ ಚಿತ್ರ ಬಿಡುಗಡೆ ಆಗಬೇಕಿದೆ.

ಸಂದರ್ಶನದಲ್ಲಿ ಇಲ್ಲಿಯ ವರೆಗೂ ಯಾರಿಗೂ ಕೈ ಕೊಟ್ಟಿಲ್ಲ ಎಂದು ಹೇಳಿರುವ ಹರಿಪ್ರಿಯಾ ಮದುವೆ ನಂತರ ಸಿನಿಮಾಗಳಲ್ಲಿ ಅಭಿನಯ ಮಾಡುತ್ತಾರಾ ಇಲ್ಲವಾ ಎನ್ನುವ ಸೂಚನೆ ನೀಡಿಲ್ಲ. ಒಟ್ಟಾರೆ ನೀರ್ ದೋಸೆ ಬೆಡಗಿ ಮದುವೆ ಮಾತ್ರ ಆದಷ್ಟು ಬೇಗ ನಡೆಯಲಿದೆ ಅನ್ನುವುದು ಖಾತರಿ.


Click it and Unblock the Notifications











