ಮೂಗು ಚುಚ್ಚಿಸಿಕೊಳ್ಳುವಾಗ ಕಣ್ಣೀರಿಟ್ಟ ಹರಿಪ್ರಿಯಾ: ವಿಡಿಯೋ ನೋಡಿ ಫ್ಯಾನ್ಸ್‌ಗೆ ಅನುಮಾನ?

By ಫಿಲ್ಮಿಬೀಟ್ ಡೆಸ್ಕ್

ಸ್ಯಾಂಡಲ್‌ವುಡ್‌ನ ಬ್ಯುಸಿ ನಟಿಯರಲ್ಲಿ ನಟಿ ಹರಿಪ್ರಿಯಾ ಕೂಡ ಒಬ್ಬರು. ಇತ್ತೀಚೆಗೆ ಹೆಚ್ಚು ಸಿನಿಮಾ ರಿಲೀಸ್ ಆಗದೇ ಹೋದರೂ, ಕೈ ತುಂಬಾ ಸಿನಿಮಾಗಳಿವೆ. ಕೆಲವು ತಿಂಗಳ ಹಿಂದಷ್ಟೇ ನೀನಾಸಂ ಸತೀಶ್ ಜೊತೆ ನಟಿಸಿದ್ದ 'ಪೆಟ್ರೋಮ್ಯಾಕ್ಸ್' ಕೂಡ ರಿಲೀಸ್ ಆಗಿತ್ತು. ಆದರೆ, ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿಲ್ಲ.

'ಪೆಟ್ರೋಮ್ಯಾಕ್' ಸಿನಿಮಾದಲ್ಲಿ ಹರಿಪ್ರಿಯಾ ಚಾಲೆಂಜಿಂಗ್ ಪಾತ್ರದಲ್ಲಿ ನಟಿಸಿದ್ದರು. ಹರಿಪ್ರಿಯಾ ಬೋಲ್ಡ್ ನಟನೆಗೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿತ್ತು. ವಿಜಯ್ ಪ್ರಸಾದ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದರು.

ಹರಿಪ್ರಿಯಾ ಇತ್ತೀಚೆಗೆ ಕಂಟೆಂಟ್ ಓರಿಯೆಂಟೆಡ್ ಸಿನಿಮಾಗಳಲ್ಲೇ ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ. ಇಲ್ಲ ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಆದರೆ, ಕೆಲವು ದಿನಗಳಿಂದ ಹರಿಪ್ರಿಯಾ ಸೈಲೆಂಟ್ ಆಗಿದ್ದರು. ಆದ್ರೀಗ ಸೋಶಿಯಲ್ ಮೀಡಿಯಾದಲ್ಲಿ ಇವರ ಒಂದು ವಿಡಿಯೋ ವೈರಲ್ ಆಗುತ್ತಿದೆ. ಆ ವಿಡಿಯೋ ಅವರ ಅಭಿಮಾನಿಗಳ ಅನುಮಾನಕ್ಕೆ ಎಡೆ ಮಾಡಿಕೊಡುತ್ತಿದೆ.

ಹರಿಪ್ರಿಯಾ ಮೂಗಿಗೆ ಮೂಗುತಿ

ಹರಿಪ್ರಿಯಾ ಮೂಗಿಗೆ ಮೂಗುತಿ

ಸಾಮಾನ್ಯವಾಗಿ ನಟ-ನಟಿಯರು ಹೆಚ್ಚೆ ಹಾಕಿಸಿಕೊಳ್ಳುವುದು. ಮೂಗು ಚುಚ್ಚಿಸಿಕೊಳ್ಳುವ ಸಾಹಸಕ್ಕೆ ಹಾಕುವುದಿಲ್ಲ. ಇವೇ ತಮ್ಮ ಪಾತ್ರಕ್ಕೆ ಅಡೆತಡೆಯಾಗಬಹುದು ಅನ್ನೋ ಅವರ ಆತಂಕಕ್ಕೆ ಕಾರಣ. ನಟಿ ಪರಿಪ್ರಿಯಾ ಕೂಡ ಇದೂವರೆಗೂ ಮೂಗುಬೊಟ್ಟು ಧರಿಸುತ್ತಿರಲಿಲ್ಲ. ಸಿನಿಮಾಗೆ ಬೇಕಾಗಿದ್ದರೆ, ಆರ್ಟಿಫಿಶಿಯಲ್ ಮೂಗು ಬೊಟ್ಟು ಧರಿಸುತ್ತಿದ್ದರು. ಆದ್ರೀಗ ಮೂಗು ಚುಚ್ಚಿಸಿಕೊಂಡಿರೋ ವಿಡಿಯೋವನ್ನು ಅವರೇ ತನ್ನ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಕಣ್ಣೀರಿಟ್ಟ ನಟಿ ಹರಿಪ್ರಿಯಾ

ಕಣ್ಣೀರಿಟ್ಟ ನಟಿ ಹರಿಪ್ರಿಯಾ

ಹರಿಪ್ರಿಯಾ ಶೇರ್ ಮಾಡಿದ ವಿಡಿಯೋ ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದಾರೆ. ಹರಿಪ್ರಿಯಾಗೆ ಸುಂದರವಾಗಿ ಕಾಣುತ್ತೀರಾ. ಅಪ್ಪಟ ಭಾರತೀಯ ನಾರಿ ಅಂತೆಲ್ಲಾ ಕಮೆಂಟ್ಸ್ ಮಾಡುತ್ತಿದ್ದಾರೆ. ಆಗೇ ಮೂಗು ಚುಚ್ಚಿಸಿಕೊಳ್ಳುವಾಗ ಕಣ್ಣೀರಿಟ್ಟ ಹರಿಪ್ರಿಯಾಗೆ ಸ್ಟ್ರಾಂಗ್ ವುಮನ್ ಅಂತೆಲ್ಲಾ ಹೇಳುತ್ತಿದ್ದಾರೆ. ಇತ್ತ ನಟಿ ಕೂಡ ಭಾವನಾತ್ಮಕವಾಗಿ ಬೊಟ್ಟಿನ ಬಗ್ಗೆ ಬರೆದುಕೊಂಡಿದ್ದಾರೆ. " ಬದುಕಿನಲ್ಲಿ ಬದಲಾವಣೆ ಅನ್ನೋದು ನಿರಂತರ.. ನಾನು ಈ ಮೊದಲು ಸಿನಿಮಾಗಳಲ್ಲಿ ಹಲವು ಬಗೆಯ ಬೊಟ್ಟುಗಳನ್ನುತೊಟ್ಟಿದ್ದೇನೆ. ಆದರೆ ಈ ಬೊಟ್ಟು ನಿಜಕ್ಕೂ ಹೊಸತು. ಹಾಗೇ ಇದು ಎಂದೆಂದಿಗೂ ನನ್ನ ಅಚ್ಚುಮೆಚ್ಚಿನ ಬೊಟ್ಟು ಆಗಿರುತ್ತೆ." ಎಂದು ಹರಿಪ್ರಿಯಾ ಬರೆದುಕೊಂಡಿದ್ದಾರೆ.

ನೆಟ್ಟಿಗರಿಗೆ ಯಾಕೋ ಅನುಮಾನ?

ನೆಟ್ಟಿಗರಿಗೆ ಯಾಕೋ ಅನುಮಾನ?

ಹರಿಪ್ರಿಯಾ ಮೂಗು ಚುಚ್ಚಿಸಿಕೊಳ್ಳುವ ವಿಡಿಯೋಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ನಟಿಯನ್ನು ಹೊಗಳಿ ಅಟ್ಟಕ್ಕೆ ಏರಿಸಿದ್ದೇನೋ ನಿಜ. ಆದರೆ, ಹಾಗೇ ನೆಟ್ಟಿಗರಲ್ಲಿ ಅನುಮಾನ ಕೂಡ ಮೂಡಿದೆ. ಹರಿಪ್ರಿಯಾ ವಿವಾಹಕ್ಕೆ ಸಿದ್ಧರಾಗುತ್ತಿದ್ದಾರೆ. ಅದರ ಸಂಕೇತವೇ ಇದು ಅಂತ ಹೇಳುತ್ತಿದ್ದಾರೆ. ಅಂದ್ಹಾಗೆ ಹರಿಪ್ರಿಯಾ ಮದುವೆ ವಿಚಾರ ಚರ್ಚೆಯಾಗುತ್ತಿರೋದು ಇದೇ ಮೊದಲೇನಲ್ಲ. ಎರಡು-ಮೂರು ವರ್ಷಗಳ ಹಿಂದೆ ಕೂಡ ಮದುವೆ ವಿಚಾರವೇ ದೊಡ್ಡ ಚರ್ಚೆಯಾಗಿತ್ತು. ಆದರೆ, ಅದನ್ನು ಹರಿಪ್ರಿಯಾ ಆ ವೇಳೆ ಗಾಳಿಸುದ್ದಿಯನ್ನು ತಳ್ಳಿ ಹಾಕಿದ್ದರು.

ಹರಿಪ್ರಿಯಾ ಫುಲ್ ಬ್ಯುಸಿ

ಹರಿಪ್ರಿಯಾ ಫುಲ್ ಬ್ಯುಸಿ

ನಟಿ ಹರಿಪ್ರಿಯಾ ಸ್ಯಾಂಡಲ್‌ವುಡ್‌ನಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. ಕೈ ತುಂಬಾ ಸಿನಿಮಾಗಳಿದ್ದು, ಒಂದೊಂದೇ ಬಿಡುಗಡೆ ಸಜ್ಜಾಗುತ್ತಿವೆ. ಈಗಾಗಲೇ ಸುಮಾರು 8ಕ್ಕೂ ಹೆಚ್ಚು ಸಿನಿಮಾಗಳಿಗೆ ಹರಿಪ್ರಿಯಾ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಅಂತಿಗೆ ಸ್ಯಾಂಡಲ್‌ವುಡ್. ಇದರಲ್ಲಿ ತಮಿಳು ಸಿನಿಮಾ ಕೂಡ ಸೇರಿದ್ದು, ಇವೆಲ್ಲವೂ ಯಾವಾಗ ಬಿಡುಗಡೆಯಾಗುತ್ತವೆ ಅನ್ನೋ ಮಾಹಿತಿ ಮಾತ್ರ ಸದ್ಯಕ್ಕೆ ಇಲ್ಲ.

More from Filmibeat

English summary
Kannada Actress Haripriya Nose Piercing Is She Getting Ready For Marriage, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X