»   » ಹರಿಪ್ರಿಯಾ ಕೂಡ ಹೇಳಿದ್ರು 'ಈ ಸಲ ಕಪ್ ನಮ್ದೆ' ಅಂತ

ಹರಿಪ್ರಿಯಾ ಕೂಡ ಹೇಳಿದ್ರು 'ಈ ಸಲ ಕಪ್ ನಮ್ದೆ' ಅಂತ

Posted By:
Subscribe to Filmibeat Kannada
ಹರಿಪ್ರಿಯಾ ಕೂಡ ಹೇಳಿದ್ರು 'ಈ ಸಲ ಕಪ್ ನಮ್ದೆ' ಅಂತ | Filmibeat Kannada

ಐ ಪಿ ಎಲ್ ಹೊಸ ಆವೃತ್ತಿ ಶುರು ಆಗುವುದಕ್ಕೆ ಕೆಲವೇ ದಿನಗಳು ಬಾಕಿ ಇದೆ. ಆರ್ ಸಿ ಬಿ ಅಭಿಮಾನಿಗಳ ಅಬ್ಬರ ಈಗಾಗಲೇ ಜೋರಾಗಿದೆ. ಸಾಮಾಜಿಕ ಜಾಲತಾಣದಲ್ಲಿ 'ಈ ಸಲ ಕಪ್ ನಮ್ದೆ' ಎನ್ನುವ ಸ್ಲೋಗನ್ ಸಿಕ್ಕಾಪಟ್ಟೆ ಟ್ರೆಂಡ್ ಆಗಿದೆ. ಯಾವಾಗ ಫೇಸ್ ಬುಕ್ ನೋಡಿದರು ಅಲ್ಲಿ 'ಈ ಸಲ ಕಪ್ ನಮ್ದೆ' ಎನ್ನುವ ಪೋಸ್ಟ್ ಗಳು ಕಣ್ಣೀಗೆ ಬೀಳುತ್ತಿದೆ.

ಸದ್ಯ ಇದೀಗ ನಟಿ ಹರಿಪ್ರಿಯಾ ಬಾಯಲ್ಲಿ ಕೂಡ 'ಈ ಸಲ ಕಪ್ ನಮ್ದೆ' ಎನ್ನುವ ಮಾತು ಬಂದಿದೆ. ನಟಿ ಹರಿಪ್ರಿಯಾ ಇಂದು ಬೆಂಗಳೂರಿನ ದಯಾನಂದ್ ಸಾಗರ್ ಕಾಲೇಜಿನ ಫೆಸ್ಟ್ ಕಾರ್ಯಕ್ರಮಕ್ಕೆ ಅತಿಥಿಯಾಗಿ ಹೋಗಿದ್ದರು. ಈ ವೇಳೆ ಅಲ್ಲಿನ ವಿದ್ಯಾರ್ಥಿಗಳ ಜೊತೆಗೆ ಫೇಸ್ ಬುಕ್ ಲೈವ್ ಬಂದಿದ್ದ ಹರಿಪ್ರಿಯಾ ವಿದ್ಯಾರ್ಥಿಗಳ ಸ್ಪರ್ಧೆಗೆ ಶುಭಕೋರಿದರು. ನಂತರ 'ಈ ಸಲ ಕಪ್ ನಮ್ದೆ' ಎಂದು ಹೇಳಿ ಆರ್ ಸಿ ಬಿ ಹುಡುಗರಿಗೆ ವಿಶ್ ಮಾಡಿದ್ದಾರೆ.

ಹರಿಪ್ರಿಯಾ ಇನ್ನು ಮುಂದೆ ಕುಸುಮ ಬಾಲೆ

Kannada actress Haripriya said Ee Sala Cup Namde slogan

ಎಲ್ಲ ಕಡೆ ಹರಿದಾಡುತ್ತಿರುವ 'ಈ ಸಲ ಕಪ್ ನಮ್ದೆ' ಸ್ಲೋಗನ್ ಅನ್ನು ಹರಿಪ್ರಿಯಾ ಕೂಡ ಇದೀಗ ಹೇಳಿದ್ದಾರೆ. ಐ ಪಿ ಎಲ್ 11 ಸೀಸನ್ ದೊಡ್ಡ ಕ್ರೇಜ್ ಹುಟ್ಟುಕೊಂಡಿದ್ದು, ಏಪ್ರಿಲ್ 7 ರಿಂದ ರಿಯಲ್ ಆಟ ಶುರು ಆಗಲಿದೆ. ಕ್ರಿಕೆಟ್ ಪ್ರೇಮಿಗಳ ಜೊತೆಗೆ ಹರಿಪ್ರಿಯಾ ಕೂಡ ಆರ್ ಸಿ ಬಿ ಪಂದ್ಯ ನೋಡುವ ತವಕದಲ್ಲಿ ಇದ್ದಾರೆ. ಇನ್ನು ಹರಿಪ್ರಿಯಾ ಸದ್ಯ ಜಯತೀರ್ಥ ನಿರ್ದೇಶನದ 'ಬೆಲ್ ಬಾಟಂ' ಸಿನಿಮಾದಲ್ಲಿ ಬಿಜಿ ಇದ್ದಾರೆ.

English summary
Kannada actress Haripriya said 'Ee Sala Cup Namde' slogan.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X