1001 ಮೆಟ್ಟಿಲುಗಳನ್ನು ಏರಿ ಚಾಮುಂಡಿ ದೇವಿಯ ದರ್ಶನ ಪಡೆದ ನಟಿ ಹರಿಪ್ರಿಯಾ
Recommended Video

ಮೈಸೂರು, ಅಕ್ಟೋಬರ್ 16 : ನಾಡಹಬ್ಬ ದಸರಾ ಹಿನ್ನೆಲೆ ನಿನ್ನೆ ಮೈಸೂರಿಗೆ ಆಗಮಿಸಿದ್ದ ಸ್ಯಾಂಡಲ್ ವುಡ್ ನಟಿ ಹರಿಪ್ರಿಯಾ ಇಂದು ಬೆಳಗ್ಗೆ ಚಾಮುಂಡಿ ಬೆಟ್ಟವನ್ನು ಹತ್ತಿ ದೇವಿಯ ದರ್ಶನ ಪಡೆದಿದ್ದಾರೆ.
ಈಗಾಗಲೇ ಹಲವು ನಟರು ಮೈಸೂರಿಗೆ ಬಂದಾಗ ಚಾಮುಂಡಿ ತಾಯಿಯ ದರ್ಶನ ಮಾಡಲು ಮೆಟ್ಟಿಲು ಹತ್ತುತ್ತಾರೆ. ಇದೀಗ ಅದೇ ಸಾಲಿನಲ್ಲಿ ನಟಿ ಹರಿಪ್ರಿಯಾ ಕೂಡ ಸೇರಿದ್ದಾರೆ.
ಯುವ ದಸರಾ ಕಾರ್ಯಕ್ರಮಕ್ಕಾಗಿ ಮೈಸೂರಿಗೆ ಆಗಮಿಸಿದ್ದ ನಟಿ ಹರಿಪ್ರಿಯಾ ಮಂಗಳವಾರ ಚಾಮುಂಡಿ ಬೆಟ್ಟದ ತಪ್ಪಲಿನಿಂದ 1,001 ಮೆಟ್ಟಿಲುಗಳನ್ನ ಹತ್ತಿ ತಾಯಿಯ ದರ್ಶನ ಪಡೆದರು.

ಇದೇ ವೇಳೆ ಮಾತನಾಡಿದ ಅವರು, ''ನಾನು ಎರಡನೇ ಬಾರಿ ಬೆಟ್ಟವನ್ನು ಹತ್ತಿದ್ದೇನೆ. ಮೈಸೂರೆಂದರೆ ನನಗೆ ಇಷ್ಟದ ಊರು. ಬೆಟ್ಟ ಹತ್ತವುದು ನನಗೆ ಇಷ್ಟ'' ಎಂದರು.
ನಿನ್ನೆ ನಡೆದ ಯುವ ದಸರಾ ಕಾರ್ಯಕ್ರಮ ಅಕ್ಷರಶಃ ಸ್ಯಾಂಡಲ್ ವುಡ್ ಬೆಡಗಿಯರಿಂದ ಹಾಗೂ ಸಂಗೀತ ಗಾಯಕರಿಂದ ರಂಗೇರಿತ್ತು. ಮೈಸೂರು ಮಹಾರಾಜ ಕಾಲೇಜು ಮೈದಾನದಲ್ಲಿ ರಾತ್ರಿ ನಡೆದ ನಾಲ್ಕನೇ ದಿನದ ಯುವ ದಸರಾ ಕಾರ್ಯಕ್ರಮದಲ್ಲಿ ಸ್ಯಾಂಡಲ್ ವುಡ್ ಬೆಡಗಿಯರು ಮಾಡಿದ ಡ್ಯಾನ್ಸ್ ಗೆ ಪಡ್ಡೆಹೈಕಳಂತು ಹುಚ್ಚೆದ್ದು ಕುಣಿದರು. ನಟಿಯರಾದ ಹರಿಪ್ರಿಯಾ, ಶುಭಾಪುಂಜಾ, ಸೋನುಗೌಡ ಹಾಗೂ ಇನ್ನಿತರ ನಟಿಯರ ಡ್ಯಾನ್ಸ್ ದಸರಾ ಸಂಭ್ರಮವನ್ನು ಇಮ್ಮಡಿಗೊಳಿಸಿತ್ತು.


Click it and Unblock the Notifications











