ಕನ್ನಡಿಗರ ಕುತೂಹಲ ಕೆರಳಿಸಿದ ಹರಿಪ್ರಿಯಾ ಕಾರಣವಿಲ್ಲದ ಕೈಬರಹ

ಸ್ಯಾಂಡಲ್ ವುಡ್ ನಟಿ ಹರಿಪ್ರಿಯಾ ಸದ್ಯ ವಿದೇಶಿ ಪಯಣದಲ್ಲಿದ್ದಾರೆ. ರಜೆಯ ಮಜೆಯಲ್ಲಿ ಇರುವ ಹರಿಪ್ರಿಯಾ ಈಗ ಕನ್ನಡರಿಗೆ ದಿಢೀರ್ ಪತ್ರವೊಂದನ್ನು ಬರೆದು ಕುತೂಹಲ ಕೆರಳಿಸಿದ್ದಾರೆ. ಇತ್ತೀಚಿಗೆ ಅನೇಕ ನಟಿಮಣಿಯರ ವಿರುದ್ಧ ಕನ್ನಡ ಮಾತನಾಡಲು ಬರಲ್ಲ. ಅವರು ಕನ್ನಡ ವಿರೋದಿಗಳು ಎನ್ನುವ ಮಾತುಗಳು ಕೇಳಿ ಬರುತ್ತಿರುವ ಈ ಸಮಯದಲ್ಲಿ ಹರಿಪ್ರಿಯಾ ಪತ್ರ ಅಚ್ಚರಿ ಮೂಡಿಸಿದೆ.

ಹೌದು, ಹರಿಪ್ರಿಯಾ ಅಪ್ಪಟ ಕನ್ನಡತಿ ಎನ್ನುವ ವಿಚಾರ ಎಲ್ಲರಿಗೂ ಗೊತ್ತಿರುವುದೆ. ಕನ್ನಡತಿ ಆದರೆ ಸಾಲದು ಕನ್ನಡ ಕೂಡ ತುಂಬಾ ಚೆನ್ನಾಗಿ ಮಾತನಾಡುತ್ತಾರೆ. ಬೇರೆ ಬೇರೆ ಭಾಷೆಯಲ್ಲಿ ಬಣ್ಣ ಹಚ್ಚಿರುವ ಹರಿಪ್ರಿಯಾ ಕನ್ನಡವನ್ನು ಮರೆತ್ತಿಲ್ಲ. ಆದ್ರೆ ಈಗ ಯಾಕೆ ಕನ್ನಡಿಗರಿಗೆ, ಕನ್ನಡಾಭಿಮಾನಿಗಳಿಗೆ ದಿಢೀರನೆ ಪತ್ರ ಬರೆದಿದ್ದಿದ್ದಾರೆ ಎನ್ನುವುದು ಕುತೂಹಲ ಮೂಡಿಸಿದೆ.

ಕನ್ನಡ ಓದಲು, ಬರೆಯಲು, ಮಾತನಾಡಲು ಬರುತ್ತದೆ

ಕನ್ನಡ ಓದಲು, ಬರೆಯಲು, ಮಾತನಾಡಲು ಬರುತ್ತದೆ

ಅಂದಹಾಗೆ ಈ ಪತ್ರದಲ್ಲಿ ಒಂದಿಷ್ಟು ಅಂಶಗಳನ್ನು ಬರೆದಿದ್ದಾರೆ. "ನನಗೆ ಕನ್ನಡ ಓದಲು, ಬರೆಯಲು, ಮಾತನಾಡಲು ತುಂಬಾ ಚೆನ್ನಾಗಿ ಬರುತ್ತದೆ. ಇದು ನನ್ನ ಬರಹ" ಎಂದು ಪ್ರಾರಂಭಿಸಿರುವ ಹರಿಪ್ರಿಯಾ, "ಕೆಲ ಅಭಿಮಾನಿಗಳು ನಾನು ಮಾಡುವ ಪೋಸ್ಟ್ ಗಳಿಗೆ ಕಮೆಂಟ್ ಮಾಡುವಾಗ ಕನ್ನಡದಲ್ಲಿ ಬರೆಯಿರಿ ಎಂದು ಹೇಳುತ್ತಾರೆ" ಹಾಗಾಗಿಯೆ ಅಭಿಮಾನಿಗಳ ಪ್ರಶ್ನೆಗೆ ದೀರ್ಘವಾದ ಪತ್ರದ ಮೂಲಕ ಉತ್ತರಿಸಿದ್ದಾರೆ ಹರಿಪ್ರಿಯಾ.

ಎಲ್ಲಾ ಭಾಷೆಯಲ್ಲು ಅಭಿಮಾನಿಗಳು ಇದ್ದಾರೆ

ಎಲ್ಲಾ ಭಾಷೆಯಲ್ಲು ಅಭಿಮಾನಿಗಳು ಇದ್ದಾರೆ

ನನಗೆ ಎಲ್ಲಾ ಭಾಷೆಯಲ್ಲು ಅಭಿಮಾನಿಗಳು ಇದ್ದಾರೆ. ಕನ್ನಡ ಜೊತೆಗೆ ತಮಿಳು, ತೆಲುಗು, ಮಲಯಾಳಂ, ಅಭಿಮಾನಿಗಳಿದ್ದಾರೆ. ಎಲ್ಲರಿಗೂ ನಾನು ಹೇಳ ಹೊರಟಿರುವುದು ಮುಟ್ಟಲಿ ಎಂದು. ಎಲ್ಲರಿಗೂ ಅರ್ಥವಾಗಲಿ ಎಂದು. ಹಾಗೆ ಕನ್ನಡ ಬರೆಯುವಾಗ ಒತ್ತು, ದೀರ್ಗ ತಪ್ಪಾಗುತ್ತವೆ. ಅಲ್ಲದೆ ಎಲ್ಲೊ ಶೂಟಿಂಗ್ ಅಲ್ಲಿ ಇದ್ದಾಗ ದೀರ್ಘವಾಗಿ ಟೈಪ್ ಮಾಡಲು ಸಮಯ ಇರುವದಿಲ್ಲ ಈ ಕಾರಣಕ್ಕಾಗಿ ಕನ್ನಡದಲ್ಲಿ ಪೋಸ್ಟ್ ಮಾಡಲ್ಲ" ಎಂದು ಕನ್ನಡಭಿಮಾನಿಗಳ ಮನ ಮಟ್ಟುವಂತೆ ಮುದ್ದಾದ ಕನ್ನಡ ಬಹರದಲ್ಲಿ ಬರೆದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

ನಿಮ್ಮ ಬರಹ ತುಂಬಾ ಮುದ್ದಾಗಿದೆ

ನಿಮ್ಮ ಬರಹ ತುಂಬಾ ಮುದ್ದಾಗಿದೆ

ಹರಿಪ್ರಿಯಾ ಪತ್ರಕ್ಕೆ ಅನೇಕ ಅಭಿಮಾನಿಗಳು ಪ್ರತಿಕ್ರೆಯೆ ನೀಡುತ್ತಿದ್ದಾರೆ. "ನಿಮ್ಮ ಬರಹ ತುಂಬಾ ಮುದ್ದಾಗಿದೆ", "ನಿಮ್ಮ ಕನ್ನಡ ಅಭಿಮಾನಕ್ಕೆ ಧನ್ಯಾವಾದಗಳು" ಎಂದು ಹೇಳುತ್ತಿದ್ದಾರೆ.

ಬೇರೆನಟಿಯರಿಗೆ ಟ್ಯಾಗ್ ಮಾಡಿ

ಬೇರೆನಟಿಯರಿಗೆ ಟ್ಯಾಗ್ ಮಾಡಿ

ಜೊತೆಗೆ ಒಂದಿಷ್ಟು ಮಂದಿ ಮತ್ತೆ ರಶ್ಮಿಕಾ ಕಾಲನ್ನು ಎಳೆದಿದ್ದಾರೆ. ಅಲ್ಲದೆ "ಇದನ್ನು ಬೇರೆಯವರಿಗೆ ಟ್ಯಾಗ್ ಮಾಡಿ ಅವರಿಗೂ ಕನ್ನಡ ಬರೆಯಲಿಕ್ಕೆ ಬರುತ್ತಾ ಎಂದು ನೋಡೋಣ" ಎಂದು ಕಮೆಂಟ್ ಮಡುತ್ತಿದ್ದಾರೆ. ನಟಿಯರು ಕನ್ನಡ ಮಾತನಾಡುವ ಬಗ್ಗೆ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದ್ದ ಈ ಸಮಯದಲ್ಲಿ ಹರಿಪ್ರಿಯಾ ಪೋಸ್ಟ್ ಅಚ್ಚರಿ ಮೂಡಿಸಿದೆ.

More from Filmibeat

English summary
Kannada actress Haripriya wrote a letter for her Fans in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X