ಮನೆಗೆ ಹೊಸ ಅತಿಥಿಯನ್ನು ಸ್ವಾಗತಿಸಿದ ಹರ್ಷಿಕಾ- ಭುವನ್ ದಂಪತಿ

ಸ್ಯಾಂಡಲ್‌ವುಡ್‌ನಲ್ಲಿ ಒಂದಷ್ಟು ವಿವಾದಗಳು, ಕಹಿ ಸುದ್ದಿ ನಡುವೆಯೂ ಸಿಹಿಸುದ್ದಿ ಆಗಾಗ್ಗೆ ಕಿವಿಮೇಲೆ ಬೀಳುತ್ತಿದೆ. ಇತ್ತೀಚೆಗೆ ನಟಿ ಕವಿತಾ ಗೌಡ ಗಂಡು ಮಗುವಿಗೆ ಜನ್ಮ ನೀಡಿದ್ದರು. ಇದೀಗ ನಟಿ ಹರ್ಷಿಕಾ ಪೂಣಚ್ಚ ಕುಟುಂಬ ಹೆಣ್ಣು ಮಗುವನ್ನು ಬರಮಾಡಿಕೊಂಡಿದೆ.

ಕಳೆದ ವರ್ಷ ನಟ ಭುವನ್ ಪೊನ್ನಣ್ಣ ಜೊತೆ ಹರ್ಷಿಕಾ ಪೂಣಚ್ಚ ಹಸೆಮಣೆ ಏರಿದ್ದರು. ಕೆಲ ದಿನಗಳ ಹಿಂದೆ ತಾವು ಗರ್ಭಿಣಿ ಆಗಿರುವ ಸಿಹಿಸುದ್ದಿ ಹಂಚಿಕೊಂಡಿದ್ದರು. ಬಳಿಕ ಸಾಕಷ್ಟು ಬೇಬಿ ಬಂಪ್ ಫೋಟೊಶೂಟ್‌ ಮಾಡಿಸಿದ್ದರು. ಆ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಮೊನ್ನೆ ಮೊನ್ನೆ ರವಿವರ್ಮನ ಹಂಸ ದಮಯಂತಿ ಥೀಮ್‌ನಲ್ಲಿ ಸ್ಪೆಷಲ್ ಫೋಟೊಶೂಟ್ ಮಾಡಿಸಿ ಸಂಭ್ರಮಿಸಿದ್ದರು.

Kannada actress Harshika Poonacha and husband Bhuvan Ponnannaa welcome baby girl

ಇಂದು(ಅಕ್ಟೋಬರ್ 4) ಬೆಳಗಿನ ಜಾವ 3 ಗಂಟೆಗೆ ಹರ್ಷಿಕಾ ಹಾಗೂ ಭುವನ್ ಮಗಳನ್ನು ಬರ ಮಾಡಿಕೊಂಡಿಕೊಂಡಿದ್ದಾರೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿ ಹರ್ಷಿಕಾ ದಾಖಲಾಗಿದ್ದಾರೆ. ಹೆಣ್ಣು ಮಗುವಿನ ಆಗಮನದಿಂದ ಹರ್ಷಿಕಾ ಹಾಗೂ ಭುವನ್ ಕುಟುಂಬಸ್ಥರು ಸಂತಸಗೊಂಡಿದ್ದಾರೆ.

ಹರ್ಷಿಕಾ ಹಾಗೂ ಭುವನ್ 10 ವರ್ಷಗಳ ಹಿಂದೆ ಫ್ಯಾಷನ್ ಶೋವೊಂದರಲ್ಲಿ ಮೊದಲ ಬಾರಿ ಭೇಟಿ ಆಗಿದ್ದರು. ಅಲ್ಲೇ ಶುರುವಾದ ಪರಿಚಯ ಬಳಿಕ ಪ್ರೀತಿಗೆ ತಿರುಗಿತ್ತು. ಆಗಾಗ್ಗೆ ಒಟ್ಟೊಟ್ಟಿಗೆ ಕಾಣಿಸಿಕೊಂಡರೂ ತಮ್ಮ ಪ್ರೀತಿ ಬಗ್ಗೆ ಹೇಳಿಕೊಂಡಿರಲಿಲ್ಲ. ಬೆಸ್ಟ್ ಫ್ರೆಂಡ್ಸ್ ಎನ್ನುವಂತೆಯೇ ಇದ್ದರು. ಹರ್ಷಿಕಾಗೆ ಮೊದಲು ಭುವನ್ ಪ್ರಪೋಸ್ ಮಾಡಿದ್ದರು. ಒಂದು ದಿನದಲ್ಲಿ ಉತ್ತರಿಸುವಂತೆ ಹೇಳಿದ್ದರಂತೆ.

ಮೊದಲ ನೋಟದಲ್ಲೇ ಭುವನ್ ಬಗ್ಗೆ ಉತ್ತಮ ಅಭಿಪ್ರಾಯ ಇದ್ದಿದ್ದರಿಂದ ಹರ್ಷಿಕಾ ಕೂಡ ಪ್ರಪೋಸಲ್‌ಗೆ ಸಮ್ಮತಿಸಿದ್ದರು. ಭುವನ್ ಬಗ್ಗೆ ಹರ್ಷಿಕಾ ಕುಟುಂಬಸ್ಥರಿಗೂ ಉತ್ತಮ ಅಭಿಪ್ರಾಯ ಇತ್ತು. ಹಾಗಾಗಿ ಯಾವುದೇ ಸಮಸ್ಯೆ ಇಲ್ಲದೇ ಎರಡೂ ಕುಟುಂಬಗಳು ಇಬ್ಬರ ಮದುವೆಗೆ ಒಪ್ಪಿಗೆ ಸೂಚಿಸಿತ್ತು. ಇಬ್ಬರೂ ಕರಿಯರ್ ಬಗ್ಗೆ ಗಮನ ಹರಿಸಿದ್ದರಿಂದ ಮದುವೆ ಆಗಲು ತಡಮಾಡಿದ್ದರು.

ಸ್ನೇಹಿತರಿಗೆ ಹರ್ಷಿಕಾ ಹಾಗೂ ಭುವನ್ ಲವ್ ಸ್ಟೋರಿ ಗೊತ್ತಿತ್ತು. ಕಳೆದ ವರ್ಷ ಆಗಸ್ಟ್ 23- 24ರಂದು ವಿರಾಜ್‌ಪೇಟೆಯಲ್ಲಿ ಅದ್ಧೂರಿಯಾಗಿ ಇಬ್ಬರ ಮದುವೆ ನಡೆದಿತ್ತು. ಕೊಡವ ಸಂಪ್ರದಾಯದಂತೆ ಮದುವೆ ಶಾಸ್ತ್ರಗಳು ನೆರವೇರಿದ್ದವು. ಚಿತ್ರರಂಗದ ತಾರೆಯರು ಕೂಡ ಭಾಗಿ ಆಗಿ ನವಜೋಡಿಗೆ ಹರಿಸಿದ್ದರು.

ಕೆಲ ದಿನಗಳ ಹಿಂದೆ ಗೋಲ್ಡನ್ ಸ್ಟಾರ್ ಗಣೇಶ್ ಮನೆಯಲ್ಲಿ ಹರ್ಷಿಕಾ ಪೂಣಚ್ಚ ಬೇಬಿ ಶವರ್ ಪಾರ್ಟಿ ನಡೆದಿತ್ತು. ಗಣಿ-ಶಿಲ್ಪಾ ಕುಟುಂಬಕ್ಕೆ ಹರ್ಷಿಕಾ ಬಹಳ ಆಪ್ತರು. ಆಗಾಗ್ಗೆ ಅವರ ಮನೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಚಿತ್ರರಂಗದ ಸ್ನೇಹಿತರ ಜೊತೆ ಹರ್ಷಿಕಾ ಸಹ ಭಾಗಿ ಆಗುತ್ತಿರುತ್ತಾರೆ. ಹಾಗಾಗಿ ಶಿಲ್ಪಾ ಗಣೇಶ್ ನೇತೃತ್ವದಲ್ಲಿ ಬೇಬಿ ಶವರ್ ಕಾರ್ಯಕ್ರಮ ಆಯೋಜಿಸಲಾಗಿತ್ತು.

ನಟಿಯರಾದ ಮಾಲಾಶ್ರೀ, ಪುತ್ರಿ ಆರಾಧನಾ, ಶ್ರುತಿ, ಪ್ರಿಯಾಂಕ ಉಪೇಂದ್ರ, ಶರಣ್ಯ ಶೆಟ್ಟಿ, ಅನು ಪ್ರಭಾಕರ್ ಹೀಗೆ ಸಾಕಷ್ಟು ಜನ ಈ ಬೇಬಿ ಶವರ್ ಪಾರ್ಟಿಯಲ್ಲಿ ಭಾಗಿ ಆಗಿದ್ದರು. ಹರ್ಷಿಕಾಗೆ ಶುಭ ಹಾರೈಸಿ ಕುಣಿಸು ಕುಪ್ಪಳಿಸಿ ಸಂಭ್ರಮಿಸಿದ್ದರು.

'ಪಿಯುಸಿ' ಎನ್ನುವ ಸಿನಿಮಾ ಮೂಲಕ ಹರ್ಷಿಕಾ ಚಿತ್ರರಂಗಕ್ಕೆ ಬಂದಿದ್ದರು. ಬಳಿಕ ಒಂದಷ್ಟು ಸಿನಿಮಾಗಳಲ್ಲಿ ನಾಯಕಿಯಾಗಿ ಪೋಷಕ ನಟಿಯಾಗಿ ಮಿಂಚಿದ್ದರು. ಪುನೀತ್ ರಾಜ್‌ಕುಮಾರ್ ನಟನೆಯ'ಜಾಕಿ' ಚಿತ್ರದಲ್ಲಿ ಒಂದೊಳ್ಳೆ ಪಾತ್ರ ಸಿಕ್ಕಿತ್ತು.

ಕಳೆದ ವರ್ಷ ಬಂದ 'ಮಾರಕಾಸ್ತ್ರ' ಚಿತ್ರದಲ್ಲಿ ಕೊನೆಯ ಬಾರಿಗೆ ಹರ್ಷಿಕಾ ಬಣ್ಣ ಹಚ್ಚಿದ್ದರು. 'ಉನ್ ಕಾದಲ್ ಇರುಂದಾಲ್' ಎನ್ನುವ ತಮಿಳು ಚಿತ್ರದಲ್ಲಿ ಕೂಡ ಆಕೆ ಬಣ್ಣ ಹಚ್ಚಿದ್ದು ಶೀಘ್ರದಲ್ಲೇ ರಿಲೀಸ್ ಆಗಲಿದೆ. ಇನ್ನು ಭುವನ್ ಪೊನ್ನಣ್ಣ 'ಜಸ್ಟ್ ಮಾತ್‌ ಮಾತಲ್ಲಿ' ಚಿತ್ರದಲ್ಲಿ ಮಿಂಚಿದ್ದರು. ಬಿಗ್‌ಬಾಸ್ ಸೀಸನ್ 4ರ ಸ್ಪರ್ಧಿಯಾಗಿದ್ದರು.

More from Filmibeat

English summary
Harshika Poonacha, Bhuvan Ponnannaa welcome first child deets inside
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X