ರವಿವರ್ಮನ ಬೊಂಬೆಯಾದ ಹರ್ಷಿಕಾ ಪೂಣಚ್ಚ,ಮುದ್ದು ಕಂದಮ್ಮನ ಆಗಮನಕ್ಕೆ ದಿನಗಣನೆ..!

By ಪೂರ್ವ

ಸ್ಯಾಂಡಲ್ ವುಡ್ ನ ಕ್ಯೂಟ್ ಜೋಡಿ ಹರ್ಷಿಕಾ ಪೂಣಚ್ಚ ಹಾಗೂ ಭುವನ್ ಪೊನ್ನಣ್ಣ ಇವರ ಜೋಡಿ. ಇದೀಗ ಈ ಜೋಡಿ ಮುದ್ದಾದ ಮಗುವಿನ ಬರುವಿಕೆಯ ಕಾತರದಲ್ಲಿದ್ದಾರೆ. ಹಾಗೆಯೇ ಹರ್ಷಿಕಾ ಪೂಣಚ್ಚ ಬಹಳ ಖುಷಿಯಲ್ಲಿ ಇದ್ದಾರೆ. ಪುಟ್ಟ ಮಗುವನ್ನು ವೆಲ್ ಕಂ ಮಾಡಲು ಸಜ್ಜಾಗಿದ್ದಾರೆ ತುಂಬು ಗರ್ಭಿಣಿ ಆಗಿರುವ ಹರ್ಷಿಕಾ ಇದೀಗ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. ಇನ್ನೂ ಹರ್ಷಿಕಾ ಹಲವು ಕಾರ್ಯಕ್ರಮಗಳಲ್ಲಿ ಬಹಳ ಲವ ಲವಿಕೆಯಿಂದ ಭಾಗವಹಿಸುತ್ತಿದ್ದಾರೆ ಕೂಡ.

ಇನ್ನೂ ಜು.2ರಂದು ಕೊಡಗು ಶೈಲಿಯಲ್ಲಿ ಬೇಬಿ ಬಂಪ್ ಫೋಟೋಶೂಟ್ ಮಾಡಿಸಿ ತಾಯಿಯಾಗುತ್ತಿರುವ ವಿಚಾರವನ್ನು ಹರ್ಷಿಕಾ ಭುವನ್ ದಂಪತಿ ರಿವೀಲ್ ಮಾಡಿದ್ದಾರೆ. ಅವರು ಬಹಳ ಡಿಫರೆಂಟ್ ಆಗಿ ಈ ವಿಚಾರವನ್ನು ಅಭಿಮಾನಿಗಳಿಗೆ ತಿಳಿಸಿದರು. ಇದೀಗ ಮತ್ತೊಮ್ಮೆ ಡಿಫರೆಂಟ್ ಲುಕ್ ನಲ್ಲಿ ಹರ್ಷಿಕಾ ಪೂಣಚ್ಚ ಕಾಣಿಸಿಕೊಂಡಿದ್ದಾರೆ. ಹೌದು ನಟಿ ಇದೀಗ ಬೇಬಿ ಬಂಪ್ ಫೋಟೋ ಶೂಟ್ ಮಾಡಿಸುತ್ತಿದ್ದಾರೆ. ರವಿವರ್ಮ ಪೇಟಿಂಗ್ ಥೀಮ್‌ನಲ್ಲಿ ಸುಂದರವಾಗಿ ಪ್ರೆಗ್ನೆನ್ಸಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ.

kannada actress harshika poonacha photo viral

ಪಿಂಕ್ ಸೀರೆಯಲ್ಲಿ ಮಿಂಚಿದ ಹರ್ಷಿಕಾ ನೋಡಲು ಸಖತ್ ಕ್ಯೂಟ್ ಆಗಿ ಕಾಣಿಸುತ್ತಿದ್ದಾರೆ. ಸಿಂಪಲ್ ಲುಕ್‌ನಲ್ಲಿ ಮಿಂಚಿದ ನಟಿಯ ಸೌಂದರ್ಯ ನೋಡಿದ ಅಭಿಮಾನಿಗಳು ಭಾರತೀಯ ನಾರಿ ಎಂದರೆ ಹೀಗೆ ಇರಬೇಕು. ನಮ್ಮ ಸಂಸ್ಕೃತಿಯನ್ನು ನೀವು ಉಳಿಸಿ ಬೆಳೆಸಿಕೊಂಡು ಹೋಗುತ್ತಿದ್ದಿರಾ ನಿಮಗೆ ಒಳ್ಳೆಯದಾಗಲಿ ಎಂದು ಅಭಿಮಾನಿಗಳು ಶುಭ ಕೋರಿದ್ದಾರೆ.

ಹರ್ಷಿಕಾ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್

ಇನ್ನೂ ಹರ್ಷಿಕಾ ಪೂಣಚ್ಚ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು ಸಖತ್ ಟ್ರೆಂಡ್ ಸೃಷಿ ಮಾಡುತ್ತಿದ್ದೆ. ಇವರ ಫೋಟೋ ಗೆ ಸಾಕಷ್ಟು ಲೈಕ್ ಕಾಮೆಂಟ್ ಮಾಡುತ್ತಿದ್ದಾರೆ. ಇನ್ನೂ ಹಲವಾರು ಜನ ಹರ್ಷಿಕಾ ಅವರಿಗೆ ಗಂಡು ಮಗು ಆಗುತ್ತೆ ಎಂದು ಹೇಳುತ್ತಾರೆ. ಇನ್ನೂ ಕೆಲವರು ಹರ್ಷಿಕಾ ಸಾರಿ ಬಣ್ಣ ನೋಡಿ ನಿಮಗೆ ಹೆಣ್ಣು ಮಗು ಆಗುತ್ತದೆ ಎಂದು ಹೇಳುತ್ತಿದ್ದಾರೆ. ಇನ್ನೂ ಅನೇಕ ಜನರು ರವಿವರ್ಮ ಫೇಟಿಂಗ್ ಥರನೇ ಕಾಣಿಸುತ್ತಿದೆ. ಫೋಟೋ ಮಾತ್ರ ಬಹಳ ಚೆನ್ನಾಗಿ ಮೂಡಿ ಬಂದಿದೆ ಎಂದು ಹೇಳಿದ್ದಾರೆ.

ಹಲವು ಭಂಗಿಯಲ್ಲಿ ಫೋಟೋ ಶೂಟ್ ಮಾಡಿಸಿಕೊಂಡ ನಟಿ

ಹರ್ಷಿಕಾ ಏನಾದರು ಡಿಫರೆಂಟ್ ಲುಕ್ ನಲ್ಲಿ ಕಾಣಿಸುತ್ತಿರುತ್ತಾರೇ. ಇವರ ಈ ಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ . ತಾವು ತಾಯಿ ಆಗುತ್ತಿರುವ ವಿಚಾರ ಹಾಗೆಯೇ ಫೋಟೋ ಶೂಟ್ ಮಾಡಿಸಿಕೊಂಡಿದ್ದು ಕೂಡ ತುಂಬಾ ಡಿಫರೆಂಟ್ ಆಗಿ ಜನರಿಗೆ ಇಷ್ಟ ಆಗುವ ಹಾಗೆ ನಡೆದುಕೊಂಡಿದ್ದಾರೆ. ಇದರಿಂದ ಹರ್ಷಿಕಾ ಫ್ಯಾನ್ಸ್ ಹರ್ಷಿಕಾ ಹಾಗೂ ಭುವನ್ ಮಗುವಿನ ಆಗಮನದ ಖುಷಿಯಲ್ಲಿದ್ದಾರೆ.

ಸೀರೆಯಲ್ಲಿ ಅದ್ಭುತವಾಗಿ ಕಾಣಿಸಿಕೊಂಡ ನಟಿ

ಇನ್ನೂ ಹರ್ಷಿಕಾ ಪಿಂಕ್ ಬಣ್ಣದ ಸೀರೆಯುಟ್ಟು ನೆಕ್ಲೆಸ್ ಹಾಗೆಯೇ ಇನ್ನೂ ಕೆಲವು ಆಭರಣ ಹಾಕಿ ಮೂಗಿಗೆ ಮೂಗುತಿ ಹಾಕಿ ವಿವಿಧ ಭಂಗಿಗಳಲ್ಲಿ ನಟಿ ಪೋಸ್ ನೀಡಿದ್ದಾರೆ. ವಿಭಿನ್ನ ರೀತಿಯಲ್ಲಿ ನಟಿ ಬೇಬಿ ಬಂಪ್ ಫೋಟೋಶೂಟ್ ಕೂಡ ಮಾಡಿಸಿದ್ದಾರೆ. ಇನ್ನೂ ಹರ್ಷಿಕಾ ಇದೀಗ ತುಂಬು ಗರ್ಭಿಣಿ ಆಗಿದ್ದು ಚೊಚ್ಚಲ ಮಗುವಿನ ಆಗಮನದ ಖುಷಿಯಲ್ಲಿ ಇದ್ದಾರೆ. ಹಾಗೆಯೇ ಅಭಿಮಾನಿಗಳು ಧೈರ್ಯವಾಗಿರಿ, ನಿಮಗೆ ಶುಭವಾಗಲಿ ಎಂದು ಹಾರೈಸಿದ್ದಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X