ರಂಗೋಲಿ ಚಿತ್ರದ ನಾಯಕನನ್ನ ಮದುವೆಯಾದ ನಟಿ ಹೇಮಾ ಪಂಚಮುಖಿ
Recommended Video

'ಅಮೇರಿಕಾ ಅಮೇರಿಕಾ' ಸಿನಿಮಾ ನೋಡಿದ ಪ್ರತಿಯೊಬ್ಬರು ಭೂಮಿ ಪಾತ್ರದ ನಾಯಕಿಯನ್ನ ತುಂಬಾ ಇಷ್ಟ ಪಟ್ಟಿದ್ದರು. 'ದೊರೆ', 'ಅಮೇರಿಕಾ ಅಮೇರಿಕಾ', 'ರವಿಮಾಮ' ಹೀಗೆ ಇನ್ನೂ ಅನೇಕ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದ ನಟಿ ಹೇಮಾ ಪಂಚಮುಖಿ ಮದುವೆ ಆಗಿದ್ದಾರೆ.
ಅರೆ, ಈ ಹಿಂದೆಯೇ ಅವರಿಗೆ ಮದುವೆ ಆಗಿತಲ್ವಾ ಅಂತ ಯೋಚನೆ ಮಾಡಬೇಡಿ..ನಟಿ ಹೇಮಾ 'ರಂಗೋಲಿ' ಸಿನಿಮಾದಲ್ಲಿ ಅಭಿನಯಿಸಿದ ನಟ ಪ್ರಶಾಂತ್ ರನ್ನ ಎರಡನೇ ಮದುವೆ ಆಗಿದ್ದಾರೆ. ಈ ವಿಚಾರವನ್ನ ಖುದ್ದು ಹೇಮಾ ಅವರೇ ತಮ್ಮ ಫೇಸ್ ಬುಕ್ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದಾರೆ. ಈ ಹಿಂದೆಯೇ ಹೇಮಾ ಅವರಿಗೆ ಮದುವೆಯಾಗಿತ್ತು, ಆದರೆ ಎರಡು ದಿನಗಳ ಹಿಂದೆಯಷ್ಟೇ ಪ್ರಶಾಂತ್ (ಸುಮಂತ್ )ರನ್ನ ಮದುವೆ ಆಗಿರುವುದಾಗಿ ತಿಳಿಸಿದ್ದಾರೆ. ಮುಂದೆ ಓದಿ

ಹೇಮ ಬದುಕಿನಲ್ಲಿ ಬಣ್ಣದ 'ರಂಗೋಲಿ' ಬಿಡಿಸಿದ ಪ್ರಶಾಂತ್
ನಟಿ ಹೇಮಾ 'ರವಿಮಾಮ' ಸಿನಿಮಾದಲ್ಲಿ ಅಭಿನಯಿಸಿದ ನಂತರ ಯಾವುದೇ ಚಿತ್ರಗಳಲ್ಲಿ ಕಾಣಿಸಿಕೊಳ್ಳಲಿಲ್ಲ. ಸ್ವಮೇಂದ್ರ ಪಂಚಮುಖಿ ಅವರನ್ನ ಮದುವೆಯಾಗಿ ವಿದೇಶದಲ್ಲಿ ವಾಸವಾಗಿದ್ರು. ಇತ್ತೀಚಿನ ದಿನಗಳಲ್ಲಿ ಹೇಮಾ ಬೆಂಗಳೂರಿನಲ್ಲೇ ನಾಟ್ಯಶಾಲೆ ನಡೆಸುತ್ತಿದ್ದರು. ಕಳೆದ ಎರಡು ದಿನದ ಹಿಂದೆಯಷ್ಟೇ ಹೇಮಾ ನಟ ಪ್ರಶಾಂತ್ ಗೋಪಾಲ ಸ್ವಾಮಿಯವರನ್ನ ಮದುವೆ ಆಗಿದ್ದಾರೆ.

ಹೇಮಾ ಪಂಚಮುಖಿ ಈಗ ಹೇಮಾ ಪ್ರಭಾತ್
ಹೇಮ ಪಂಚಮುಖಿ ಅಂತಾನೇ ಸಿನಿಮಾರಂಗದಲ್ಲಿ ಗುರುತಿಸಿಕೊಂಡಿದ್ದ ನಟಿ ಈಗ ತಮ್ಮ ಹೆಸರನ್ನ ಹೇಮಾ ಪ್ರಭಾತ್ ಎಂದು ಬದಲಾಯಿಸಿಕೊಂಡಿದ್ದಾರೆ. ಅದಷ್ಟೇ ಅಲ್ಲದೆ ತಾವು ಕೂಡ ಬದಲಾಗಿದ್ದಾರೆ. ಜೀವನಶೈಲಿ ಎಲ್ಲವೂ ಬದಲಾಗಿದೆ.

ನೂರಾರು ಮಕ್ಕಳಿಗೆ ನೃತ್ಯ ಪಾಠ
ಸಿನಿಮಾಗಳಲ್ಲಿ ಅಭಿನಯಿಸಿ ಮಿಂಚಿನಂತೆ ಚಿತ್ರರಂಗದಿಂದ ದೂರ ಸರಿದ ನಟಿ ಹೇಮಾ ಪ್ರಭಾತ್, ನಾಟ್ಯಶಾಲೆ ನಡೆಸುತ್ತಿದ್ದಾರೆ. ತಾತ ಗೋಪಿನಾಥ್ ದಾಸ್ ನಡೆಸುತಿದ್ದ ಪ್ರಭಾತ್ ಕಲಾವಿದರ ತಂಡವನ್ನ ತಾವೇ ನಿಂತು ಮುಂದುವರೆಸುತ್ತಿದ್ದಾರೆ.

ಭರತನಾಟ್ಯ ಕಲಾವಿದ ಪ್ರಶಾಂತ್ ಗೋಪಾಲ ಸ್ವಾಮಿ
ಚಿಕ್ಕವಯಸ್ಸಿನಿಂದಲೇ ಭರತನಾಟ್ಯ ಕಲಾವಿದೆ ಆಗಿರುವ ನಟಿ ಹೇಮ ತಮ್ಮಂತೆ ಭರತನಾಟ್ಯ ಕಲಾವಿದನನ್ನೇ ಮದುವೆ ಆಗಿದ್ದಾರೆ. ಪ್ರಶಾಂತ್ ಗೋಪಾಲ ಸ್ವಾಮಿ ಕೂಡ ಭರತನಾಟ್ಯ ಕಲಾವಿದರು. ಈಗಾಗಲೆ ಪ್ರಭಾತ್ ಸಂಸ್ಥೆಯಿಂದ ಇವರಿಬ್ಬರು ಸಾಕಷ್ಟು ನಾಟ್ಯ ಪ್ರದರ್ಶನವನ್ನ ನೀಡಿದ್ದಾರೆ.


Click it and Unblock the Notifications











