For Quick Alerts
  ALLOW NOTIFICATIONS  
  For Daily Alerts

  ಹುಡುಗಿಯರ ಗ್ಯಾಂಗ್ ಜೊತೆ ಹಿತಾ ಬ್ಯಾಚುಲರೆಟ್ ಪಾರ್ಟಿ

  |

  ಸಿಹಿ ಕಹಿ ಚಂದ್ರು ಮತ್ತು ಸಿಹಿ ಕಹಿ ಗೀತಾ ಪುತ್ರಿ ಹಿತಾ ಚಂದ್ರಶೇಖರ್ ಮದುವೆಗೆ ದಿನಗಣನೆ ಆರಂಭವಾಗಿದೆ. ಡಿಸೆಂಬರ್ ತಿಂಗಳಲ್ಲಿ ಹಿತಾ ಚಂದ್ರಶೇಖರ್ ಮತ್ತು ಕಿರಣ್ ಶ್ರೀನಿವಾಸ್ ವಿವಾಹ ಮಹೋತ್ಸವ ನಡೆಯಲಿದೆ. ಕುಟುಂಬಸ್ಥರಿಗೆ, ಚಿತ್ರರಂಗ ಮತ್ತು ಕಿರುತೆರೆ ಲೋಕದ ಗಣ್ಯರಿಗೆ ಮದುವೆಯ ಆಮಂತ್ರಣ ಪತ್ರಿಕೆ ನೀಡುವುದರಲ್ಲಿ ಹಿತಾ ಮತ್ತು ಕಿರಣ್ ಫ್ಯಾಮಿಲಿ ಬಿಜಿಯಾಗಿದ್ದಾರೆ.

  ಈ ನಡುವೆ ಭಾವಿ ವಧು ಹಿತಾ ಚಂದ್ರಶೇಖರ್ ಪಾರ್ಟಿ ಮೂಡ್ ನಲ್ಲಿದ್ದಾರೆ. ತಮ್ಮ ಹುಡುಗಿಯರ ಗ್ಯಾಂಗ್ ಜೊತೆಗೆ ಹಿತಾ ಚಂದ್ರಶೇಖರ್ ಬ್ಯಾಚುಲರೆಟ್ ಪಾರ್ಟಿಯನ್ನ ಎಂಜಾಯ್ ಮಾಡಿದ್ದಾರೆ.

  ಹೆಸರಿಗೆ ಹಿತಾ ಬ್ಯಾಚುಲರೆಟ್ ಪಾರ್ಟಿ ಆಗಿದ್ದರೂ, ಎಲ್ಲವನ್ನೂ ಅರೇಂಜ್ ಮಾಡಿದ್ದು ಆಕೆಯ ಆತ್ಮೀಯ ಸ್ನೇಹಿತರು. ಹಿತಾ ಬ್ಯಾಚುಲರೆಟ್ ಪಾರ್ಟಿಯ ಥೀಮ್ ಗೆ ಸ್ಫೂರ್ತಿ ನೀಡಿದ್ದು ಅಮೇರಿಕಾದ ಜನಪ್ರಿಯ ಟೆಲಿವಿಷನ್ ಸೀರೀಸ್ 'ಫ್ರೆಂಡ್ಸ್'.

  ಹಿತಾ ಚಂದ್ರಶೇಖರ್-ಕಿರಣ್ ಮದುವೆಗೆ ದಿನಾಂಕ ನಿಗದಿ ಆಯ್ತುಹಿತಾ ಚಂದ್ರಶೇಖರ್-ಕಿರಣ್ ಮದುವೆಗೆ ದಿನಾಂಕ ನಿಗದಿ ಆಯ್ತು

  ತಮ್ಮ ಬ್ಯಾಚುಲರೆಟ್ ಪಾರ್ಟಿ ಹೇಗಿರಬೇಕು ಅಂತ ಹಿತಾ ಕನಸು ಕಂಡಿದ್ರೋ, ಥೇಟ್ ಹಾಗೇ ನಡೆದಿದೆ. ತಮ್ಮ ಕನಸು ನನಸು ಮಾಡಿ ಸರ್ಪ್ರೈಸ್ ನೀಡಿದ ಕ್ಲೋಸ್ ಫ್ರೆಂಡ್ಸ್ ಗೆ ಹಿತಾ ಚಂದ್ರಶೇಖರ್ ಇನ್ಸ್ಟಾಗ್ರಾಮ್ ನಲ್ಲಿ ಧನ್ಯವಾದ ತಿಳಿಸಿದ್ದಾರೆ.

  ಕ್ಲಾಸಿ ಮತ್ತು ಡ್ರೀಮಿ ಬ್ಯಾಚುಲರೆಟ್ ಪಾರ್ಟಿಯ ಫೋಟೋಗಳನ್ನು ಹಿತಾ ಚಂದ್ರಶೇಖರ್ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದ್ದಾರೆ. ಅಂದ್ಹಾಗೆ, ಈ ಪಾರ್ಟಿಗೆ ಹಿತಾ ಬಿಳಿ ಬಣ್ಣದ ಗೌನ್ ಧರಿಸಿದ್ದರೆ, ಸ್ನೇಹಿತೆಯರೆಲ್ಲಾ ಕಪ್ಪು ಬಣ್ಣದ ಉಡುಗೆ ತೊಟ್ಟಿದ್ದರು.

  ಪ್ರೀತಿಸಿದ ಹುಡುಗನ ಜೊತೆ ನಿಶ್ಚಿತಾರ್ಥ ಮಾಡಿಕೊಂಡು ಹಿತಾ ಚಂದ್ರಶೇಖರ್ಪ್ರೀತಿಸಿದ ಹುಡುಗನ ಜೊತೆ ನಿಶ್ಚಿತಾರ್ಥ ಮಾಡಿಕೊಂಡು ಹಿತಾ ಚಂದ್ರಶೇಖರ್

  ಮದುವೆಗೂ ಮುನ್ನ ಕೊನೆಯ ಪಾರ್ಟಿಯಲ್ಲಿ ಹುಡುಗಿಯರ ಗ್ಯಾಂಗ್ ಜೊತೆಗೆ ಹಿತಾ ಚಂದ್ರಶೇಖರ್ ಸಂಭ್ರಮಿಸಿದ್ದಾರೆ. ಮದುವೆಯ ಹೊಸ್ತಿಲಲ್ಲಿ ಇರುವ ಹಿತಾಗೆ ಸೋಷಿಯಲ್ ಮೀಡಿಯಾದಲ್ಲಿ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.

  English summary
  Kannada Actress Hita Chandrashekar had a fun filled Bachelorette party.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X