ಕನ್ನಡದ ಈ ಗೊಂಬೆಗಳಿಗೆ 'ಸೈಮಾ'ದಲ್ಲಿ ಎಲ್ಲರೂ ಫಿದಾ: ಯಾರು ಬೆಸ್ಟ್.?

ಅವಾರ್ಡ್ ಕಾರ್ಯಕ್ರಮಗಳಲ್ಲಿ ಸಾಮಾನ್ಯವಾಗಿ ಗ್ಲಾಮರ್ ಹೆಚ್ಚಿರುತ್ತೆ. ಪ್ರಶಸ್ತಿ ಪ್ರಧಾನ ಸಮಾರಂಭದ ಜೊತೆ ಹಾಡುವುದು, ಕುಣಿಯುವುದು, ರೆಡ್ ಕಾರ್ಪೆಟ್ ಹೀಗೆ ಸಖತ್ ಕಲರ್ ಫುಲ್ ಆಗಿರುತ್ತೆ. ಅದರಲ್ಲೂ ಸೈಮಾ ಪ್ರಶಸ್ತಿ ಸಮಾರಂಭ ಅಂದ್ಮೇಲೆ ಹೇಳಬೇಕಾ.?

ಸೈಮಾದಲ್ಲಿ ದಕ್ಷಿಣ ಭಾರತದ ಎಲ್ಲ ಚಿತ್ರರಂಗಗಳು ಭಾಗವಹಿಸುತ್ತೆ. ಕನ್ನಡ, ತಮಿಳು, ತೆಲುಗು, ಮಲಯಾಳಂ ಭಾಷೆಯವರು ಸೇರ್ತಾರೆ. ಹೀಗಾಗಿ, ಎಲ್ಲರ ಮುಂದೆ ನಾನು ಚೆನ್ನಾಗಿ ಕಾಣ್ಬೇಕು ಅನ್ನೋದು ಪ್ರತಿಯೊಬ್ಬರಿಗೂ ಆಸೆ ಇರುತ್ತೆ. ಅದರಲ್ಲೂ ನಟಿಯರಿಗೆ ಈ ವಿಚಾರದಲ್ಲಿ ಸ್ವಲ್ಪ ಜಾಸ್ತಿಯೇ ಕಾಳಜಿ ಬಿಡಿ.

ಸಹಜವಾಗಿ ಇಂತಹ ಕಾರ್ಯಕ್ರಮದಲ್ಲಿ ಪರಭಾಷೆ ನಟಿಯರು ಹೆಚ್ಚು ಗ್ಲಾಮರ್ ಮತ್ತು ಹಾಟ್ ಆಗಿ ಕಾಣಿಸಿಕೊಳ್ತಾರೆ. ಆದ್ರೆ, ಈ ಬಾರಿಯ ಸೈಮಾದಲ್ಲಿ ಸ್ಯಾಂಡಲ್ ವುಡ್ ನಟಿಯರದ್ದೇ ಕಾರುಬಾರು. ಒಬ್ಬರಿಗಿಂತ ಮತ್ತೊಬ್ಬರು ಸ್ಟೈಲ್, ಗ್ಲಾಮರ್, ಹಾಟ್ ಆಗಿ ಮಿಂಚಿದ್ದಾರೆ. ಬಹುಶಃ ಸೈಮಾದಲ್ಲಿ ಎಲ್ಲರ ಕಣ್ಣು ಇವರ ಮೇಲೆಯೇ ಇತ್ತೋ ಏನೋ. ಅಷ್ಟರ ಮಟ್ಟಿಗೆ ಹವಾ ಇಟ್ಟಿದ್ದಾರೆ. ಅಷ್ಟಕ್ಕೂ, ಸೈಮಾದಲ್ಲಿ ವೈಯಾರ ಮಾಡಿ ಬಂದ ಚಂದನವನದ ಚೆಲುವೆಯರು ಯಾರು.? ಮುಂದೆ ಓದಿ.....

ಸೀರೇಲಿ ಹುಡುಗಿಯ ನೋಡಲೆ ಬಾರದು...

ಸೀರೇಲಿ ಹುಡುಗಿಯ ನೋಡಲೆ ಬಾರದು...

'ಕೆಂಡಸಂಪಿಗೆ' ಹಾಗೂ 'ಟಗರು' ಸಿನಿಮಾದಲ್ಲಿ ಮುದ್ದು ಮುದ್ದಾಗಿ ಕಾಣಿಸಿಕೊಂಡಿದ್ದ ಮಾನ್ವಿತಾ ಸೈಮಾದಲ್ಲಿ ಎಲ್ಲರ ಕಣ್ಣು ಕುಕ್ಕಿದ್ದಾರೆ. ಬಿಳಿ ಮತ್ತು ಚಿನ್ನದ ಬಣ್ಣ ಮಿಶ್ರಿತ ಸೀರೆಯಲ್ಲಿ ಮಿರಮಿರ ಅಂತ ಮಿಂಚಿರುವ ಮಾನ್ವಿತಾ ಅವರನ್ನ ನೋಡಿ, 'ಸೀರೇಲಿ ಹುಡುಗಿಯ ನೋಡಲೇಬಾರದು ನಿಲ್ಲಲ್ಲ ಟೆಂಪ್ರೇಚರ್......'ಎಂದು ಹಾಡಿದ್ರು ಹಾಡಿರ್ತಾರೆ.

in pics: ಟಗರು ಪೋರಿ ಸಖತ್ ಹಾಟ್

ಯಾವುದೋ ಈ ಗೊಂಬೆ ಯಾವುದೋ

ಯಾವುದೋ ಈ ಗೊಂಬೆ ಯಾವುದೋ

''ಯಾವುದೋ ಈ ಗೊಂಬೆ ಯಾವುದೋ...ಊವರ್ಶಿಯ ಕುಲವೋ ಮೇನಕೆಯ ಚೆಲುವೋ....'' ಎಂಬ ಹಾಡು ನೆನಪಾಗುತ್ತೆ. 'ವಜ್ರಕಾಯ' ಚಿತ್ರದಲ್ಲಿ ಪಟ್ ಪಟ್ ಅಂತ ಮಾತಾಡಿ ಹೋಗಿದ್ದ ನಭಾ ಸೈಮಾದಲ್ಲಿ ಒಳ್ಳೆಯ ಗೊಂಬೆಯಂತೆ ಕಂಗೊಳಿಸಿದ್ದಾರೆ.

In pics: ಯಾವುದೋ ಈ ಗೊಂಬೆ ಯಾವುದೋ

ಸ್ಟೈಲಿಶ್ ಬ್ಯೂಟಿ

ಸ್ಟೈಲಿಶ್ ಬ್ಯೂಟಿ

ಡಿ ಗ್ಲಾಮರ್ ಹಾಗೂ ಕ್ಲಾಸ್ ಪಾತ್ರಗಳಲ್ಲಿ ಹೆಚ್ಚು ನಟಿಸಿರುವ ಶ್ರುತಿ ಹರಿಹರನ್ ಸೈಮಾದಲ್ಲಿ ಸಖತ್ ಗ್ಲಾಮರ್ ಆಗಿಯೇ ಮಿಂಚಿದ್ದಾರೆ. ಸ್ಟೈಲಿಶ್ ಕಾಸ್ಟ್ಯೂಮ್ ನಲ್ಲಿ ಲುಸಿಯಾ ಬೆಡಗಿ ಕಾಣಿಸಿಕೊಂಡಿದ್ದಾರೆ.

ಹಚ್ಚ ಹಸಿರಲ್ಲಿ ಶಾನ್ವಿ

ಹಚ್ಚ ಹಸಿರಲ್ಲಿ ಶಾನ್ವಿ

ಸ್ಯಾಂಡಲ್ ವುಡ್ ನ 'ಮಾಸ್ಟರ್ ಪೀಸ್' ಶಾನ್ವಿ ಶ್ರೀವಾಸ್ತವ್ ಸೈಮಾದಲ್ಲಿ ಗೋ-ಗ್ರೀನ್ ಸಂದೇಶ ಸಾರುವಂತೆ ಕಂಡರು. ಆದ್ರೂ, ಗ್ರೀನ್ ಡ್ರೆಸ್ ನಲ್ಲಿ ಶಾನ್ವಿ ಯಾರಿಗೂ ಕಮ್ಮಿಯಿಲ್ಲ ಎಂಬಂತೆ ಕ್ಯೂಟ್ ಆಗಿ ಸಖತ್ ಬೋಲ್ಡ್ ಆಗಿ ಫೋಟೋಗೆ ಸಿಕ್ಕಿದ್ದಾರೆ.

In pics: ಮಾಸ್ಟರ್ ಪೀಸ್ ಹುಡುಗಿಯ ಝಲಕ್

ಭಾವನಾ ರಾವ್

ಭಾವನಾ ರಾವ್

'ಗಾಳಿಪಟ' ಭಾವನಾ ಅಂತಾನೆ ಗುರುತಿಸಿಕೊಳ್ಳುವ ನಟ ಭಾವನಾ ರಾವ್ ಸೈಮಾದಲ್ಲಿ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಪಡೆದುಕೊಂಡರು. ರೆಡ್ ಕಾರ್ಪೆಟ್ ನಲ್ಲಿ ಭಾವನಾ ಕಾಣಿಸಿಕೊಂಡಿದ್ದು ಹೀಗೆ.

ಕಪ್ಪು ಸುಂದರಿ

ಕಪ್ಪು ಸುಂದರಿ

'ಕಿರಿಕ್ ಪಾರ್ಟಿ' ಹಾಗೂ ಕೆಲವು ಕಿರಿಕ್ ಗಳ ಮೂಲಕ ಹೆಚ್ಚು ನೇಮು ಫೇಮು ಗಳಿಸಿದ ಸಂಯುಕ್ತ ಹೆಗಡೆ, ಸೈಮಾದಲ್ಲಿ ಬ್ಲ್ಯಾಕ್ ಸುಂದರಿಯಾಗಿದ್ದರು.

in pics: ಸೈಮಾದಲ್ಲಿ ತಾರೆಯರ ಮೆರಗು

'ಚಂದ್ರ' ಚಕೋರಿ

'ಚಂದ್ರ' ಚಕೋರಿ

ಕನ್ನಡದಲ್ಲಿ 'ಚಂದ್ರ' ಹಾಗೂ 'ಅರಸು' ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದ ಶ್ರೀಯಾ ಶರಣ್ ಸಹಜವಾಗಿ ಅವಾರ್ಡ್ ಕಾರ್ಯಕ್ರಮಗಳಲ್ಲಿ ಹೆಚ್ಚು ಗ್ಲಾಮರ್ ಆಗಿ ಕಾಣಿಸಿಕೊಳ್ತಾರೆ. ಈ ವರ್ಷ ಸೈಮಾದಲ್ಲಿ ಶ್ರೀಯಾ ಕಾಣಿಸಿಕೊಂಡಿದ್ದು ಹೀಗೆ.

'ಪೊರ್ಕಿ' ಪೋರಿ

'ಪೊರ್ಕಿ' ಪೋರಿ

'ಪೊರ್ಕಿ', 'ಜರಾಸಂದ' ಅಂತಹ ಸಿನಿಮಾಗಳಲ್ಲಿ ಅಭಿನಯಿಸಿದ್ದ ಪ್ರಣೀತಾ ಸುಭಾಚ್ ಈಗ ಹೆಚ್ಚು ತೆಲುಗು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಪ್ರಣೀತಾ ಕೂಡ ಗ್ಲಾಮರ್ ವಿಷ್ಯದಲ್ಲಿ ಹಿಂದೆ ಬಿದ್ದಿಲ್ಲ.

More from Filmibeat

English summary
Kannada actress nabha natesh, manvitha harish, sruthi hariharan, shanvi srivastava look in siima award 2018.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X