ಚಿತ್ರಗಳು : ಹಾಟ್ ಫೋಟೋ ಶೂಟ್ ನಲ್ಲಿ ಕಂಗೊಳಿಸಿದ ಜಯಶ್ರೀ ಆರಾಧ್ಯ
Recommended Video

ಕನ್ನಡದ ನಟಿ ಜಯಶ್ರೀ ಆರಾಧ್ಯ ತಮ್ಮ ಸುಂದರ ರೂಪದಿಂದ ಎಲ್ಲರ ಕಣ್ಣು ಕುಕ್ಕುವಂತೆ ಮಾಡಿದ್ದ ಬೆಡಗಿ. ಈಗಾಗಲೇ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಈ ನಟಿ ಈಗ ಹೊಸ ಫೋಟೋ ಶೂಟ್ ಮಾಡಿಸಿದ್ದಾರೆ.
ಮಾಡ್ರನ್ ಹಾಗೂ ಹೋಮ್ಲಿ ಎರಡು ಲುಕ್ ಗಳಿಗೆ ಹೊಂದಿಕೊಳ್ಳುವ ಜಯಶ್ರೀ ಆರು ರೀತಿಯ ಬೇರೆ ಬೇರೆ ಡ್ರೆಸ್ ಗಳಲ್ಲಿ ಫೋಟೋ ಶೂಟ್ ಮಾಡಿಸಿದ್ದಾರೆ. ಬ್ಲಾಕ್, ರೆಡ್ ಹೀಗೆ ಬಣ್ಣ ಬಣ್ಣದ ಬಟ್ಟೆಗಳಲ್ಲಿ ಜಯಶ್ರೀ ಮಿಂಚಿದ್ದಾರೆ.

ಮಾಡ್ರನ್ ಉಡುಪುಗಳಲ್ಲಿ ಹಾಟ್ ಆಗಿ ಕಾಣುವ ಅವರು ಸೀರೆಯಲ್ಲಿ ಪಕ್ಕಾ ಪಕ್ಕದ ಮನೆ ಹುಡುಗಿಯ ರೀತಿ ಕಾಣಿಸಿಕೊಂಡಿದ್ದಾರೆ. ಜಯಶ್ರೀ ಅವರ ಸುಂದರ ಚಿತ್ರಗಳನ್ನು ಪುನೀತ್ ಗೌಡ ಸೆರೆ ಹಿಡಿದಿದ್ದಾರೆ. ಸಿದ್ದು ಮೇಕಪ್ ಜಯಶ್ರೀ ಅಂದವನ್ನು ಹೆಚ್ಚು ಮಾಡಿದೆ.

ಅಂದಹಾಗೆ, ಜಯಶ್ರೀ ಆರಾಧ್ಯ ಹಿರಿಯ ನಟಿ, ಮಾರಿಮುತ್ತು ಖ್ಯಾತಿ ಸರೋಜಮ್ಮ ಅವರ ಮೊಮ್ಮಗಳಾಗಿದ್ದಾರೆ. ಈಗಾಗಲೇ 'ಪುಟ್ಟರಾಜು ಲವರ್ ಆಫ್ ಶಶಿಕಲಾ' ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಪ್ರವೇಶ ಮಾಡಿರುವ ಈ ಚೆಲುವೆ ಇನ್ನಷ್ಟು ಒಳ್ಳೆಯ ಸಿನಿಮಾಗಳ ನಿರೀಕ್ಷೆಯಲ್ಲಿ ಇದ್ದಾರೆ.


Click it and Unblock the Notifications











