Just In
Don't Miss!
- News
ಶಿಲ್ಪಾ ಶೆಟ್ಟಿಗೆ ಬಹಳ ಖುಷಿ ನೀಡಿದ ಹೊಸ ಸಂಗತಿ ಯಾವುದು?
- Automobiles
ಜನವರಿ 1ರಿಂದ ಟಾಟಾ ಕಾರುಗಳ ಖರೀದಿ ಮತ್ತಷ್ಟು ದುಬಾರಿ
- Finance
ವಿಶ್ವದ ಬೃಹತ್ ಕಂಪನಿಗಳನ್ನು ಮುನ್ನಡೆಸುತ್ತಿರುವ ಟಾಪ್ 10 ಭಾರತೀಯರು
- Sports
ನಾಳೆಯಿಂದ ಕ್ರಿಕೆಟ್ ಲೋಕದಲ್ಲಿ ಮಹತ್ವದ ಬದಲಾವಣೆ
- Technology
ಗೂಗಲ್ ಫೋಟೋಸ್ ನಲ್ಲಿ ಇದೀಗ ಚಾಟ್ ಫೀಚರ್- ಇದರಲ್ಲಿ ನೀವೇನು ಮಾಡಬಹುದು?
- Lifestyle
ನಾಭಿಯ ಬಗ್ಗೆ ನಿಮಗೆ ಗೊತ್ತಿಲ್ಲದೇ ಇರುವ ಅಚ್ಚರಿಯ ಸಂಗತಿಗಳು
- Education
ಅರಣ್ಯ ಇಲಾಖೆಯಲ್ಲಿ ಕಾನೂನು ಸಲಹೆಗಾರ ಹುದ್ದೆಗೆ ಅರ್ಜಿ ಆಹ್ವಾನ...ತಿಂಗಳಿಗೆ 60,000/-ರೂ ವೇತನ
- Travel
ಭಾರತದಲ್ಲಿ ಖಗೋಳ ಛಾಯಾಚಿತ್ರಗ್ರಹಣ ಮಾಡಲು ಇಲ್ಲಿವೆ ಬೆಸ್ಟ್ ಸ್ಥಳಗಳು
ಕಾರುಣ್ಯ ರಾಮ್ ಗೆ 'ಬಿಗ್' ಸರ್ಪ್ರೈಸ್ ಕೊಟ್ಟ ಕನ್ನಡದ ಹಿಟ್ ಡೈರೆಕ್ಟರ್.!
ಒಂದಾದ ಮೇಲೊಂದರಂತೆ ಹಿಟ್ ಸಿನಿಮಾಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡುತ್ತಾ ಬಂದಿರುವ ನಿರ್ದೇಶಕರೊಬ್ಬರು ದಿಢೀರ್ ಅಂತ ಫೋನ್ ಮಾಡಿ ''ನನ್ನ ಚಿತ್ರದಲ್ಲಿ ನೀವು ಆಕ್ಟ್ ಮಾಡ್ತೀರಾ'' ಅಂತ ಕೇಳಿದ್ರೆ ಉದಯೋನ್ಮುಖ ನಟಿಯರು ಚಿಟ್ಟೆಯಂತೆ ಹಾರಿ ಖುಷಿ ಪಡ್ತಾರೆ. ನಟಿ ಕಾರುಣ್ಯ ರಾಮ್ ಗೂ ಮೊನ್ನೆಮೊನ್ನೆಯಷ್ಟೇ ಹೀಗೇ ಆಗಿದೆ.
ಉತ್ತಮ ಅವಕಾಶಗಳಿಗಾಗಿ ಎದುರು ನೋಡುತ್ತಿರುವ ನಟಿ ಕಾರುಣ್ಯ ರಾಮ್ ಗೆ ಕನ್ನಡದ ಪ್ರಖ್ಯಾತ ನಿರ್ದೇಶಕರೊಬ್ಬರು ಅವಕಾಶ ಕೊಟ್ಟಿದ್ದಾರೆ. ಆ ನಿರ್ದೇಶಕ ಬೇರೆ ಯಾರೂ ಅಲ್ಲ.. 'ಗೋವಿಂದಾಯ ನಮಃ', 'ಗೂಗ್ಲಿ', 'ರಣವಿಕ್ರಮ', 'ನಟ ಸಾರ್ವಭೌಮ'.. ಹೀಗೆ ಸಾಲು ಸಾಲು ಯಶಸ್ವಿ ಚಿತ್ರಗಳನ್ನು ನಿರ್ದೇಶಿಸಿರುವ ಪವನ್ ಒಡೆಯರ್.
ಇತ್ತೀಚೆಗಷ್ಟೇ ಕಾರುಣ್ಯ ರಾಮ್ ಗೆ ಫೋನ್ ಮಾಡಿ ತಮ್ಮ 'ರೇಮೊ' ಚಿತ್ರದಲ್ಲಿ ನಟಿಸುವಂತೆ ಪವನ್ ಒಡೆಯರ್ ಕೇಳಿದ್ದಾರೆ. ಸುವರ್ಣಾವಕಾಶ ಅಂತ ಕಾರುಣ್ಯ ರಾಮ್ ಹಸಿರು ನಿಶಾನೆ ತೋರಿಸಿದ್ದಾರೆ.
''ಬಿಗ್ ಹಿಟ್ಸ್ ಕೊಟ್ಟಿರುವ ಡೈರೆಕ್ಟರ್ ಫೋನ್ ಮಾಡಿ, ನಮ್ಮ ಸಿನಿಮಾದಲ್ಲಿ ನೀವಿರಬೇಕು ಅಂತ ಕೇಳಿದರೆ ಅದಕ್ಕಿಂತ ಖುಷಿ ಇನ್ನೇನಿದೆ. 'ರೇಮೊ' ಸಿನಿಮಾದ ಸ್ಕ್ರಿಪ್ಟ್ ಬರೆಯುವಾಗಲೇ ನಿರ್ದೇಶಕರ ತಲೆಯಲ್ಲಿ ನಾನು ಇದ್ನಂತೆ. ತುಂಬ ಸಂತೋಷ ಆಗಿದೆ'' ಅಂತ ಸಂತಸ ವ್ಯಕ್ತಪಡಿಸುತ್ತಾರೆ ನಟಿ ಕಾರುಣ್ಯ ರಾಮ್.
'ರೇಮೊ' ಟೈಟಲ್ ಡಿಸೈನ್ : ಇದು ರೇವಂತ್ - ಮೋಹನಾ ಲವ್ ಸ್ಟೋರಿ
ಅಂದ್ಹಾಗೆ, ಪವನ್ ಒಡೆಯರ್ ನಿರ್ದೇಶನ ಮಾಡುತ್ತಿರುವ 'ರೇಮೊ' ಚಿತ್ರದ ಮುಖ್ಯಭೂಮಿಕೆಯಲ್ಲಿ ಇಶಾನ್, ಆಶಿಕಾ ರಂಗನಾಥ್, ಶರತ್ ಕುಮಾರ್ ಇದ್ದಾರೆ. ಇವರ ಜೊತೆಗೆ ಇದೀಗ ಕಾರುಣ್ಯ ರಾಮ್ ಸೇರಿಕೊಂಡಿದ್ದಾರೆ. ಇಶಾನ್ ಮತ್ತು ಕಾರುಣ್ಯ ರಾಮ್ ಕಾಂಬಿನೇಶನ್ ನಲ್ಲಿ ಒಂದು ಸಾಂಗ್ ಕೂಡ ಇರಲಿದೆ. ಹಾಗಾದ್ರೆ, 'ರೇಮೊ' ಚಿತ್ರದಲ್ಲಿ ಟ್ರೈಯಾಂಗಲ್ ಲವ್ ಸ್ಟೋರಿ ಇದ್ಯಾ.? ಸದ್ಯಕ್ಕೆ ಈ ಗುಟ್ಟನ್ನು ಪವನ್ ಒಡೆಯರ್ ಬಿಟ್ಟುಕೊಟ್ಟಿಲ್ಲ.
'ರೇಮೊ'ನಲ್ಲಿ ಶರತ್ ಕುಮಾರ್ ಅವರದು ಪ್ರಧಾನ ಪಾತ್ರ: ಪವನ್ ಒಡೆಯರ್
ಸದ್ಯ 'ರೇಮೊ' ಚಿತ್ರ ಇನ್ನೂ ಶೂಟಿಂಗ್ ಹಂತದಲ್ಲಿದೆ. ದೊಡ್ಡ ಬಜೆಟ್ ನಲ್ಲಿ ಈ ಸಿನಿಮಾ ರೆಡಿ ಆಗುತ್ತಿದೆ. 'ರೇಮೊ' ಚಿತ್ರವನ್ನ ಸಿ.ಆರ್.ಮನೋಹರ್ ಅದ್ಧೂರಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ.