»   » ಪ್ರಾಬ್ಲಂ 'ಚಿನ್ನು'ದಲ್ಲ: 'ಫಸ್ಟ್ ಲವ್' ನೆಗೆಟಿವ್ ಪಬ್ಲಿಸಿಟಿ ಅಷ್ಟೆ.!

ಪ್ರಾಬ್ಲಂ 'ಚಿನ್ನು'ದಲ್ಲ: 'ಫಸ್ಟ್ ಲವ್' ನೆಗೆಟಿವ್ ಪಬ್ಲಿಸಿಟಿ ಅಷ್ಟೆ.!

Posted By:
Subscribe to Filmibeat Kannada

ಒಂದು ಸಿನಿಮಾ ಜನರಿಗೆ ತಲುಪಬೇಕು ಅಂದ್ರೆ ಚೆನ್ನಾಗಿ ಪಬ್ಲಿಸಿಟಿ ಮಾಡಬೇಕು. ಪಬ್ಲಿಸಿಟಿ ಮಾಡಲು ನೂರಾರು ದಾರಿಗಳಿವೆ. ಆದ್ರೆ, ಅವೆಲ್ಲಕ್ಕಿಂತ 'ನೆಗೆಟಿವ್ ಪಬ್ಲಿಸಿಟಿ'ಯೇ ಬೆಸ್ಟ್ ಫಾರ್ಮುಲಾ ಅಂತ ಕೆಲವರು ನಂಬಿರೋದ್ರಿಂದ ಗಾಂಧಿನಗರದಲ್ಲಿ ವಿವಾದಗಳ ಸಂಖ್ಯೆ ಸ್ವಲ್ಪ ಜಾಸ್ತಿ. 'ಫಸ್ಟ್ ಲವ್' ಸಿನಿಮಾದ 'ನೆಗೆಟಿವ್ ಪಬ್ಲಿಸಿಟಿ'ಯಿಂದ ನಟಿ ಕವಿತಾ ಗೌಡ ಇದೀಗ ವಿವಾದದ ಸುಳಿಯಲ್ಲಿ ಸಿಲುಕುವಂತಾಗಿದೆ.

'ಫಸ್ಟ್ ಲವ್' ಸಿನಿಮಾದ ನಾಯಕಿ 'ಲಕ್ಷ್ಮಿ ಬಾರಮ್ಮ' ಧಾರಾವಾಹಿಯ ಖ್ಯಾತಿಯ ಚಿನ್ನು (ಕವಿತಾ ಗೌಡ) ಚಿತ್ರದ ಪ್ರಚಾರ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿಲ್ಲ ಎಂದು ಚಿತ್ರತಂಡ ಆರೋಪ ಮಾಡಿತ್ತು. ಆದ್ರೆ, ಅವೆಲ್ಲ ಬರೀ ಸುಳ್ಳು ಎನ್ನುತ್ತಾರೆ ನಟಿ ಕವಿತಾ ಗೌಡ.

'ಲಕ್ಷ್ಮಿ ಬಾರಮ್ಮ' ಚಿನ್ನು (ಕವಿತಾ ಗೌಡ) ಏನಮ್ಮಾ ನಿಮ್ ಪ್ರಾಬ್ಲಮ್ಮು.?

'ಫಸ್ಟ್ ಲವ್' ಸಿನಿಮಾ ಇದೀಗಷ್ಟೇ ಬಿಡುಗಡೆ ಆಗಿದೆ. ರಿಲೀಸ್ ಗೂ ಮುನ್ನ ನಡೆದ ಪತ್ರಿಕಾಗೋಷ್ಟಿಯಲ್ಲಿ ಕವಿತಾ ಗೌಡ ಹಾಜರ್ ಇರಲಿಲ್ಲ. ಇದನ್ನೇ ಬಳಸಿಕೊಂಡ ಚಿತ್ರತಂಡ, ಚಿತ್ರದ ಪ್ರಚಾರ ಕಾರ್ಯಕ್ರಮಗಳಿಗೆ ಕವಿತಾ ಗೌಡ ಬರುತ್ತಿಲ್ಲ ಎಂದು ಆರೋಪಿಸಿತ್ತು. ಆದ್ರೆ, ವಾಸ್ತವ ಅದಲ್ಲ. ಇದೆಲ್ಲ 'ನೆಗೆಟಿವ್ ಪಬ್ಲಿಸಿಟಿ' ಎಂದು ಕವಿತಾ ಗೌಡ ಸ್ಪಷ್ಟ ಪಡಿಸಿದ್ದಾರೆ.

'ಫಿಲ್ಮಿಬೀಟ್ ಕನ್ನಡ' ತಂಡದೊಂದಿಗೆ 'ಫಸ್ಟ್ ಲವ್' ವಿವಾದದ ಬಗ್ಗೆ ನಟಿ ಕವಿತಾ ಗೌಡ ನೀಡಿರುವ ಸ್ಪಷ್ಟನೆ ಇಲ್ಲಿದೆ....

'ಫಸ್ಟ್ ಲವ್' ಸಿನಿಮಾ ಒಪ್ಪಿಕೊಳ್ಳಲು ಕಾರಣ...

''ಫಸ್ಟ್ ಲವ್' ಪ್ರಾಜೆಕ್ಟ್ ಶುರು ಆದಾಗಿನಿಂದಲೂ ಪ್ರಾಬ್ಲಂ ಇತ್ತು. ಸತೀಶ್ ಹಾಗೂ ಮಲ್ಲಿಕಾರ್ಜುನ್ ಬಂದು ನನ್ನ ಅಪ್ರೋಚ್ ಮಾಡಿದ್ದರು. ಸ್ಟೋರಿ ಬಂದು ಹೇಳಿದ್ದು ಸತೀಶ್. ಅವರೇ ಡೈರೆಕ್ಟರ್ ಅಂತ ಹೇಳಿದ್ದರು. ಸತೀಶ್ ತುಂಬಾ ಚೆನ್ನಾಗಿ ಕಥೆ ಹೇಳಿದ್ದರಿಂದ ನಾನು ಒಪ್ಪಿಕೊಂಡೆ'' - ಕವಿತಾ ಗೌಡ, ನಟಿ

ಹೇಳಿದ್ದು ಒಂದು, ಮಾಡಿದ್ದು ಇನ್ನೊಂದು

''ಸಿನಿಮಾ ಶುರು ಆದಾಗ ಪ್ರಾಜೆಕ್ಟ್ ನಿಂದ ಸತೀಶ್ ರವರನ್ನ ತೆಗೆದಿದ್ದರು. ಮಲ್ಲಿಕಾರ್ಜುನ್ ಡೈರೆಕ್ಟರ್ ಅಂತ ಹೇಳಿದರು. ಮಲ್ಲಿಕಾರ್ಜುನ್ ನನ್ನ ಹತ್ತಿರ ಸರಿಯಾಗಿ ಮಾತನಾಡುತ್ತಲೇ ಇರಲಿಲ್ಲ. ನನಗೆ ಹೇಳಿದ್ದೇ ಒಂದು ಕಥೆ, ಆದ್ರೆ ಸಿನಿಮಾ ಶೂಟಿಂಗ್ ಆಗಿದ್ದೇ ಬೇರೆ ಕಥೆ. ಸ್ಟೋರಿ ಚೇಂಜ್ ಯಾಕೆ ಆಯ್ತು ಅಂತ ಕೇಳಿದರೆ ಉತ್ತರ ಸರಿಯಾಗಿ ಕೊಡುತ್ತಿರಲಿಲ್ಲ. ಅಗ್ರೀಮೆಂಟ್ ಗೆ ಸಹಿ ಮಾಡಿದ್ದರಿಂದ ಸಿನಿಮಾ ಮುಗಿಸಿಕೊಟ್ಟೆ'' - ಕವಿತಾ ಗೌಡ, ನಟಿ

ಡ್ರೇಟ್ಸ್ ಪ್ರಾಬ್ಲಂ

''ಮಧ್ಯದಲ್ಲಿ ಡೇಟ್ಸ್ ಪ್ರಾಬ್ಲಂ ತುಂಬಾ ಆಯ್ತು. ನಾನು ಕಾಲ್ ಶೀಟ್ ಕೊಟ್ಟಾಗ ಅವರು ಶೂಟಿಂಗ್ ಮಾಡುತ್ತಿರಲಿಲ್ಲ. ಅನಿವಾರ್ಯವಾಗಿ ನಾನು ಸುಮ್ಮನೆ ಮನೆಯಲ್ಲಿ ಕೂರುವಂತಾಗಿತ್ತು. ನಾನು ಸೀರಿಯಲ್ ಗೆ ಡೇಟ್ಸ್ ಕೊಟ್ಟಿದಾಗ, ಚಿತ್ರತಂಡ ಬಂದು ಡೇಟ್ಸ್ ಕೊಡಿ ಆರ್ಡರ್ ಮಾಡುತ್ತಿದ್ದರು. ಇದರಿಂದ ನನ್ನ ಸೀರಿಯಲ್ ಶೂಟಿಂಗ್ ಗೂ ಸಮಸ್ಯೆ ಆಯ್ತು'' - ಕವಿತಾ ಗೌಡ, ನಟಿ

ಪೇಮೆಂಟ್ ಪ್ರಾಬ್ಲಂ

''ಸಿನಿಮಾ ಮುಗಿಯುವ ಹೊತ್ತಿಗೆ ಸಂಭಾವನೆ ವಿಷ್ಯದಲ್ಲಿಯೂ ಪ್ರಾಬ್ಲಂ ಆಯ್ತು. ನನಗೆ ಪೇಮೆಂಟ್ ಕೂಡ ಸರಿಯಾದ ಸಮಯಕ್ಕೆ ಕೊಡಲಿಲ್ಲ. ಡಬ್ಬಿಂಗ್ ಹಂತಕ್ಕೆ ಬಂದಾಗ ಪೇಮೆಂಟ್ ಕ್ಲಿಯರ್ ಮಾಡಿದರು'' - ಕವಿತಾ ಗೌಡ, ನಟಿ

ಸ್ವಲ್ಪ ತಡ ಆಯ್ತು ಅಷ್ಟೆ...

''ನಾನು ಆರ್ಟಿಸ್ಟ್ ಆಗಿ ನನ್ನ ಸಿನಿಮಾ ಪ್ರಚಾರಕ್ಕೆ ನಾನು ಬಂದೇ ಬರುತ್ತೇನೆ. ನಾನು ಶೂಟಿಂಗ್ ನಲ್ಲಿ ಬಿಜಿಯಾಗಿದ್ದರೂ, ಚಿತ್ರೀಕರಣ ಮುಗಿಸಿಕೊಟ್ಟು 'ಫಸ್ಟ್ ಲವ್' ಪ್ರಚಾರಕ್ಕೆ ಅಂತ ಬೆಂಗಳೂರಿಗೆ ಬಂದೆ. ನನ್ನ ಫ್ಲೈಟ್ ಡಿಲೇ ಆದ ಕಾರಣ ಪ್ರೆಸ್ ಮೀಟ್ ಗೆ ಬರುವುದಕ್ಕೆ ತಡ ಆಯ್ತು'' - ಕವಿತಾ ಗೌಡ, ನಟಿ

ಹೆಸರಿಗೆ ಮಸಿ ಬಳಿಯುವ ಪ್ರಯತ್ನ

''ನಾನು ಪ್ರೆಸ್ ಮೀಟ್ ಜಾಗಕ್ಕೆ ಬರುವಷ್ಟರಲ್ಲಿ ಪ್ರೆಸ್ ಮೀಟ್ ಮುಗಿದು ಹೋಗಿತ್ತು. ಪ್ರಚಾರಕ್ಕೆ ಇರಲಿ ಅಂತ ನಾನು ಮಾತನಾಡಿರುವ ವಿಡಿಯೋ ಶೂಟ್ ಮಾಡಿದರು. ನಾನೂ ಕೂಡ ಚಿತ್ರತಂಡದ ಜೊತೆಗೆ ಫೋಟೋಗಳನ್ನ ತೆಗೆದುಕೊಂಡೆ. ಆದ್ರೆ, ಇದನ್ನ ಮಾತ್ರ ಅವರು ಯಾರಿಗೂ ಹೇಳಿಲ್ಲ. ನನ್ನ ಹೆಸರಿಗೆ ಮಸಿ ಬಳಿಯುವ ಪ್ರಯತ್ನ ಇದು'' - ಕವಿತಾ ಗೌಡ, ನಟಿ

ನೆಗೆಟಿವ್ ಪಬ್ಲಿಸಿಟಿ

''ಇದೆಲ್ಲ ನೆಗೆಟಿವ್ ಪಬ್ಲಿಸಿಟಿ. ಸಿನಿಮಾ ರಿಲೀಸ್ ಗೂ ನನ್ನನ್ನ ಕರೆಯಲಿಲ್ಲ. ಸಿನಿಮಾ ರಿಲೀಸ್ ಗೆ ಹೋಗಲು ನಾನು ರೆಡಿ ಇದ್ದೆ. ಆದ್ರೆ, ಕರೆಯಲಿಲ್ಲ. ಸಿನಿಮಾಗೆ ಪಬ್ಲಿಸಿಟಿ ಬೇಕು ಅಂದ್ರೆ ನನ್ನ ಹೆಸರನ್ನ ಹಾಳು ಮಾಡಿ ನೆಗೆಟಿವ್ ಪಬ್ಲಿಸಿಟಿ ಮಾಡಬಹುದಾ.?'' - ಕವಿತಾ ಗೌಡ, ನಟಿ

ಡಿಪ್ರೆಸ್ ಆಗಿದೆ

''ನನಗೆ ತುಂಬಾ ಡಿಪ್ರೆಸ್ ಆಗಿದೆ. ಇಂತಹ ಸುದ್ದಿಗಳಿಂದ ನನ್ನ ವೃತ್ತಿ ಬದುಕು ಹಾಳಾಗುತ್ತದೆ. ದಯವಿಟ್ಟು ಇಂತಹ ನೆಗೆಟಿವ್ ಪಬ್ಲಿಸಿಟಿಗೆ ಕಿವಿ ಕೊಡಬೇಡಿ'' ಎನ್ನುತ್ತಾರೆ ನಟಿ ಕವಿತಾ ಗೌಡ

English summary
Kannada Actress Kavitha Gowda gives the clarification about 'First Love' controversy.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada