»   » 'ಲಕ್ಷ್ಮಿ ಬಾರಮ್ಮ' ಚಿನ್ನು (ಕವಿತಾ ಗೌಡ) ಏನಮ್ಮಾ ನಿಮ್ ಪ್ರಾಬ್ಲಮ್ಮು.?

'ಲಕ್ಷ್ಮಿ ಬಾರಮ್ಮ' ಚಿನ್ನು (ಕವಿತಾ ಗೌಡ) ಏನಮ್ಮಾ ನಿಮ್ ಪ್ರಾಬ್ಲಮ್ಮು.?

By: ಫಿಲ್ಮಿಬೀಟ್ ಕನ್ನಡ ಡೆಸ್ಕ್
Subscribe to Filmibeat Kannada

'ಲಕ್ಷ್ಮಿ ಬಾರಮ್ಮ' ಧಾರಾವಾಹಿಯಲ್ಲಿ 'ಚಿನ್ನು' ಪಾತ್ರದ ಮೂಲಕ ಜನಪ್ರಿಯತೆ ಗಳಿಸಿದ್ದ ನಟಿ ಕವಿತಾ ಗೌಡ ಕಿರುತೆರೆಯಿಂದ ಬೆಳ್ಳಿತೆರೆಗೆ ಪದಾರ್ಪಣೆ ಮಾಡಿದ್ರು. 'ಶ್ರೀನಿವಾಸ ಕಲ್ಯಾಣ' ಚಿತ್ರದ ಮೂಲಕ ಬೆಳ್ಳಿತೆರೆಯಲ್ಲಿ ಮಿಂಚಿದ ಕವಿತಾ ಗೌಡ 'ಫಸ್ಟ್ ಲವ್' ಚಿತ್ರದಲ್ಲಿಯೂ ಅಭಿನಯಿಸಿದ್ದಾರೆ.

'ಫಸ್ಟ್ ಲವ್' ಸಿನಿಮಾ ಇನ್ನೇನು ಬಿಡುಗಡೆ ಆಗಲಿದೆ. ರಿಲೀಸ್ ಪ್ರಯುಕ್ತ ಚಿತ್ರದ ಪ್ರಚಾರ ಕಾರ್ಯಗಳು ಭರದಿಂದ ಸಾಗುತ್ತಿದೆ. ಹೀಗಿರುವಾಗಲೇ, 'ಚಿನ್ನು' ಕವಿತಾ ಗೌಡ ವಿವಾದದಲ್ಲಿ ಸಿಲುಕಿದ್ದಾರೆ. ಕವಿತಾ ಗೌಡ ರವರ ನಡವಳಿಕೆ ಬಗ್ಗೆ 'ಫಸ್ಟ್ ಲವ್' ಚಿತ್ರತಂಡ ಗರಂ ಆಗಿದೆ. ಅಷ್ಟಕ್ಕೂ ಏನೀ ಕಿರಿಕ್.? ಪೂರ್ತಿ ಮ್ಯಾಟರ್ ಇಲ್ಲಿದೆ ಓದಿರಿ...

ಪ್ರಮೋಷನ್ ಗೆ ಬರುತ್ತಿಲ್ಲ.!

'ಲಕ್ಷ್ಮಿ ಬಾರಮ್ಮ' ಧಾರಾವಾಹಿಯ 'ಚಿನ್ನು' ಖ್ಯಾತಿಯ ಕವಿತಾ ಗೌಡ ಬಗ್ಗೆ 'ಫಸ್ಟ್ ಲವ್' ಚಿತ್ರತಂಡ ಮಾಡುತ್ತಿರುವ ಕಂಪ್ಲೇಂಟ್ ಒಂದೇ.. ಅದು 'ಫಸ್ಟ್ ಲವ್' ಚಿತ್ರದ ಪ್ರಚಾರ ಕಾರ್ಯಕ್ರಮಗಳಲ್ಲಿ ಕವಿತಾ ಗೌಡ ಭಾಗಿಯಾಗುತ್ತಿಲ್ಲ ಅಂತ.!

ತಮಿಳು ಸಿನಿಮಾದಲ್ಲಿ ಕವಿತಾ ಬಿಜಿ ಅಂತೆ.!

'ಫಸ್ಟ್ ಲವ್' ಚಿತ್ರದ ಪ್ರಮೋಷನ್ ನಲ್ಲಿ ಭಾಗವಹಿಸಬೇಕು ಅಂತ ನಿರ್ದೇಶಕ ಆಯುಷ್ಮಾನ್ ಕರೆ ಮಾಡಿದರೆ, 'ತಮಿಳು ಸಿನಿಮಾದಲ್ಲಿ ಬಿಜಿ ಇದ್ದೇನೆ' ಎನ್ನುತ್ತಾರಂತೆ ಕವಿತಾ ಗೌಡ.

ಕನ್ನಡಕ್ಕಿಂತ ತಮಿಳು ಸಿನಿಮಾ ಹೆಚ್ಚಾಗೋಯ್ತಾ.?

ಕವಿತಾ ಗೌಡ ಜನಪ್ರಿಯತೆ ಕಂಡುಕೊಂಡಿದ್ದೇ ಕನ್ನಡ ಕಿರುತೆರೆ ಮೂಲಕ. ಕಿರುತೆರೆಯಿಂದ ಬೆಳ್ಳಿತೆರೆ ಜಿಗಿದದ್ದು ಕನ್ನಡ ಚಿತ್ರರಂಗದ ಮೂಲಕ. ಹೀಗಿದ್ದರೂ, ಕನ್ನಡ ಚಿತ್ರದ ಪ್ರಮೋಷನ್ ಗೆ ಸಹಕರಿಸದೆ, ತಮಿಳು ಸಿನಿಮಾ ನೆಪ ಹೇಳುತ್ತಿರುವ ಕವಿತಾ ಗೌಡ ವಿರುದ್ಧ 'ಫಸ್ಟ್ ಲವ್' ಚಿತ್ರತಂಡ ಅಸಮಾಧಾನಗೊಂಡಿದೆ.

ಫಸ್ಟ್ ಲವ್ ಕುರಿತು...

'ಲವ್ ಗುರು' ಖ್ಯಾತಿಯ ರೇಡಿಯೋ ಜಾಕಿ ರಾಜೇಶ್ ನಾಯಕನಾಗಿ ಅಭಿನಯಿಸಿರುವ ಸಿನಿಮಾ 'ಫಸ್ಟ್ ಲವ್'. ಈ ಚಿತ್ರದಲ್ಲಿ ಕವಿತಾ ಗೌಡ, ಸ್ನೇಹ, ರಾಜು ತಾಳಿಕೋಟೆ, ಅರುಣ್ ಬಾಲರಾಜ್ ಸೇರಿದಂತೆ ಹಲವರು ಅಭಿನಯಿಸಿದ್ದಾರೆ. ವರ್ಷದ ಹಿಂದೆ ಸೆಟ್ಟೇರಿದ್ದ ಈ ಸಿನಿಮಾ ಇದೀಗ ಥಿಯೇಟರ್ ಅಂಗಳಕ್ಕೆ ಬರುತ್ತಿದೆ.

English summary
Kannada Actress Kavitha Gowda is in news for wrong reasons. The team of Kannada Movie 'First Love' is unhappy against Kavitha Gowda who is not taking part in promotion of the film.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada