'ಯಜಮಾನ' ಸಿನಿಮಾದ ಆಫರ್ ಮೊದಲು ಹೋಗಿದ್ದು ಈ ನಟಿಗೆ

By Bharath Kumar

Recommended Video

ದರ್ಶನ್ ಚಿತ್ರವನ್ನ ರಿಜೆಕ್ಟ್ ಮಾಡಿದ್ರಂತೆ ಈ ಸ್ಟಾರ್ ನಟಿ | Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಜೊತೆಯಲ್ಲಿ ಸಿನಿಮಾ ಮಾಡ್ಬೇಕು ಎನ್ನುವುದು ಅನೇಕ ನಟಿಯರು ಬಯಕೆ ಆಗಿರುತ್ತೆ. ಅದರಲ್ಲೂ ಇತ್ತೀಚಿಗೆ ಇಂಡಸ್ಟ್ರಿಗೆ ಬರುತ್ತಿರುವ ನಟಿಯರಿಗಂತೂ ಡಿ-ಬಾಸ್ ಜೊತೆಯಲ್ಲಿ ಸ್ಕ್ರೀನ್ ಶೇರ್ ಮಾಡಿಕೊಳ್ಳುವ ಅವಕಾಶ ಸಿಕ್ಕಿದ್ರೆ ಸಾಕು ಅಂತ ಕಾಯ್ತಿರುತ್ತಾರೆ. ಆದ್ರೆ, ಆ ಚಾನ್ಸ್ ಕೆಲವೇ ಕೆಲವರಿಗೆ ಮಾತ್ರ ಸಿಗುತ್ತೆ.

ಹೀಗಿರುವಾಗ, ತಾನಾಗಿಯ ಬಂದ ಅವಕಾಶವೊಂದನ್ನ ಸ್ಟಾರ್ ನಟಿಯೊಬ್ಬರು ಕೈಬಿಟ್ಟಿದ್ದಾರೆ. ಅದು ಬೇರೆ ಯಾರೂ ಅಲ್ಲ. 'ಗೂಗ್ಲಿ' ಚೆಲುವೆ ಕೃತಿ ಕರಬಂಧ. ಸದ್ಯಕ್ಕೆ ಬಾಲಿವುಡ್ ನಲ್ಲಿ ಖ್ಯಾತಿ ಗಳಿಸಿಕೊಂಡಿರುವ ಕೃತಿ ಮತ್ತೆ ಸ್ಯಾಂಡಲ್ ವುಡ್ ನಲ್ಲಿ ಅಲ್ಲೊಂದು ಇಲ್ಲೊಂದು ಸಿನಿಮಾ ಮಾಡ್ತಿದ್ದರು ಅಷ್ಟೇ.

ಈ ಮಧ್ಯೆ ದರ್ಶನ್ ಅವರ ಬಹುದೊಡ್ಡ ಸಿನಿಮಾಗೆ ನಾಯಕಿಯಾಗುವ ಅವಕಾಶ ಕೃತಿ ಕರಬಂಧಗೆ ಬಂದಿತ್ತು. ಬಟ್, ಕೃತಿ ಈ ಸಿನಿಮಾವನ್ನ ಅಷ್ಟೇ ಸಲೀಸಾಗಿ ರಿಜೆಕ್ಟ್ ಮಾಡಿದ್ದಾರೆ. ಅಷ್ಟಕ್ಕೂ ಕೃತಿ ದರ್ಶನ್ ಸಿನಿಮಾವನ್ನ ಕೈಬಿಟ್ಟಿದ್ದೇಕೆ.? ಅದರ ಹಿಂದಿರುವ ಕಾರಣವೇನು? ಮುಂದೆ ಓದಿ.....

'ಯಜಮಾನ' ಚಿತ್ರದಲ್ಲಿ ನಟಿಸಬೇಕಿತ್ತು.!

'ಯಜಮಾನ' ಚಿತ್ರದಲ್ಲಿ ನಟಿಸಬೇಕಿತ್ತು.!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಯಜಮಾನ' 25 ದಿನಗಳನ್ನು ಪೂರೈಸಿದೆ. ಇನ್ನು ಇಂತಹ ಯಶಸ್ವಿ ಚಿತ್ರದಲ್ಲಿ ಕೃತಿ ಕರಬಂಧ ನಟಿಸಬೇಕಿತ್ತು. ನಿರ್ದೇಶಕ ಪಿ ಕುಮಾರ್ ಈ ಚಿತ್ರಕ್ಕಾಗಿ ಮೊದಲು ಕೃತಿಗೆ ಆಫರ್ ನೀಡಿದ್ದರು. ಈ ಸಿನಿಮಾ ಬಂದಾಗ ಖುಷಿಯಾಗಿದ್ದ ಕೃತಿ ಬೇಸರದಿಂದಲೇ ಚಿತ್ರವನ್ನ ಕೈಬಿಟ್ಟಿದ್ದರು.

ಬಾಲಿವುಡ್ ಸಿನಿಮಾ ಕಾರಣ.!

ಬಾಲಿವುಡ್ ಸಿನಿಮಾ ಕಾರಣ.!

ಕೃತಿಗೆ ದರ್ಶನ್ ಸಿನಿಮಾ ಆಫರ್ ಬಂದಾಗ, ಹಿಂದಿಯ 'ಯಮ್ಲ ಪಗಲ ದೀವಾನಾ; ಪಿರ್ ಸೇ' ಚಿತ್ರವನ್ನ ಒಪ್ಪಿಕೊಂಡಿದ್ದರು. ಆಗಾಗಲೇ ಶೂಟಿಂಗ್ ಕೂಡ ಆರಂಭವಾಗಿತ್ತು. ಹೀಗಾಗಿ, ಡೇಟ್ ಸಮಸ್ಯೆಯಿಂದ ಯಜಮಾನ ಚಿತ್ರದಿಂದ ಹೊರಗುಳಿದರು. ಯಾಕಂದ್ರೆ, ಅಲ್ಲಿ ಸಹಿ ಮಾಡಿರುವ ಚಿತ್ರಕ್ಕೆ ತೊಂದರೆಯಾಗಬಾರದೆಂದು ಈ ಸಿನಿಮಾ ಬಿಡಬೇಕಾಯಿತು. ಇದು ಸ್ವತಃ ಕೃತಿಗೆ ಕೂಡ ಬೇಸರ ಉಂಟು ಮಾಡಿತ್ತಂತೆ.

ಕೃತಿ ಜಾಗಕ್ಕೆ ತಾನ್ಯ

ಕೃತಿ ಜಾಗಕ್ಕೆ ತಾನ್ಯ

ಹೀಗೆ, ಕೃತಿ ಕರಬಂಧ ಮಿಸ್ ಮಾಡಿಕೊಂಡ ಜಾಗಕ್ಕೆ ತೆಲುಗಿನ ತಾನ್ಯ ಹೋಪ್ ಎಂಟ್ರಿ ಕೊಟ್ಟರು. ಜೊತೆಗೆ ಕರ್ನಾಟಕದ ಕ್ರಶ್ ರಶ್ಮಿಕಾ ಮಂದಣ್ಣ ಕೂಡ ಇನ್ನೊಬ್ಬ ನಾಯಕಿಯಾಗಿ ಸೇರಿಕೊಂಡರು. ಇವರಿಬ್ಬರು ದರ್ಶನ್ ಜೊತೆ ಚೊಚ್ಚಲ ಬಾರಿಗೆ ಅಭಿನಯಿಸುತ್ತಿದ್ದಾರೆ. ಈ ಸಿನಿಮಾ ಇಬ್ಬರಿಗೂ ಒಳ್ಳೆಯ ಹೆಸರು ತಂದು ಕೊಟ್ಟಿದೆ.

ಮತ್ತೆ ಅವಕಾಶ ಸಿಕ್ಕರೇ ಮಿಸ್ ಮಾಡಿಕೊಳ್ಳಲ್ಲ

ಮತ್ತೆ ಅವಕಾಶ ಸಿಕ್ಕರೇ ಮಿಸ್ ಮಾಡಿಕೊಳ್ಳಲ್ಲ

2017ರಲ್ಲಿ ತೆರೆಕಂಡಿದ್ದ 'ಮಾಸ್ತಿಗುಡಿ' ಚಿತ್ರದ ನಂತರ ಕೃತಿ ಅಭಿನಯದ ಸಿನಿಮಾ ಬಿಡುಗಡೆಯಾಗಿಲ್ಲ. 'ಯಜಮಾನ' ಚಿತ್ರವನ್ನ ಒಪ್ಪಿಕೊಂಡಿದ್ದರೇ ಸ್ಯಾಂಡಲ್ ವುಡ್ ನಲ್ಲಿ ಕೃತಿಗೆ ಭರ್ಜರಿ ಕಮ್ ಬ್ಯಾಕ್ ಸಿಗುತ್ತಿತ್ತು. ಆದ್ರೆ, ಬಿಟೌನ್ ಕಮಿಟ್ ಮೆಂಟ್ ಕಾರಣದಿಂದ ಮಿಸ್ ಮಾಡಿಕೊಂಡರು. ಆದ್ರೆ, ಮುಂದೆ ದರ್ಶನ್ ಸಿನಿಮಾ ಅವಕಾಶ ಸಿಕ್ಕರೇ ಖಂಡಿತಾ ಮಿಸ್ ಮಾಡಿಕೊಳ್ಳಲ್ಲವಂತೆ ಈ ನಟಿ.

ಬಿಟೌನ್ ನಲ್ಲಿ ಸಿಕ್ಕಾಪಟ್ಟೆ ಡಿಮ್ಯಾಂಡ್

ಬಿಟೌನ್ ನಲ್ಲಿ ಸಿಕ್ಕಾಪಟ್ಟೆ ಡಿಮ್ಯಾಂಡ್

ಬಾಲಿವುಡ್ ನಲ್ಲಿ 'ರಾಜ್ ರೀಬೂಟ್' ಮಾಡಿದ ನಂತರ ಹಿಂದಿಯಲ್ಲಿ ಹೆಚ್ಚು ಅವಕಾಶಗಳು ಬರಲು ಶುರುವಾಯಿತು. ಈ ಸಿನಿಮಾದಲ್ಲಿ ಇಮ್ರಾನ್ ಹಶ್ಮಿ ಜೊತೆ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದ ಕೃತಿಗೆ ಬಾಲಿವುಡ್ ಬೋಲ್ಡ್ ಆಗಿದೆ. ಅದಾದ ಬಳಿಕ 'ಗೆಸ್ಟ್ ಇನ್ ಲಂಡನ್', 'ಶಾದಿ ಮೆ ಜರೂರ್ ಆನಾ', 'ವೀರ್ ಕೀ ವೆಡ್ಡಿಂಗ್' ಕಾಣಿಸಿಕೊಂಡರು. ಈಗ 'ಕರ್ವಾನ್', ಯಮ್ಲ ಪಾಗ್ಲಾ ದಿವಾನ್: ಫಿರ್ ಸೇ, ಹಾಗೂ ಶಾರೂಖ್ ಖಾನ್ ಚಿತ್ರವೊಂದರಲ್ಲಿ ನಟಿಸುತ್ತಿದ್ದಾರೆ.

More from Filmibeat

English summary
As per reports, Kannada actress kriti kharbanda was rejects the darshan starrer yajamana film for her busy schedule. the movie directed by p kumar and produced by b suresh.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X