»   » ಬಹುಭಾಷೆ ಬೆಡಗಿ, ಕನ್ನಡತಿ ಲಕ್ಷ್ಮೀ ರೈ ಹೇಳಿದ್ದೇನು?

ಬಹುಭಾಷೆ ಬೆಡಗಿ, ಕನ್ನಡತಿ ಲಕ್ಷ್ಮೀ ರೈ ಹೇಳಿದ್ದೇನು?

Posted By:
Subscribe to Filmibeat Kannada
ಕನ್ನಡದ ಹುಡುಗಿ, ಬೆಳಗಾವಿ ಬೆಡಗಿ ಲಕ್ಷ್ಮೀ ರೈ, ನಾಲ್ಕುಭಾಷೆಗಳಲ್ಲಿ ಮಿಂಚುತ್ತಿದ್ದಾರೆ. ಇತ್ತೀಚಿಗಷ್ಟೇ ಕನ್ನಡದ 'ಕಲ್ಪನಾ' ಚಿತ್ರದಲ್ಲಿ ಸೂಪರ್ ಸ್ಟಾರ್ ಉಪೇಂದ್ರ ಜೋಡಿಯಾಗಿ ನಟಿಸಿದ್ದ ಲಕ್ಷ್ಮೀ ರೈ, ಈ ಚಿತ್ರದ ಮೂಲಕ ಕನ್ನಡದಲ್ಲಿ ಮೊದಲಿಗಿಂತ ಹೆಚ್ಚು ಮಿಂಚಿದ್ದಾರೆ. ಈ ಮೊದಲು ಲಕ್ಷ್ಮೀ ರೂ ನಟಿಸಿದ್ದ 'ಸ್ನೇಹಾನಾ ಪ್ರೀತೀನಾ' ಹಾಗೂ 'ಮಿಂಚಿನ ಓಟ' ಎರಡೂ ಚಿತ್ರಗಳು ಬಾಕ್ಸ್ ಆಫೀಸ್ ನಲ್ಲಿ ಮಕಾಡೆ ಮಲಗಿದ್ದವು.

ಇದೀಗ ಬಿಡುಗಡೆಗೆ ಸಿದ್ಧವಾಗಿರುವ ಎಎಂಆರ್ ರಮೇಶ್ ನಿರ್ದೇಶನದ 'ಅಟ್ಟಹಾಸ' ಚಿತ್ರದಲ್ಲಿ ಪಾತ್ರವೊಂದನ್ನು ಮಾಡಿದ್ದಾರೆ ಲಕ್ಷ್ಮಿ ರೈ. ಕನ್ನಡ, ತಮಿಳು, ತೆಲುಗು, ಮಲಯಾಳಂ ಹೀಗೆ ಯಾವುದೇ ಒಂದು ಭಾಷೆಗೆ ಫಿಕ್ಸ್ ಆಗದ ಇವರು ಎಲ್ಲಾ ಭಾಷೆಯ ಚಿತ್ರಗಳನ್ನು ಸಮಾನವಾಗಿ ನೋಡುವ ಮಾತನಾಡುತ್ತಾರೆ. ಜೊತೆಗೆ ಬಾಲಿವುಡ್ ಚಿತ್ರಗಳಲ್ಲೂ ಲಕ್ಷ್ಮೀ ರೈ ಕಾಣಿಸಿಕೊಳ್ಳುತ್ತಿದ್ದಾರೆ.

ಇಂತಹ ಬಹುಭಾಷಾ ನಟಿ ಲಕ್ಷ್ಮೀ ರೈ"ನಾನು ಯಾವುದೇ ಒಂದು ನಿರ್ಧಿಷ್ಟ ಭಾಷೆ ಚಿತ್ರಗಳ ಪರವಾಗಿ ನಿಲ್ಲಲಾರೆ. ಒಬ್ಬಳು ನಟಿಯಾಗಿ ನಾನು, ಎಲ್ಲಾ ಭಾಷೆಯ ಚಿತ್ರಗಳನ್ನೂ ಸಮಾನವಾಗಿ ನೋಡುವ ಮನಸ್ಥಿತಿ ಹೊಂದಿದ್ದೇನೆ. ಅದು ನನ್ನ ಕರ್ತವ್ಯ ಕೂಡ. ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಈ ಎಲ್ಲಾ ಭಾಷೆಗಳ ಚಿತ್ರಗಳಲ್ಲೂ ನಾನು ನಟಿಸಲು ಇಷ್ಟಪಡುತ್ತೇನೆ" ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ.

ತಮಿಳಿನಲ್ಲಿ ವಿಕ್ರಮ್‌ ನಾಯಕರಾಗಿದ್ದ 'ತಾಂಡವಂ'ನಲ್ಲಿ ಪಾತ್ರವೊಂದನ್ನು ಮಾಡಿರುವ ಲಕ್ಷ್ಮಿ ರೈ, ಈ ಪಾತ್ರದ ಮೂಲಕ ತಮಿಳು ಪ್ರೇಕ್ಷಕರ ಮನ ಗೆದ್ದಿದ್ದಾರೆ. ಈ ಚಿತ್ರದ ಪಾತ್ರವನ್ನು ಒಪ್ಪೊಕೊಂಡ ಗುಟ್ಟನ್ನು ಬಿಚ್ಚಿಟ್ಟಿರುವ ಲಕ್ಷ್ಮೀ ರೈ, "ನಿರ್ದೇಶಕ ವಿಜಯ್ ನಾನೇ ಬೇಕೆಂದು ರಚ್ಚೆ ಹಿಡಿದರು" ಎಂದು ಹೇಳಿಕೊಂಡಿದ್ದಾರೆ. ಈ ಮಧ್ಯೆ, ಅವರ ನಟನೆಯ ಬಹುಭಾಷಾ 'ಕಾಂಚನಾ' ಚಿತ್ರವು '3ಡಿ' ಆಗುವ ನಿರೀಕ್ಷೆಯಿದೆ.

ಒಟ್ಟಿನಲ್ಲಿ ಕನ್ನಡದ ಹುಡಗಿ ಲಕ್ಷ್ಮೀ ರೈ, ಬಹಭಾಷೆ ತಾರೆಯಾಗಿ ಮಿಂಚುತ್ತಿರುವುದು ಕನ್ನಡಿಗರಿಗೆ ಹೆಮ್ಮೆ ಎನಿಸಿದೆ. ಅವರೂ ಅಷ್ಟೇ, ಯಾವುದೇ ಒಂದು ಭಾಷೆಯ ಚಿತ್ರಕ್ಕೆ ಫಿಕ್ಸ್ ಆಗದೇ 'ಆಲ್ ಇಂಡಿಯಾ ಲೆವೆಲ್'ನಲ್ಲಿ ಮಿಂಚುವತ್ತಲೇ ತಮ್ಮ ಗಮನ ಕೇಂದ್ರೀಕರಿಸಿರುವುದು ಅವರದೇ ಮಾತುಗಳ ಮೂಲಕ ಗಮನಕ್ಕೆ ಬರುತ್ತಿದೆ. ಕನ್ನಡದಲ್ಲಿ ಅವರು ನಟಿಸಿರುವ ಇನ್ನೊಂದು ಚಿತ್ರ 'ಅಟ್ಟಹಾಸ' ಬಿಡುಗಡೆಗಾಗಿ ಅವರ ಕನ್ನಡದ ಅಭಿಮಾನಿಗಳು ಕಾಯುತ್ತಿದ್ದಾರೆ. (ಒನ್ ಇಂಡಿಯಾ ಕನ್ನಡ)

English summary
Kannada Actress Lakshmi Rai is acting in many languages now. She told that she won't fix for any one language and she considers all languages in equal. Her Kannada movie to release is AMR Ramesh directed Attahasa. 
 
Please Wait while comments are loading...