ಲಾಸ್ಯ ನಾಗರಾಜ್ ಜೊತೆ 4 ವರ್ಷ ಲಿವ್ ಇನ್ ಸಂಬಂಧದಲ್ಲಿದ್ದ ಆ ಖ್ಯಾತ ನಟ ಯಾರು ?

ಪ್ರೇಮ ಕುರುಡು.. ಇತಿಹಾಸದುದ್ದಕ್ಕೂ ಪ್ರೀತಿಗಂಟಿಕೊಂಡೇ ಬಂದ ಆರೋಪ ಇದು. ಆದರೆ ಬದಲಾದ ಕಾಲದಲ್ಲಿ ಪ್ರೀತಿಯ ವರಸೆ ಬದಲಾಗಿದೆ. ಭಾವೋದ್ವೇಗದ ಪ್ರೀತಿ, ಸ್ನೇಹವಾಗಿ ಅರಳಿ, ಬೆಳೆದು ಪ್ರಬುದ್ಧವಾಗುವ ತನಕ, ನಂಬುಗೆಗಳ ಅಡಿಪಾಯದಲ್ಲಿ ನಿಜಾರ್ಥದ ಅನುರಾಗ ಅರಳುವ ತನಕ... ಕಾಯುವ ತಂತ್ರ ಈಗಿನದು. ಬಾಳಪೂರ್ತಿ ಜೊತೆ ಬರುವ ಪ್ರೀತಿಯ ಗಟ್ಟಿತನವನ್ನು ಒಂದಲ್ಲ ಹತ್ತು ಬಾರಿ ಪರೀಕ್ಷಿಸುವ, ಪೊಳ್ಳೆನಿಸಿದರೆ ಕೈ ಬಿಡುವ, ತಾಳುವುದನ್ನು ಮಾತ್ರ ಆಯ್ದುಕೊಳ್ಳುವ ಪ್ರೀತಿಯ ಹೊಸ ಪರಿ ಇದು. ಇದಕ್ಕೆ ಲಾಸ್ಯಾ ನಾಗರಾಜ್ ಅವರ ವ್ಯೆಯಕ್ತಿಕ ಬದುಕು ಸದ್ಯದ ಉದಾಹರಣೆ.

ಹೌದು, ಲಾಸ್ಯ ನಾಗರಾಜ್.. ಕನ್ನಡದ ಚೆಲುವೆ. ಹೋಮ್ ಮಿನಿಸ್ಟರ್‌.. ದೃಶ್ಯ 2.. ಮಂಗಳವಾರ ರಜಾ ದಿನ.. ಹೀಗೆ ಅನೇಕ ಚಿತ್ರಗಳನ್ನು ಮಾಡಿರುವ ಲಾಸ್ಯ ಬಿಗ್ ಬಾಸ್ ಸೀಸನ್ 5ರ ಸ್ಫರ್ಧಿ ಕೂಡ ಹೌದು.

Kannada Actress Lasya Nagraj Opens Up About Breakup with Tamil Actor After 4-Year Relationship

ಆ ನಂತರ ಭರ್ಜರಿ ಬ್ಯಾಚುಲರ್ಸ್‌ನಲ್ಲಿ ಕೂಡ ಕಾಣಿಸಿಕೊಂಡಿದ್ದ ಲಾಸ್ಯ ದೂರದ ಕೆನಡಾದಲ್ಲಿ ಟೊರಾಂಟೊ ಫಿಲ್ಮ್ ಮೇಕಿಂಗ್ ಸ್ಕೂಲ್‌ನಲ್ಲಿ ಸಿನಿಮಾ ಮೇಕಿಂಗ್‌, ನಟನೆ, ನಿರ್ದೇಶನದ ಬಗ್ಗೆ ಕಲಿಯುತ್ತಿದ್ದಾರೆ. ಅಲ್ಲಿನ ಹಲವು ಭಾರತೀಯ ಮಕ್ಕಳಿಗೆ ಮತ್ತು ಕೆನಡಾದ ಜನರ ಮಕ್ಕಳಿಗೆ ಭರತನಾಟ್ಯ ತರಬೇತಿಯನ್ನು ಕೂಡ ನೀಡಿದ್ದಾರೆ.

ಇಷ್ಟೇ ಅಲ್ಲದೇ ಕೆನಡಾದ ಟೊರೊಂಟೊದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಶ್ವದ ನೂರಾರು ಮಾಡೆಲ್​ಗಳ ಮಧ್ಯೆ ರ್ಯಾಂಪ್ ವಾಕ್ ಮಾಡಿ ಮಿಸ್ ಏಷ್ಯಾ ಪೆಸಿಫಿಕ್ ರನ್ನರ್ ಅಪ್ ಕಿರೀಟವನ್ನು ಕೂಡ ಲಾಸ್ಯ ನಾಗರಾಜ್ ಮುಡಿಗೇರಿಸಿಕೊಂಡಿದ್ದಾರೆ.

ಇಂಥಾ ಲಾಸ್ಯ ನಾಗರಾಜ್ ಸದ್ಯ ತಮ್ಮ ಬ್ರೇಕಪ್ ಕಥೆಯನ್ನು ಹಂಚಿಕೊಂಡಿದ್ದಾರೆ. ಚಿತ್ರರಂಗದಲ್ಲಿಯೇ ಬದುಕು ರೂಪಿಸಿಕೊಂಡಿರುವ ನಟನನ್ನು ನಾಲ್ಕು ವರ್ಷ ಪ್ರೀತಿ ಮಾಡಿದ್ದೆ ಎಂದು ಹೇಳಿದ್ದಾರೆ.

ಹೌದು, ಈ ಕುರಿತು ಫಸ್ಟ್ ಡೇ ಫಸ್ಟ್ ಶೋ ಯೂಟ್ಯೂಬ್ ಚಾನೆಲ್‌ಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಲಾಸ್ಯ ನಾಗರಾಜ್ ನಾನು ಕೆಲ ಕಾಲ ಚೆನ್ನೈನಲ್ಲಿದ್ದೆ ಆ ಸಮಯದಲ್ಲಿ ಚಿತ್ರರಂಗದಲ್ಲಿರುವ ನಟನ ಜೊತೆ ಪ್ರೀತಿಯಾಗಿತ್ತು, ನಾಲ್ಕು ವರ್ಷ ನಾವು ಜೊತೆಯಲ್ಲಿಯೇ ಇದ್ದೇವು ಎಂದು ಹೇಳಿದ್ದಾರೆ.

ಆರಂಭದಲ್ಲಿ ನಾನು ಪ್ರತೈಕವಾಗಿ ಅಪಾರ್ಟ್‌ಮೆಂಟ್‌ನಲ್ಲಿ ವಾಸ ಮಾಡ್ತಿದ್ದೆ, ಅವರು ಅವರ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದರು, ಆದರೆ.. ತುಂಬಾ ದೂರ ಆಗ್ತಿತ್ತು, ಇನ್ನು ಈ ಕಡೆ ನಾನೊಬ್ಬಳೇ ಇರುವುದರಿಂದ ಅಪ್ಪ ಅಮ್ಮಗೆ ಕೂಡ ಒಬ್ಬಳೇ ಇರ್ತಾಳೆ ಎನ್ನುವ ಸಹಜ ಆತಂಕ ಇತ್ತು.

ಇನ್ನು ಆ ವ್ಯಕ್ತಿ ತುಂಬಾನೇ ಒಳ್ಳೆಯವರು. ನಾನು ಈಗಲೂ ಅವರು ಒಳ್ಳೆಯವರು ಅಂತಾನೇ ಹೇಳ್ತೀನಿ, ನನ್ನ ವಯಸ್ಸಿನವರೇ, ತುಂಬಾ ಬೆಂಬಲ ಕೊಡ್ತಿದ್ದರು.

ಹೀಗಾಗಿ ನನ್ನ ಅಪ್ಪ-ಅಮ್ಮಗೆ ಅವರ ಮೇಲೆ ನಂಬಿಕೆ ಇತ್ತು, ಇನ್ನು ಹೇಗೂ ನಾವು ಮದುವೆಯಾಗಬೇಕು ಎಂದುಕೊಂಡಿದ್ದರಿಂದ ನನ್ನ ತಂದೆ ತಾಯಿಯೇ ಒಬ್ಬಳೇ ಇರುವ ಬದಲು ಅವರ ಜೊತೆಯಲ್ಲಿ ಅವರ ಮನೆಯಲ್ಲಿರು ಅಂತ ಹೇಳಿದರು.

ಆದರೆ ಕಾರಣಾಂತರಗಳಿಂದ ಆ ಸಂಬಂಧ ಉಳಿಯಲಿಲ್ಲ ಎಂದು ಲಾಸ್ಯಾ ನಾಗರಾಜ್ ಫಸ್ಟ್ ಡೇ ಫಸ್ಟ್ ಶೋ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಹೀಗೆ ನಾಲ್ಕು ವರ್ಷಗಳ ಕಾಲ ಪ್ರೀತಿಸಿ-ಮೋಹಿಸಿ ಸದ್ಯ ಆ ಸಂಬಂಧದಿಂದ ಹೊರ ಬಂದಿರುವ ಲಾಸ್ಯ ನಾಗರಾಜ್‌ ಸದ್ಯ ಮದುವೆಯಾಗುವ ನಿರ್ಧಾರ ಮಾಡಿದ್ದಾರೆ. ಆದರೆ ಈ ಬಾರಿ ಲವ್ ಮ್ಯಾರೇಜ್ ಮೇಲೆ ಅಲ್ಲ ಬದಲಿಗೆ ಅರೆಂಜ್ ಮ್ಯಾರೇಜ್ ಕಡೆ ಇವರ ಒಲವು ಇದೆ. ಯಾರಾದರೂ ಹುಡುಗ ಸಿಕ್ಕರೆ 08-09 ತಿಂಗಳು ಅವರನ್ನು ಅರ್ಥ ಮಾಡಿಕೊಳ್ಳಲು ಸಮಯ ಬೇಕು, ಯಾರಿಗೆ ಗೊತ್ತು ಮುಂದಿನ ವರ್ಷ ಮದುವೆಯಾದರು ಆಗಬಹುದು ಎಂದು ಲಾಸ್ಯ ನಾಗರಾಜ್ ಇದೇ ಸಂದರ್ಶನದಲ್ಲಿ ಹೇಳಿದ್ದಾರೆ.

More from Filmibeat

English summary
Kannada film actress Lasya Nagraj has revealed details about her breakup with a Tamil actor, ending their four-year-long relationship
Read more about: break up love filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X