»   » 'ಸೀತಾರಾಮ ಕಲ್ಯಾಣ'ಕ್ಕಾಗಿ ಬೆಂಗಳೂರಿಗೆ ಬಂದ 'ರನ್ನ'ನ ಅತ್ತೆ ಮಧೂ

'ಸೀತಾರಾಮ ಕಲ್ಯಾಣ'ಕ್ಕಾಗಿ ಬೆಂಗಳೂರಿಗೆ ಬಂದ 'ರನ್ನ'ನ ಅತ್ತೆ ಮಧೂ

Posted By:
Subscribe to Filmibeat Kannada

ದಶಕಗಳ ಹಿಂದೆ ಕ್ರೇಜಿ ಸ್ಟಾರ್ ರವಿಚಂದ್ರನ್ ಜೊತೆಗೆ 'ಬೊಂಬೆ ಬೊಂಬೆ..' ಎಂದು ಹಾಡುತ್ತಾ ಸೊಂಟ ಬಳುಕಿಸಿದ್ದವರು ನಟಿ ಮಧೂ. 'ಅಣ್ಣಯ್ಯ' ಸಿನಿಮಾದಲ್ಲಿ ಅತ್ತೆಗೆ ಸವಾಲು ಹಾಕಿದ್ದ ಸೊಸೆ ಮಧು, ವರ್ಷಗಳ ಬಳಿಕ 'ರನ್ನ'ನಿಗೆ ಅತ್ತೆಯಾಗಿ ಸ್ಯಾಂಡಲ್ ವುಡ್ ನಲ್ಲಿ ಮಿಂಚಿದ್ದರು.

ಕಿಚ್ಚ ಸುದೀಪ್ ಅಭಿನಯದ 'ರನ್ನ' ಸಿನಿಮಾ ಬಳಿಕ ಇದೀಗ ಮತ್ತೆ ಗಾಂಧಿನಗರದ ಕಡೆ ನಟಿ ಮಧೂ ಮುಖ ಮಾಡಿದ್ದಾರೆ. ನಿಖಿಲ್ ಕುಮಾರ್ ಅಭಿನಯದ ಮೂರನೇ ಸಿನಿಮಾ 'ಸೀತಾರಾಮ ಕಲ್ಯಾಣ' ಚಿತ್ರದಲ್ಲಿ ನಟಿ ಮಧೂ ಅಭಿನಯಿಸುತ್ತಿದ್ದಾರೆ.

Kannada Actress Madhoo to play special role in Seetha Rama Kalyana

'ಜಾಗ್ವಾರ್' ಹಾಗೂ 'ಕುರುಕ್ಷೇತ್ರ' ಬಳಿಕ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರ್ ನಟಿಸುತ್ತಿರುವುದು 'ಸೀತಾರಾಮ ಕಲ್ಯಾಣ' ಚಿತ್ರದಲ್ಲಿ. 'ಅಂಜನಿಪುತ್ರ' ಬಳಿಕ ಎ.ಹರ್ಷ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳ್ತಿದ್ದಾರೆ.

'ರನ್ನ'ನ ಅತ್ತೆ ಮಧು ರಿಚ್ ಲುಕ್ ವಿಡಿಯೋ ಔಟ್

Kannada Actress Madhoo to play special role in Seetha Rama Kalyana

ನಿಖಿಲ್ ಕುಮಾರ್ ಗೆ ಡಿಂಪಲ್ ಕ್ವೀನ್ ರಚಿತಾ ರಾಮ್ ನಾಯಕಿ ಆಗಿರುವುದು ಈ ಚಿತ್ರದಲ್ಲೇ. ಹಳ್ಳಿ ಬ್ಯಾಕ್ ಡ್ರಾಪ್ ನಲ್ಲಿ 'ಸೀತಾರಾಮ ಕಲ್ಯಾಣ' ಚಿತ್ರದ ಕಥೆ ಸಾಗಲಿದ್ದು, ಮಧೂ ನಿರ್ವಹಿಸುತ್ತಿರುವ ಪಾತ್ರದ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

ರೋಜಾ ಖ್ಯಾತಿಯ ಮಧುಬಾಲಾ ಸೆಕೆಂಡ್ ಇನ್ನಿಂಗ್ಸ್

'ಸೀತಾರಾಮ ಕಲ್ಯಾಣ' ಚಿತ್ರದ ಬಗ್ಗೆ ಹೆಚ್ಚಿನ ಅಪ್ ಡೇಟ್ಸ್ ಕೊಡ್ತಾಯಿರ್ತೀವಿ, ಫಿಲ್ಮಿಬೀಟ್ ಕನ್ನಡ ಓದುತ್ತಿರಿ.

English summary
Kannada Actress Madhoo to play special role in 'Seetha Rama Kalyana'. Take a look at the picture.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X