For Quick Alerts
  ALLOW NOTIFICATIONS  
  For Daily Alerts

  'ಒಲವಿನ' ಬದುಕಿನಲ್ಲಿ ನೊಂದ ನಟಿ ಮಹಾಲಕ್ಷ್ಮಿ 'ಸನ್ಯಾಸಿನಿ' ಆದ ಕಥೆ-ವ್ಯಥೆ

  By *ಮಾಹಿತಿ ಕೃಪೆ: ಪ್ರಜಾ ಟಿವಿ
  |

  ''ದೂರದ ಊರಿಂದ ಹಮ್ಮೀರ ಬಂದ...ಜರತಾರಿ ಸೀರೆ ತಂದ...'' - 'ಸ್ವಾಭಿಮಾನ' ಚಿತ್ರದ ಈ ಹಾಡು ಕೇಳಿದ ತಕ್ಷಣ ನಮಗೆಲ್ಲ ನೆನಪಾಗುವ, ಪದೇ ಪದೇ ಕಾಡುವ ನಟಿ ಮಹಾಲಕ್ಷ್ಮಿ.

  ಕಣ್ಣಲ್ಲೇ ಕಾಮನೆಯನ್ನು ಉಕ್ಕಿಸುತ್ತಿದ್ದ, ಹಾವ-ಭಾವಗಳಲ್ಲೇ ಉನ್ಮಾದವನ್ನು, ಸಹಜಾಭಿನಯವನ್ನು ನೀಡುತ್ತಿದ್ದ ನಟಿ ಈಕೆ. ಡಾ.ರಾಜ್ ಕುಮಾರ್, ಅಂಬರೀಶ್, ಅನಂತ್ ನಾಗ್, ಶಂಕರ್ ನಾಗ್, ರವಿಚಂದ್ರನ್ ಸೇರಿದಂತೆ ಅಂದಿನ ಕಾಲದ ದಿಗ್ಗಜರ ಜೊತೆ ನಟಿಸಿದ್ದ ಮಹಾಲಕ್ಷ್ಮಿ ಕಾಲಿವುಡ್ ಹಾಗೂ ಟಾಲಿವುಡ್ ನಲ್ಲೂ ನಿರ್ಮಾಪಕರ ಪಾಲಿಗೆ 'ವಿಜಯಲಕ್ಷ್ಮಿ' ಆಗಿದ್ದವರು.

  ನಟಿ ಮಹಾಲಕ್ಷ್ಮಿ ಅಭಿನಯದ ಸ್ಮರಣೀಯ ಚಿತ್ರಗಳ ಪಟ್ಟಿಯಲ್ಲಿ - 'ಸ್ವಾಭಿಮಾನ', 'ಮದುವೆ ಮಾಡು ತಮಾಷೆ ನೋಡು', 'ತಾಯಿ ಕೊಟ್ಟ ತಾಳಿ', 'ಜಯಸಿಂಹ', 'ಬ್ರಹ್ಮ ವಿಷ್ಣು ಮಹೇಶ್ವರ', 'ಪರಶುರಾಮ', 'ಹೆಂಡ್ತೀಗೆ ಹೇಳ್ಬೇಡಿ', 'ಮನೇಲಿ ಇಲಿ ಬೀದಿಲಿ ಹುಲಿ' - ಸಿನಿಮಾಗಳು ಸೂಪರ್ ಹಿಟ್ ಆಗಿದ್ದವು. [ಗಾಯಕಿ ಮಹಾಲಕ್ಷ್ಮಿ ಬದುಕಿನಲ್ಲಿ ನಡೆದ ದುರಂತಕತೆ!]

  ಬಣ್ಣದ ಬದುಕಿಗೆ ಕಾಲಿಟ್ಟ ಕೆಲ ವರ್ಷಗಳಲ್ಲೇ ಯಶಸ್ವಿ ತಾರೆ ಎನಿಸಿಕೊಂಡ ಮಹಾಲಕ್ಷ್ಮಿ, ಉತ್ತುಂಗದ ಕಾಲದಲ್ಲಿ ಇರುವಾಗಲೇ ಚಿತ್ರರಂಗವನ್ನು ತೊರೆದರು. ಈ ಬಗ್ಗೆ ಕನ್ನಡದ ಜನಪ್ರಿಯ ವಾಹಿನಿ 'ಪ್ರಜಾ ಟಿವಿ' ವರದಿ ಮಾಡಿದೆ. ಸಂಪೂರ್ಣ ಮಾಹಿತಿ ಕೆಳಗಿರುವ ಫೋಟೋ ಸ್ಲೈಡ್ ಗಳಲ್ಲಿದೆ. ಓದಿರಿ....

  ಮಹಾಲಕ್ಷ್ಮಿ ಚಿತ್ರರಂಗ ತೊರೆದದ್ದು ಯಾಕೆ.?

  ಮಹಾಲಕ್ಷ್ಮಿ ಚಿತ್ರರಂಗ ತೊರೆದದ್ದು ಯಾಕೆ.?

  ಬಹು ಬೇಡಿಕೆಯಲ್ಲಿರುವಾಗಲೇ ನಟಿ ಮಹಾಲಕ್ಷ್ಮಿ ಚಿತ್ರ ಜೀವನಕ್ಕೆ ಗುಡ್ ಬೈ ಹೇಳಿದ್ದಕ್ಕೆ ನಿಖರ ಕಾರಣವನ್ನು ಯಾರೂ ಹೇಳುತ್ತಿಲ್ಲ. ಈ ವಿಚಾರದಲ್ಲಿ ಭಿನ್ನ ಅಭಿಪ್ರಾಯಗಳು, ಹೇಳಿಕೆಗಳು ಗಾಂಧಿನಗರದಲ್ಲಿದೆ. ಅದರಲ್ಲಿ ಒಂದು ಈಕೆಯ ಒಲವಿನ ವಿಷಯ.

  ಮಹಾಲಕ್ಷ್ಮಿ ಪ್ರೇಮ ಪಲ್ಲವಿ...

  ಮಹಾಲಕ್ಷ್ಮಿ ಪ್ರೇಮ ಪಲ್ಲವಿ...

  ಕನ್ನಡದ ಖ್ಯಾತ ನಟ, ನಿರ್ದೇಶಕ ಹಾಗೂ ನಿರ್ಮಾಪಕರೊಂದಿಗೆ ನಟಿ ಮಹಾಲಕ್ಷ್ಮಿ ಅಪಾರ ಒಲವನ್ನು ಹೊಂದಿದ್ದರು. ದಿನ ಕಳೆದಂತೆ ಇವರೊಳಗಿನ ಪ್ರೇಮ ಪಲ್ಲವಿ ಹೊಸದೊಂದು ರಾಗ ನುಡಿಸಲು ಪ್ರಾರಂಭಿಸಿತ್ತು.

  ವಿವಾದ ಶುರು ಆಯ್ತು

  ವಿವಾದ ಶುರು ಆಯ್ತು

  ಇತ್ತ 'ಆ' ನಟ ಸಹ ಪ್ರೀತಿಯ ಒರತೆಯನ್ನು ಹೊಮ್ಮಿಸಲು ಶುರು ಮಾಡಿದ್ರು. ಆಗಲೇ ಇಬ್ಬರ ಮನೆಯಲ್ಲಿಯೂ ಭಾರಿ ವಿವಾದ ಎಬ್ಬಿಸಿತು ಎನ್ನುವ ಮಾತಿದೆ.

  ದೂರವಾಗಲು ಇಚ್ಛಿಸಲಿಲ್ಲ.!

  ದೂರವಾಗಲು ಇಚ್ಛಿಸಲಿಲ್ಲ.!

  ಮಹಾಲಕ್ಷ್ಮಿ ಹಾಗೂ 'ಆ' ನಟ ದೂರವಾಗಲು ಇಚ್ಛಿಸಲಿಲ್ಲ. ಮದುವೆಯಾಗುವ ಪ್ರಯತ್ನವನ್ನು ಹಲವು ರೀತಿಯಲ್ಲಿ ಮಾಡಿದರು. ಈ ವಿಷಯ ಗಾಂಧಿನಗರಕ್ಕೆ ಗೊತ್ತಾದ ಮೇಲಂತೂ ಭಿನ್ನ-ಭಿನ್ನ ತಿರುವು ಪಡೆಯಿತು.

  ಮನೆಮಂದಿಗೆ ಗೊತ್ತಾದ ಮೇಲೆ....

  ಮನೆಮಂದಿಗೆ ಗೊತ್ತಾದ ಮೇಲೆ....

  ಒಂದು ಸಂದರ್ಭದಲ್ಲಿ ಮಹಾಲಕ್ಷ್ಮಿ 'ಆ' ನಟನೊಂದಿಗೆ ಹೆಚ್ಚು ಸಲುಗೆಯನ್ನು ಬೆಳೆಸಿಕೊಂಡಿದ್ದರಿಂದ, ಇವರನ್ನು ಬೇರ್ಪಡಿಸಲು ಸಾಧ್ಯವೇ ಇಲ್ಲ ಎನ್ನುವಂತ ಪರಿಸ್ಥಿತಿ ಬಂದೊದಗಿತ್ತು. ಆಗಲೇ 'ಆ' ನಾಯಕ ನಟನ ಮನೆಯವರು ಒಂದು ನಿರ್ಧಾರ ತಳೆಯುವಂತೆ ಮಾಡಿತ್ತು.

  ನಟನಿಗೆ ಮದುವೆ ಆಯ್ತು.!

  ನಟನಿಗೆ ಮದುವೆ ಆಯ್ತು.!

  ಪ್ರೇಮ ಪ್ರಕರಣದ ನಂತರ 'ಆ' ನಟನಿಗೆ ಮನೆ ಮಂದಿ ಬೇರೆ ಹುಡುಗಿಯನ್ನು ತಂದು ಮದುವೆ ಮಾಡಿದ್ರು. ಆ ನಂತರದಲ್ಲಿ ಮಹಾಲಕ್ಷ್ಮಿ ಹಾಗೂ 'ಆ' ನಟನ ಸಂಬಂಧ ಮುರಿದು ಬಿತ್ತು. ಇದರಿಂದಲೇ ಅವರು ಚಿತ್ರರಂಗವನ್ನು ತೊರೆಯುವಂತಾಯಿತು ಎನ್ನಲಾಗಿದೆ.

  ನಂತರ ಗಾಸಿಪ್ ಗಳೇ ಹೆಚ್ಚು.!

  ನಂತರ ಗಾಸಿಪ್ ಗಳೇ ಹೆಚ್ಚು.!

  ಈ ನಡುವಲ್ಲಿ ಕನ್ನಡ ಚಿತ್ರರಂಗವನ್ನು ಬಿಟ್ಟು, ತಮ್ಮ ತವರು ತಮಿಳುನಾಡು ಸೇರಿದ ನಟಿ ಮಹಾಲಕ್ಷ್ಮಿ, ಆ ನಂತರದಲ್ಲಿ ವಯೋಸಹಜವಾಗಿ ಗಂಡ-ಮನೆ-ಮಕ್ಕಳು ಅಂತಿದ್ದಾರೆ ಎಂದು ಎಲ್ಲರೂ ಸುಮ್ಮನಾದರು. ಆದರೂ, ಗಾಸಿಪ್ ಪ್ರಿಯರ ಕಿವಿ ಹಾಗೂ ನಾಲಿಗೆ ಮಾತ್ರ ಇನ್ನೂ ತಮ್ಮ ಚಪಲವನ್ನು ತೀರಿಸಿಕೊಂಡಿರಲಿಲ್ಲ. ಹೀಗಾಗಿ ಮತ್ತೆ ಮತ್ತೆ ಗಾಸಿಪ್ ಗಳಿಗೆ ಒಳಗಾದರು ಮಹಾಲಕ್ಷ್ಮಿ.

  ಯಾವುದು ನಿಜ...ಯಾವುದು ಸುಳ್ಳು.?

  ಯಾವುದು ನಿಜ...ಯಾವುದು ಸುಳ್ಳು.?

  ಚಿತ್ರರಂಗದಿಂದ ದೂರವಾದ ನಂತರ, ಚಿತ್ರರಂಗಕ್ಕೆ ಹೊರತಾದ ವ್ಯಕ್ತಿಯೋರ್ವರನ್ನು ಮಹಾಲಕ್ಷ್ಮಿ ಮದುವೆ ಆದರು ಅಂತ ಸುದ್ದಿ ಹರಿದಾಡಿತ್ತು. ನಂತರ ಮೊದಲನೇ ಪತಿಗೆ ವಿಚ್ಛೇದನ ನೀಡಿದ ಮಹಾಲಕ್ಷ್ಮಿ ಬಳಿಕ ಎರಡು ಮದುವೆ ಆದರು ಅಂತ ಹೇಳುವವರೂ ಇದ್ದಾರೆ.

  ಮಾನಸಿಕ ಖಿನ್ನತೆ...

  ಮಾನಸಿಕ ಖಿನ್ನತೆ...

  ಮೂರನೇ ಪತಿ ಜೊತೆ ಕೆಲ ಕಾಲ ಯು.ಎಸ್ ನಲ್ಲಿ ತಂಗಿದ್ದರು. ಆದ್ರೆ, ದಾಂಪತ್ಯ ಕಲಹದಿಂದ ಮೂರನೇ ಮದುವೆಯೂ ಮುರಿದುಬಿದ್ದಾಗ ನಟಿ ಮಹಾಲಕ್ಷ್ಮಿ ಮಾನಸಿಕ ಖಿನ್ನತೆಗೆ ಒಳಗಾದರು ಎಂಬುದು ಕೆಲ ಮೂಲಗಳ ಮಾಹಿತಿ.

  ನಟಿ ಮಹಾಲಕ್ಷ್ಮಿ ಬಗ್ಗೆ ಮಹತ್ವದ ವಿಷಯ...

  ನಟಿ ಮಹಾಲಕ್ಷ್ಮಿ ಬಗ್ಗೆ ಮಹತ್ವದ ವಿಷಯ...

  ಮಹಾಲಕ್ಷ್ಮಿ ಚಿತ್ರರಂಗದಿಂದ ದೂರವಾಗಿ ಬಹಳ ಕಾಲವೇ ಆಗಿದೆ. ಆದರೆ ಅವರ ಬಗ್ಗೆ ಇರುವ ಕುತೂಹಲ ಈವರೆಗೂ ಹಾಗೇ ಇದೆ. ಅವರು ಎಲ್ಲಿದ್ದಾರೆ? ಏನು ಮಾಡುತ್ತಿದ್ದಾರೆ ಎನ್ನುವುದು ಇಂದಿಗೂ ಯಾರೊಬ್ಬರಿಗೂ ತಿಳಿಯದ ವಿಚಾರವಾಗಿದೆ. ಈ ಕುರಿತಂತೆ 'ಪ್ರಜಾ ಟಿವಿ' ಮಹತ್ವದ ವಿಷಯ ನಿಮ್ಮ ಮುಂದಿಟ್ಟಿದೆ. ಅದೇನು ಅಂತ ತಿಳಿಯಲು ಮುಂದಿನ ಸ್ಲೈಡ್ ಕ್ಲಿಕ್ಕಿಸಿ....

  ಸನ್ಯಾಸಿನಿ ಆಗಿದ್ದಾರಾ ಮಹಾಲಕ್ಷ್ಮಿ.?

  ಸನ್ಯಾಸಿನಿ ಆಗಿದ್ದಾರಾ ಮಹಾಲಕ್ಷ್ಮಿ.?

  ಮಹಾಲಕ್ಷ್ಮಿ ಎಲ್ಲರಿಂದ ದೂರವಾದಾಗ, ಹಲವು ಊಹಾಪೋಹಗಳು, ವಿಚಾರಗಳು ಅವರ ಸಂಗತಿಯಲ್ಲಿ ಹರಿದಾಡಿದ್ದವು. ಅದರಲ್ಲಿ ಪ್ರಮುಖವಾದದ್ದು - ''ಮಹಾಲಕ್ಷ್ಮಿ ಎಲ್ಲವನ್ನೂ ತ್ಯಜಿಸಿ ಪರತ್ಯಾಗಿಯಾಗಿದ್ದಾರೆ'' ಎನ್ನುವುದು.

  ಯಾಕೆ ಹೀಗಾದ್ರು.?

  ಯಾಕೆ ಹೀಗಾದ್ರು.?

  ಮಹಾಲಕ್ಷ್ಮಿ ಕೆಲ ವಿಚಾರಗಳಿಂದ ಮನ ನೊಂದಿರುವುದು ನಿಜವೇ ಆದರೂ ಅವರು ಎಲ್ಲರನ್ನು ದೂರ ಸರಿಸಿ ಎಲ್ಲಿಯೂ ಹೋಗಿಲ್ಲ. ವಿರಾಗಿನಿಯಾಗಿ ಭವ ಬಂಧನವೇ ಬೇಡವೆಂದು ಹೇಳುವಂತಾಗಿದ್ದಾರೆ. ಯಾಕೆ ಹೀಗೆ ಮಾಡಿದ್ರು ಎಂದು ಹೇಳುವುದಕ್ಕೆ ಅವರು ಯಾವ ಪ್ರಶ್ನೆಗಳಿಗೂ ಉತ್ತರ ನೀಡುತ್ತಿಲ್ಲ. ಇನ್ನು ಯಾವ ಸಂದರ್ಶನ ಕಾರರಿಗೂ ಸಹ ಸಂದರ್ಶನ ನೀಡುತ್ತಿಲ್ಲ.

  ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾದ ಮಹಾಲಕ್ಷ್ಮಿ

  ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾದ ಮಹಾಲಕ್ಷ್ಮಿ

  ನಟಿ ಮಹಾಲಕ್ಷ್ಮಿ ಬಗ್ಗೆ ಹೇಳಲೇಬೇಕಾದ ಮತ್ತೊಂದು ವಿಚಾರವೆಂದರೆ ಮಹಾಲಕ್ಷ್ಮಿ ಹಿಂದು ಧರ್ಮವನ್ನು ಬಿಟ್ಟು, ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. ಅವರ ಈಗಿನ ಫೋಟೋ ಸಹ ಹೊರ ಜಗತ್ತಿಗೆ ಕಂಡು ಬರದಂತೆ ಎಚ್ಚರ ವಹಿಸಿದ್ದಾರೆ.

  ಈಗ ಎಲ್ಲಿದ್ದಾರೆ.?

  ಈಗ ಎಲ್ಲಿದ್ದಾರೆ.?

  ಬಲ್ಲವರ ಪ್ರಕಾರ, ಸದ್ಯ ಮಹಾಲಕ್ಷ್ಮಿ ಚೆನ್ನೈನ ಚರ್ಚ್ ಒಂದರಲ್ಲಿ ಇದ್ದಾರೆ.

  English summary
  According to Popular Kannada News Channel Prajaa Tv's special report, Kannada Actress Mahalakshmi has turned Nun.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X