ಸಪ್ತಪದಿ ತುಳಿಯಲಿರುವ 'ಕಿರಗೂರಿನ ಗಯ್ಯಾಳಿ' ಮಾನಸ ಜೋಷಿ
ನಿರ್ದೇಶಕ ಸುನಿ ಅವರು ಆಕ್ಷನ್-ಕಟ್ ಹೇಳಿದ್ದ 'ಬಹುಪರಾಕ್' ಚಿತ್ರದ ಮೂಲಕ ಸ್ಯಾಂಡಲ್ ವುಡ್ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟ ನಟಿ ಮಾನಸ ಜೋಷಿ ಅವರು ಸದ್ಯದಲ್ಲೇ ಸಪ್ತಪದಿ ತುಳಿಯಲಿದ್ದಾರೆ.
ವರ ಸಂಕರ್ಷಣ ಎಂಬುವವರ ಜೊತೆ ನಟಿ ಮಾನಸ ಜೋಷಿ ಅವರ ಮದುವೆ ನಿಶ್ಚಯವಾಗಿದೆ. ಇದೇ ಡಿಸೆಂಬರ್ 20 ರಂದು ಹಿರಿಯರ ಸಮ್ಮುಖದಲ್ಲಿ ಬೆಂಗಳೂರಿನಲ್ಲಿ ಸಂಪ್ರದಾಯ ಬದ್ಧವಾಗಿ ಮಾನಸ ಅವರು ವರ ಸಂಕರ್ಷಣ ಅವರ ಕೈ ಹಿಡಿಯಲಿದ್ದಾರೆ. ಮದುವೆ ಹಿಂದಿನ ದಿನ ಜೆ.ಪಿ ನಗರದಲ್ಲಿ ಮಾನಸ ಅವರ ಆರತಕ್ಷತೆ ನಡೆಯಲಿದೆ.

ನಟಿ ಮಾನಸ ಜೋಷಿ ಅವರು ದೂರದರ್ಶನ ವಾಹಿನಿಯ ಮಹೇಶ್ ಜೋಷಿ ಅವರ ಮಗಳು ಎಂಬುದು ಹಲವರಿಗೆ ಗೊತ್ತಿಲ್ಲದ ಸಂಗತಿ. 'ಬಹುಪರಾಕ್' ಸಿನಿಮಾದಲ್ಲಿ ನಟಿಸಿದ ನಂತರ ಮಾನಸ ಅವರು 'ಹರಿವು', 'ಹಜ್', 'ಲಾಸ್ಟ್ ಬಸ್', 'ಕಿರಗೂರಿನ ಗಯ್ಯಾಳಿಗಳು' ಸೇರಿದಂತೆ ಹಲವಾರು ಚಿತ್ರಗಳಲ್ಲಿ ಮಿಂಚಿದ್ದಾರೆ.
ಸದ್ಯಕ್ಕೆ ನಟಿ ಮಾನಸ ಜೋಷಿ ನಟಿಸಿರುವ 'ಕಿರಗೂರಿನ ಗಯ್ಯಾಳಿಗಳು' ಮತ್ತು 'ಲಾಸ್ಟ್ ಬಸ್' ತೆರೆಗೆ ಬರಲು ಸಿದ್ಧವಾಗಿದೆ. ಮಾತ್ರವಲ್ಲದೇ ಮಾನಸ ಅವರು ಹಿರಿತೆರೆ ಮಾತ್ರವಲ್ಲದೇ ಕಿರುತೆರೆ ಕ್ಷೇತ್ರದಲ್ಲೂ ಮಿಂಚುತ್ತಿದ್ದಾರೆ.['ಬಹುಪರಾಕ್' ವಿಮರ್ಶೆ: ನಾನಾರೆಂಬುದು ನಾನಲ್ಲ]

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಮಹಾದೇವಿ' ದಾರಾವಾಹಿಯಲ್ಲಿ ನಟಿ ಮಾನಸ ಜೋಷಿ ಅವರು ದೇವಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಈಗಾಗಲೇ ಕಿರುತೆರೆ, ರಂಗಭೂಮಿ ಮತ್ತು ಬೆಳ್ಳಿತೆರೆಯ ಮೇಲೆ ಬಿಜಿಯಾಗಿರುವ ಕೃಷ್ಣ ಸುಂದರಿ ನಟಿ ಮಾನಸ ಜೋಷಿ ಅವರು ಮದುವೆಯಾದ ನಂತರ ಕೂಡ ನಟನಾ ಕ್ಷೇತ್ರದಲ್ಲಿ ಮುಂದುವರೆಯುತ್ತಾರ ಇಲ್ವೋ ಅನ್ನೋದನ್ನ ಕಾದು ನೋಡೋಣ.


Click it and Unblock the Notifications











