'ಪೈಲ್ವಾನ್' ನೋಡಿ ಸ್ಯಾಂಡಲ್ ವುಡ್ ಸ್ಟಾರ್ಸ್ ಹೇಳಿದ್ದೇನು?
Recommended Video
ಸ್ಯಾಂಡಲ್ ವುಡ್ ನಲ್ಲಿ ಸದ್ಯ ಪೈಲ್ವಾನ್ ಚಿತ್ರದ್ದೆ ಹವಾ. ಸಿನಿಮಾ ರಿಲೀಸ್ ಆಗಿ ಐದು ದಿನಗಳಾದರು ಪೈಲ್ವಾನ್ ಸಿನಿಮಾದ ಮೇಲಿನ ಕ್ರೇಜ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಚಿತ್ರ ನೋಡಿ ಸಂತಸಪಟ್ಟ ಅಭಿಮಾನಿಗಳು ಫೋಟೋ ಕ್ಲಿಕ್ಕಿಸಿಕೊಂಡು ಟ್ವಿಟರ್ ನಲ್ಲಿ ಕಿಚ್ಚ ಸುದೀಪ್ ಗೆ ಪೋಸ್ಟ್ ಮಾಡುತ್ತಿದ್ದಾರೆ.
ಒಂದಲ್ಲ ಎರಡಲ್ಲ, ನಾಲ್ಕೈದು ಬಾರಿ ಸಿನಿಮಾ ವೀಕ್ಷಿಸಿದ್ದೇವೆ ಎಂದು ಕೆಲವು ಅಭಿಮಾನಿಗಳು ಖುಷಿ ಪಡುತ್ತಿದ್ದಾರೆ. ಅಭಿಮಾನಿಗಳ ಟ್ವೀಟ್ ಗೆ ಸುದೀಪ್ ಪ್ರತಿಕ್ರಿಯೆ ನೀಡುವ ಮೂಲಕ ಧನ್ಯವಾದ ಹೇಳುತ್ತಿದ್ದಾರೆ. ವಿಶೇಷ ಅಂದ್ರೆ ಅಭಿಮಾನಿಗಳು ಮಾತ್ರವಲ್ಲದೆ ಸ್ಯಾಂಡಲ್ ವುಡ್ ಸ್ಟಾರ್ಸ್ ಸಹ ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಭಾವನಾತ್ಮಕ ಸಂಬಂಧ
"ಬಾಡಿಯನ್ನು ಹುರಿಗೊಳಿಸಿ. ಭಾವನೆಗಳನ್ನು ಹದವಾಗಿರಿಸಿ, ಕುಸ್ತಿ ಮತ್ತು ಬಾಕ್ಸಿಂಗ್ ಎರಡರಲ್ಲೂ ಸುದೀಪ್ ಜೀವಿಸಿದ್ದಾರೆ. ಪೈಲ್ವಾನ್ ಚಿತ್ರದ ಧನಾತ್ಮಕ ಅಂಶ ಎಂದರೆ, ಆಟದ ಜೊತೆ ಕೌಟುಂಬಿಕ ಭಾವನಾತ್ಮಕ ಸಂಬಂಧಗಳು ಬೆರೆತಿರುವುದು. ಮನೆ ಮಂದಿಯೆಲ್ಲಾ ನೋಡಬೇಕಾದ ಚಿತ್ರ "ಪೈಲ್ವಾನ್". ಶುಭವಾಗಲಿ" ಎಂದು ನಿರ್ದೇಶಕ ಸಿಂಪಲ್ ಸುನಿ ಟ್ವೀಟ್ ಮಾಡಿದ್ದಾರೆ.

ಫ್ಯಾಮಿಲಿ ಎಂಟರ್ ಟೇನರ್ ಸಿನಿಮಾ
"ಖಂಡಿತ ಸಂಪೂರ್ಣವಾದ ಫ್ಯಾಮಿಲಿ ಎಂಟರ್ ಟೇನರ್ ಸಿನಿಮಾ. ಕಿಚ್ಚ ಸುದೀಪ್ ಅವರ ಪರಿಶ್ರಮ ಮತ್ತು ಸಮರ್ಪಣೆ ತೆರೆ ಮೇಲೆ ಸ್ಪಷ್ಟವಾಗಿ ಕಾಣುತ್ತಿದೆ. ಸಂಗೀತ ಮತ್ತು ಬ್ಯಾಗ್ರೌಂಡ್ ಸ್ಕೋರ್ ಅದ್ಭುತವಾಗಿ" ಎಂದು ನಟಿ ಮಾನ್ವಿತಾ ಹರೀಶ್ ಹೇಳಿದ್ದಾರೆ.

ನೀವು ನಮ್ಮ ಚಿತ್ರರಂಗದ ಹೆಮ್ಮೆ
"ಎಂತಹ ಪ್ರಯತ್ನ. ಸುದೀಪ್ ಸರ್ ನೀವು ಪೈಲ್ವಾನ್ ನಲ್ಲಿ ತುಂಬಾ ಅದ್ಭುತವಾಗಿ ಕಾಣಿಸುತ್ತೀರಿ. ನಮ್ಮ ಚಿತ್ರರಂಗ ನಿಮ್ಮಂತಹ ನಟನನ್ನು ಪಡೆದಿರುವುದು ಹೆಮ್ಮೆ. ನಿಮ್ಮನ್ನ ನೋಡಿ ನನ್ನಂತಹ ಸಾಕಷ್ಟು ಕಲಾವಿದರು ಇನ್ನು ಹೆಚ್ಚಿನ ಶ್ರಮ ವಹಿಸಲು ಪ್ರೇರೇಪಿಸುತ್ತದೆ" ಎಂದು ಸಿನಿಮಾ ನೋಡಿ ನಟಿ ಆಶಿಕಾ ರಂಗನಾಥ್ ಹಾಡಿ ಹೊಗಳಿದ್ದಾರೆ.

ಶಿಳ್ಳೆ ಅಬ್ಬರದಲ್ಲಿ ನಾನು ಪೈಲ್ವಾನ್ ನೋಡಿದೆ
"ಅಭಿಮಾನಿಗಳ ನಡುವೆ ಶಿಳ್ಳೆ ಅಬ್ಬರದಲ್ಲಿ ನಾನು ಪೈಲ್ವಾನ್ ಸಿನಿಮಾ ವೀಕ್ಷಿಸಿದ್ದೇನೆ" ಎಂದು ಬರೆದುಕೊಂಡಿದ್ದಾರೆ. ರಿಷಬ್ ಶೆಟ್ಟಿ ಪೈಲ್ವಾನ್ ಸಿನಿಮಾ ಟೀಸರ್ ಟ್ರೈಲರ್ ರಿಲೀಸ್ ಆದಾಗಿನಿಂದನೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.


Click it and Unblock the Notifications











