For Quick Alerts
  ALLOW NOTIFICATIONS  
  For Daily Alerts

  ಯಶಸ್ಸು ಅಂದ್ರೆ 6 ತಿಂಗಳಿಗೊಂದು ಸಿನಿಮಾ ಮಾಡೋದಲ್ಲ: ಮೇಘನಾ

  By Suneetha
  |

  'ಆಟಗಾರ' ಚಿತ್ರದ ನಂತರ ಇತ್ತೀಚೆಗೆ ನಟಿ ಮೇಘನಾ ರಾಜ್ ಅವರ ಯಾವುದೇ ಸಿನಿಮಾ ತೆರೆಗೆ ಬಂದಿಲ್ಲ. ಇದೀಗ 'ಲಕ್ಷ್ಮಣ' ಚಿತ್ರದ ಬಿಡುಗಡೆಗೆ ಕಾದಿದ್ದಾರೆ. ಅಂದಹಾಗೆ ನಟಿ ಮೇಘನಾ ಅವರಿಗೆ ಈ ವರ್ಷ (2016) ರಲ್ಲಿ ಬಿಡುಗಡೆ ಆಗುತ್ತಿರುವ ಮೊದಲ ಸಿನಿಮಾ ಇದು.

  ಚೊಚ್ಚಲ ನಟ ಅನೂಪ್ ರೇವಣ್ಣ ಅವರ ಜೊತೆ ನಾಯಕಿ ನಟಿಯಾಗಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದೇನೆ ಎನ್ನುವ ನಟಿ ಮೇಘನಾ "ನಾನು ಆರು ತಿಂಗಳಿಗೊಂದು ಸಿನಿಮಾ ಮಾಡುವ ಕನಸು ಕಂಡಿಲ್ಲ. ಅದು ನನ್ನ ಯೋಜನೆ ಕೂಡ ಅಲ್ಲ".[ಸ್ಯಾಂಡಲ್ ವುಡ್ ನಲ್ಲೂ ಸದ್ಯ ಆಡಳಿತ ಪಕ್ಷ ಕಾಂಗ್ರೆಸ್ ಲೀಡಿಂಗ್.!]

  "ಹೀರೋಗಳು ಪ್ರತಿಯೊಂದು ಚಿತ್ರಕ್ಕೂ ಅಷ್ಟೊಂದು ಸಮಯ ತೆಗೆದುಕೊಳ್ಳಬೇಕಾದರೆ ನಾಯಕಿ ನಟಿಗೂ ಅದೇ ಅನ್ವಯ ಆಗುತ್ತದೆ. ಒಟ್ನಲ್ಲಿ ಅಂತಿಮವಾಗಿ ಪ್ರೇಕ್ಷಕರಿಗೆ ಉತ್ತಮ ಗುಣಮಟ್ಟದ ಸಿನಿಮಾ ನೀಡುವುದು ಮಾತ್ರ ಮುಖ್ಯವಾಗುತ್ತದೆ" ಎಂದಿದ್ದಾರೆ.

  ಆರ್ ಚಂದ್ರು ನಿರ್ದೇಶನದ 'ಲಕ್ಷ್ಮಣ' ಅತ್ಯಂತ ದೊಡ್ಡ ಬಜೆಟ್ ನ ಸಿನಿಮಾವಾದ್ದರಿಂದ ಚಿತ್ರೀಕರಣಕ್ಕೆ ಕೊಂಚ ಸಮಯ ತೆಗೆದುಕೊಂಡಿದೆ. "ಹಾಡು ಮತ್ತು ನೃತ್ಯಗಳ ಮೇಲೆ ನಿಂತಿರುವ ಮಾಮೂಲಿ ಕಮರ್ಷಿಯಲ್ ಸಿನಿಮಾ ಅಲ್ಲ 'ಲಕ್ಷ್ಮಣ'. ಬಹಳ ಸೂಕ್ಷ್ಮತೆಯ ಸಿನಿಮಾ. ಈ ಸಿನಿಮಾದಲ್ಲಿ ಬಹಳ ಗಟ್ಟಿಯಾದ ಹಾಗೂ ಮುಖ್ಯವಾದ ಪಾತ್ರ ವಹಿಸಿದ್ದೇನೆ" ಎನ್ನುತ್ತಾರೆ ನಟಿ ಮೇಘನಾ ರಾಜ್.[ಸೆನ್ಸಾರ್ ಪರೀಕ್ಷೆಯಲ್ಲಿ ಪಾಸ್ ಆದ ಆರ್.ಚಂದ್ರು ಸಾರಥಿ 'ಲಕ್ಷ್ಮಣ']

  Kannada Actress Meghana Raj speaks about Kannada movie 'Lakshmana'

  ಇನ್ನು ನಟ ಅನೂಪ್ ಬಗ್ಗೆ ನಟಿ ಮೇಘನಾ ರಾಜ್ ಅವರು ಮೆಚ್ಚುಗೆಯ ಮಾತುಗಳನ್ನಾಡಿದ್ದು, 'ಅನೂಪ್ ಅವರು ತುಂಬಾ ಚಲನಶೀಲ ವ್ಯಕ್ತಿ. ಅವರು ಕಲಿಯುವುದಕ್ಕೆ ಸದಾ ಉತ್ಸುಕರಾಗಿದ್ದರು. ದೊಡ್ಡ ಕುಟುಂಬದಿಂದ ಬಂದಿದ್ದರೂ ತಮ್ಮ ಪಾತ್ರಕ್ಕಾಗಿ ಕಷ್ಟಪಟ್ಟು ದುಡಿದಿದ್ದಾರೆ' ಎಂದಿದ್ದಾರೆ 'ಆಟಗಾರ' ನಟಿ.[ಕನ್ನಡದ ಯಾವ 'ಸ್ಟಾರ್'ಗೂ 'ಲಕ್ಷ್ಮಣ' ಅನೂಪ್ ಕಮ್ಮಿ ಇಲ್ಲ ಬಿಡಿ.!]

  ಇದೇ ಶುಕ್ರವಾರ, (ಜೂನ್ 24) ರಂದು ಅದ್ದೂರಿಯಾಗಿ ತೆರೆಗೆ ಬರುತ್ತಿರುವ 'ಲಕ್ಷ್ಮಣ' ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇದ್ದು, ನಟ ಅನೂಪ್ ರೇವಣ್ಣ ಅವರು ತಮ್ಮ ಚೊಚ್ಚಲ ಚಿತ್ರದ ಬಿಡುಗಡೆಗೆ ಕಾತರದಿಂದ ಕಾದಿದ್ದಾರೆ.

  English summary
  Kannada Actress Meghana Raj spokes about Kannada movie 'Lakshmana'. Kannada Actor Anoop, Kannada Actress Meghana Raj, Kannada Actor Ravichandran in the lead role. The movie is directed by R.Chandru.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X