»   » ಮಾಲಿವುಡ್ ಗೆ ಹಾರಿದ ಬೃಂದಾವನದ ಬೆಡಗಿ ಮಿಲನ ನಾಗರಾಜ್

ಮಾಲಿವುಡ್ ಗೆ ಹಾರಿದ ಬೃಂದಾವನದ ಬೆಡಗಿ ಮಿಲನ ನಾಗರಾಜ್

Posted By:
Subscribe to Filmibeat Kannada

'ಬೃಂದಾವನ' ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಜೊತೆ ಡ್ಯುಯೆಟ್ ಹಾಡಿದ್ದ ನಟಿ ಮಿಲನ ನಾಗರಾಜ್ ಅವರು ಇದೀಗ ಮಾಲಿವುಡ್ ಕ್ಷೇತ್ರದ ಕಡೆ ಹೆಜ್ಜೆ ಹಾಕಿದ್ದಾರೆ.

ಕನ್ನಡತಿಯಾದ ನಟಿ ಮಿಲನ ಅವರು ಮೂಲತಃ ಹಾಸನದವರು. 'ನಮ್ ದುನಿಯಾ ನಮ್ ಸ್ಟೈಲ್ ' ಎಂಬ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಪಡೆದುಕೊಂಡ ನಟಿ ತದನಂತರ ತಮ್ಮ ನಟನೆಯ ಮೂಲಕ ಗುರುತಿಸಿಕೊಂಡರು.[ಚಾಲೆಂಜಿಂಗ್ ಸ್ಟಾರ್ ದರ್ಶನ್ 'ಬೃಂದಾವನ' ವಿಮರ್ಶೆ]


Kannada Actress Milana Nagaraj's Malayalam Debut

ಆನಂತರ 'ಕೃಷ್ಣ' ಅಲಿಯಾಸ್ ಸುನೀಲ್ ನಾಗಪ್ಪ ಅವರ ಜೊತೆ 'ಚಾರ್ಲಿ' ಚಿತ್ರದಲ್ಲಿ ಮಿಂಚಿದರು. ಆದರೆ ಆ ಸಿನಿಮಾ ಅಷ್ಟಾಗಿ ಸುದ್ದಿ ಮಾಡಲಿಲ್ಲ. ಆಮೇಲೆ 'ಫ್ಲೈ' ಚಿತ್ರದಲ್ಲಿ ಒಂದು ಕೈ ನೋಡಿಬಿಟ್ಟರು, ಅದೂ ವರ್ಕೌಟ್ ಆಗಲಿಲ್ಲ.


'ಬೃಂದಾವನ' ಚಿತ್ರದಲ್ಲಿ ದರ್ಶನ್ ಅವರ ಜೊತೆ ಡ್ಯುಯೆಟ್ ಹಾಡಿ ಸ್ವಲ್ಪ ಮಟ್ಟಿಗೆ ಹೆಸರು ಮಾಡಿದ ನಟಿ ಇದೀಗ ಮಲಯಾಳಂ ಚಿತ್ರರಂಗದತ್ತ ಹೆಜ್ಜೆ ಹಾಕಿದ್ದಾರೆ.


Kannada Actress Milana Nagaraj's Malayalam Debut

ಕನ್ನಡ ಚಿತ್ರರಂಗದ ಮಿಲನ ನಾಗರಾಜ್ ಇದೀಗ ಮಾಲಿವುಡ್ ನಲ್ಲಿ ಮಿಲನಾ ಪೌರ್ಣಮಿಯಾಗಿ 'ಅವರುಡೆ ರಾವುಕಲ್' ಎಂಬ ಮಲಯಾಳಂ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅಂತೂ ಮಲಯಾಳಂ ಕ್ಷೇತ್ರದಲ್ಲಿ ತಮಗೆ ಸಿಕ್ಕಿದ ಬಂಪರ್ ಆಫರ್ ಕಂಡು ಮಿಲನ ಅವರು ಭಯಂಕರ ಖುಷ್ ಆಗಿದ್ದಾರಂತೆ.

English summary
Kannada Movie 'Brindavana' fame Kannada Actress Milana Nagaraj's Malayalam Debut.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada