For Quick Alerts
  ALLOW NOTIFICATIONS  
  For Daily Alerts

  ಟಾಲಿವುಡ್ ನಂತರ ಕಾಲಿವುಡ್ ಗೆ ಕಾಲಿಟ್ಟ ನಟಿ ನಭಾ ನಟೇಶ್

  |

  'ವಜ್ರಕಾಯ' ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ನಟಿ ನಭಾ ನಟೇಶ್, ಈಗ ತೆಲುಗು ಚಿತ್ರಪ್ರಿಯರ ಹಾಟ್ ಫೇವರಿಟ್ ನಟಿಯಾಗಿದ್ದಾರೆ. ತೆಲುಗು ನೆಲದಲ್ಲಿ ಮಿಂಚುತ್ತಿರುವ ಕನ್ನಡ ನಟಿಯರ ಸಾಲಿನಲ್ಲಿ ನಬಾ ಕೂಡ ಒಬ್ಬರು. ಇತ್ತೀಚಿಗೆ ರಿಲೀಸ್ ಆದ ತೆಲುಗಿನ 'ಇಸ್ಮಾರ್ಟ್ ಶಂಕರ್' ಮೂಲಕ ಸದ್ದು ಮಾಡುತ್ತಿರುವ ನಭಾ ಈಗ ತಮಿಳು ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ.

  'ನನ್ನು ದೋಚುಕುಂದುವಟೆ' ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟ ನಟಿ ನಭಾಗೆ 'ಇಸ್ಮಾರ್ಟ್ ಶಂಕರ್' ದೊಡ್ಡ ಮಟ್ಟಿಗೆ ಹೆಸರು ತಂದು ಕೊಟ್ಟಿದೆ. ಪೂರಿ ಜಗನ್ನಾಥ್ ಸಾರಥ್ಯದಲ್ಲಿ ಮೂಡಿ ಬಂದ ಸಿನಿಮಾಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಕೂಡ ಸಿಕ್ಕಿದೆ. ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ನಭಾ ಈಗ ಅದೇ ಖುಷಿಯಲ್ಲಿ ತಮಿಳು ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ.

  ಮತ್ತೊಮ್ಮೆ ಕನ್ನಡದ ನಟಿಗೆ ಬೋಲ್ಡ್ ಆದ ರಾಮ್ ಗೋಪಾಲ್ ವರ್ಮಮತ್ತೊಮ್ಮೆ ಕನ್ನಡದ ನಟಿಗೆ ಬೋಲ್ಡ್ ಆದ ರಾಮ್ ಗೋಪಾಲ್ ವರ್ಮ

  ಇತ್ತೀಚಿಗೆ ಅಭಿಮಾನಿಗಳ ಜೊತೆ ಸಂವಾದ ಮಾಡುತ್ತಿದ್ದ ನಭಾಗೆ ಅಭಿಮಾನಿಯೊಬ್ಬರು ತಮಿಳು ಚಿತ್ರದಲ್ಲಿ ಯಾವಾಗ ನಟಿಸುತ್ತೀರಿ ಎಂದು ಪ್ರಶ್ನೆ ಮಾಡಿದ್ದೀರಿ. ಇದಕ್ಕೆ ಉತ್ತರಿಸಿದ ನಭಾ, ಈಗಾಗಲೆ ತಮಿಳು ಚಿತ್ರಕ್ಕೆ ಸಹಿ ಮಾಡಿದ್ದೀನಿ. ಆದ್ರೆ ಯಾವ ಸಿನಿಮಾ? ಯಾವ ನಟ ಎನ್ನುವ ಮಾಹಿತಿಯನ್ನು ಸಧ್ಯದಲ್ಲೇ ಬಹಿರಂಗ ಪಡಿಸುತ್ತೇನೆ ಎಂದು ಹೇಳಿದ್ದಾರೆ.

  ನಭಾ ತಮಿಳಿನ ಖ್ಯಾತ ನಟನ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಆದ್ರೆ ಯಾವ ನಟ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಕಾಡುತ್ತಿದೆ. 'ಇಸ್ಮಾರ್ಟ್ ಶಂಕರ್' ಚಿತ್ರದಂತೆಯೆ ತಮಿಳಿನಲ್ಲಿಯೂ ನಭಾ ಖ್ಯಾತಿ ಗಳಿಸಲಿದ್ದಾರಾ ಕಾದು ನೋಡಬೇಕು.

  English summary
  Kannada actress Nabha Natesh enters to Tamil film industry. Nabha starrer ismart Shankar Telugu film released.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X