»   » ಟಾಲಿವುಡ್ ಗೆ ಜಿಗಿದ ಪಟ್ ಪಟ್ 'ಪಟಾಕಾ' ನಭಾ ನಟೇಶ್

ಟಾಲಿವುಡ್ ಗೆ ಜಿಗಿದ ಪಟ್ ಪಟ್ 'ಪಟಾಕಾ' ನಭಾ ನಟೇಶ್

Posted By:
Subscribe to Filmibeat Kannada

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ 'ವಜ್ರಕಾಯ' ಚಿತ್ರದಲ್ಲಿ 'ಪಟಾಕಾ' ಆಗಿ ಪಟ ಪಟ ಅಂತ ಮಾತನಾಡುತ್ತಿದ್ದ ಚೆಲುವೆ ನಭಾ ನಟೇಶ್ ಗೊತ್ತಲ್ವಾ?

'ವಜ್ರಕಾಯ' ಚಿತ್ರದಲ್ಲಿ ಬಾಯ್ ಬಡಕಿ ಆಗಿ ಮಿಂಚಿದ್ದ ನಭಾ ನಟೇಶ್ ಈಗ ಟಾಲಿವುಡ್ ಕಡೆ ಮುಖ ಮಾಡಿದ್ದಾರೆ. [ಚಿತ್ರವಿಮರ್ಶೆ ; ಶಿವ ಭಕ್ತರಿಗೆ 'ವಜ್ರಕಾಯ' ನೋ ಪ್ರಾಬ್ಲಂ.!]

Kannada Actress Nabha Natesh to make Tollywood Debut

ಖ್ಯಾತ ನಿರ್ಮಾಪಕ ದಗ್ಗುಬಾಟಿ ಸುರೇಶ್ (ರಾಣಾ ದಗ್ಗುಬಾಟಿ ತಂದೆ) ನಿರ್ಮಾಣ ಮಾಡುತ್ತಿರುವ ಇನ್ನೂ ಹೆಸರಿಡದ ಚಿತ್ರಕ್ಕೆ ನಾಯಕಿ ಆಗಿ ನಭಾ ನಟೇಶ್ ಸೆಲೆಕ್ಟ್ ಆಗಿದ್ದಾರೆ.

Kannada Actress Nabha Natesh to make Tollywood Debut

ಹಾಗ್ನೋಡಿದ್ರೆ, 'ವಜ್ರಕಾಯ' ಚಿತ್ರದ ನಂತರ ನಭಾ ನಟೇಶ್ ಗೆ ಕನ್ನಡದಲ್ಲೇ ಹೆಚ್ಚು ಅವಕಾಶಗಳಿತ್ತು. ಆದ್ರೆ ಎಲ್ಲವೂ 'ಪಟಾಕಾ' ಪಾತ್ರದಂತಯೇ ಇದ್ದ ಕಾರಣ ನಭಾ ನಟೇಶ್ ಅಷ್ಟೂ ಆಫರ್ ಗಳನ್ನ ರಿಜೆಕ್ಟ್ ಮಾಡಿದ್ರು.

Kannada Actress Nabha Natesh to make Tollywood Debut

ತೆಲುಗು ಸಿನಿ ಅಂಗಳದಲ್ಲಿ ವಿಭಿನ್ನ ಪಾತ್ರ ದೂರಕಿರುವುದರಿಂದ ಹಿಂದು ಮುಂದು ನೋಡದೆ ಟಾಲಿವುಡ್ ಗೆ ಹಾರಲು ನಭಾ ಸಜ್ಜಾಗಿದ್ದಾರೆ.

Kannada Actress Nabha Natesh to make Tollywood Debut

ಖ್ಯಾತ ನಿರ್ದೇಶಕ ರವಿ ಬಾಬು ಆಕ್ಷನ್ ಕಟ್ ಹೇಳುವ ನಭಾ ನಟೇಶ್ ನಟಿಸಲು ಒಪ್ಪಿಕೊಂಡಿರುವ ಚಿತ್ರಕ್ಕೆ ಅಭಿಶೇಕ್ ಎನ್ನುವ ಯುವ ಪ್ರತಿಭೆ ನಾಯಕ. ಮಾರ್ಚ್ 28 ರಂದು ಚಿತ್ರದ ಮುಹೂರ್ತ ನಡೆಯಲಿದೆ. ಹೆಚ್ಚಿನ ಅಪ್ ಡೇಟ್ಸ್ ಗಾಗಿ 'ಫಿಲ್ಮಿಬೀಟ್ ಕನ್ನಡ' ಓದುತ್ತಿರಿ....

English summary
After the success of 'Vajrakaya', Kannada Actress Nabha Natesh is all set to make debut in Tollywood. Nabha Natesh has bagged a movie in Telugu, which will be produced by Tollywood's renowned producer Daggubatti Suresh, father of actor Rana Daggubatti.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada