»   » ಬ್ಲ್ಯಾಕ್ ಮೇಲ್ ಕೇಸ್ ನಲ್ಲಿ ನಟಿ ನಯನಾ ಕೃಷ್ಣ

ಬ್ಲ್ಯಾಕ್ ಮೇಲ್ ಕೇಸ್ ನಲ್ಲಿ ನಟಿ ನಯನಾ ಕೃಷ್ಣ

By: ಉದಯರವಿ
Subscribe to Filmibeat Kannada

ವೈದ್ಯರೊಬ್ಬರಿಗೆ ಬ್ಲ್ಯಾಕ್ ಮೇಲ್ ಮಾಡಿ ಹಣ ಲಪಟಾಯಿಸಲು ಸಂಚು ರೂಪಿಸಿದ ಆರೋಪದಲ್ಲಿ ಕನ್ನಡ ಚಿತ್ರಗಳ ನಟಿ ನಯನಾ ಕೃಷ್ಣ ಅವರ ಹೆಸರು ಪ್ರಮುಖವಾಗಿ ಕೇಳಿಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಖಾಸಗಿ ನ್ಯೂಸ್ ಚಾನಲ್ ಸಿಬ್ಬಂದಿ ಹಾಗೂ ಪೊಲೀಸ್ ಪೇದೆಯೊಬ್ಬರನ್ನು ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಕೆಂಪೇಗೌಡನಗರ ಪೊಲೀಸ್ ಠಾಣೆಯ ಪೇದೆ ಮಲ್ಲೇಶ್, ಖಾಸಗಿ ವಾಹಿನಿಯೊಂದರ ಸಾರಿಗೆ ವಿಭಾಗದಲ್ಲಿರುವ ಸುನೀಲ್ ಮತ್ತು ಮತ್ತೊಂದು ಸುದ್ದಿ ವಾಹಿನಿಯ ವಿಡಿಯೋ ಎಡಿಟರ್ ಹೇಮಂತ್ ಕುಮಾರ್ ಬಂಧಿತ ಆರೋಪಿಗಳು. [ನಿರ್ದೇಶಕರಿಗೆ ಚಪ್ಪಲಿಯಿಂದ ಬಾರಿಸಿದ ನಯನಕೃಷ್ಣ]

Actress Nayana Krishna

ಈ ಪ್ರಕರಣದ ಇನ್ನು ಮೂವರು ಆರೋಪಿಗಳಾದ ಜಿಮ್ ರಘು, 'ಕೊಟ್ಲಲ್ಲಪ್ಪೋ ಕೈ' ಚಿತ್ರದ ನಾಯಕಿ ನಯನಾ ಕೃಷ್ಣ, ಕಿರುತೆರೆ ನಟಿ ರಿಹಾನಾ ಎಂಬುವವರು ತಲೆಮರೆಸಿಕೊಂಡಿದ್ದಾರೆ. ಇವರ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಏನಿದು ಪ್ರಕರಣ? ಜಿಮ್ ರಘು ಎಂಬುವವರಿಗೆ ಕೆಲ ವರ್ಷಗಳಿಂದ ವೈದ್ಯರೊಬ್ಬರ ಪರಿಚಯವಿತ್ತು. ಆ ವೈದ್ಯರಿಗೆ ಯುವತಿಯರ ಬಗ್ಗೆ ಆಸಕ್ತಿಯಿತ್ತು ಎನ್ನಲಾಗಿದೆ. ಈ ವಿಚಾರ ರಘುಗೆ ಗೊತ್ತಿತ್ತು. ಯುವತಿಯೊಬ್ಬಳ ಅನಾರೋಗ್ಯದ ನೆಪವೊಡ್ಡಿದ ಆರೋಪಿಗಳು ಜೂ.16ರಂದು ಹೈಗ್ರೌಂಡ್ಸ್ ಚಾಲುಕ್ಯ ಹೋಟೆಲ್ ಸರ್ಕಲ್ ನಲ್ಲಿರುವ ವೈದ್ಯರ ಮನೆಗೆ ಹೋಗಿದ್ದರು.

ಚಿಕಿತ್ಸೆ ನೆಪದಲ್ಲಿ ವೈದ್ಯರ ಕೋಣೆಗೆ ಹೋದ ಯುವತಿ ವೈದ್ಯರನ್ನು ಸರಸ ಸಲ್ಲಾಪಕ್ಕೆ ಆಹ್ವಾನಿಸಿದ್ದಾರೆ. ವೈದ್ಯ ಮತ್ತು ಯುವತಿ ಸರಸ ಸಲ್ಲಾಪದಲ್ಲಿರುವ ದೃಶ್ಯಗಳನ್ನು ರಘು, ನಯನಾ ಕೃಷ್ಣ ಹಾಗೂ ರಿಹಾನಾ ಗೌಪ್ಯವಾಗಿ ಚಿತ್ರೀಕರಿಸಿ ಉಳಿದ ಆರೋಪಿಗಳಿಗೆ ನೀಡಿದ್ದಾರೆ ಎನ್ನಲಾಗಿದೆ.

ಖಾಸಗಿ ಚಾನಲ್ ನಲ್ಲಿ ಕೆಲಸ ಮಾಡುತ್ತಿರುವ ಹೇಮಂತ್ ಮತ್ತು ಸುನೀಲ್ ಎಂಬುವವರು ವೈದ್ಯರನ್ನು ಸಂಪರ್ಕಿಸಿ ಯುವತಿ ಜೊತೆಗಿನ ಸಿಡಿ ಸಿಕ್ಕಿದೆ. ಇದು ಬಹಿರಂಗವಾಗಬಾರದು ಎಂದರೆ ರು.25 ಲಕ್ಷ ನೀಡಲು ಬೇಡಿಕೆ ಇಟ್ಟಿದ್ದಾರೆ. ಇದಕ್ಕೆ ಒಪ್ಪಿದ ವೈದ್ಯರು ಆರಂಭದಲ್ಲಿ ರು.1 ಲಕ್ಷ ನೀಡಿದ್ದಾರೆ.

ಅದಾದ ಬಳಿಕ ಪೊಲೀಸ್ ಪೇದೆ ಮಲ್ಲೇಶ್, ವೈದ್ಯರ ಬಳಿ ಹೋಗಿ ತಾನು ಸಿಸಿಬಿ ಪೊಲೀಸ್ ಅಧಿಕಾರಿ. ಯುವತಿ ಜೊತೆಗಿನ ಸಿಡಿ ಸಿಕ್ಕಿದೆ. ಈ ಬಗ್ಗೆ ದೂರು ಬಂದಿದೆ ಎಂದು ಬೆದರಿಸಿದ್ದಾರೆ. ಹೆದರಿದ ವೈದ್ಯರು ಹಣ ಕೊಡಲು ಒಪ್ಪಿದ್ದಾರೆ. ಅದರಂತೆ ಮೊದಲು ಒಂದು ಲಕ್ಷ ಕೊಟ್ಟಿದ್ದಾರೆ.

ಬಳಿಕ ಆರೋಪಿಗಳು ರು.10 ಲಕ್ಷಕ್ಕೆ ಡಿಮ್ಯಾಂಡ್ ಮಾಡಿದ್ದಾರೆ. ಅಷ್ಟೊಂದು ಹಣವಿಲ್ಲದ ವೈದ್ಯರು ತಮ್ಮ ಸ್ನೇಹಿತನ ಬಳಿ ಸಾಲ ಕೇಳಿದ್ದಾರೆ. ಅಷ್ಟು ದೊಡ್ಡ ಮೊತ್ತದ ಹಣ ಯಾಕೆ ಬೇಕು ಎಂದು ಸ್ನೇಹಿತ ಕೇಳಿದಾಗ ವೈದ್ಯರು ನಡೆದ ಸಂಗತಿಯನ್ನು ತಿಳಿಸಿದ್ದಾರೆ. ವೈದ್ಯರಿಗೆ ಧೈರ್ಯ ತುಂಬಿದ ಸ್ನೇಹಿತ ಪೊಲೀಸ್ ಆಯುಕ್ತ ರಾಘವೇಂದ್ರ ಔರಾದ್ ಕರ್ ಅವರಿಗೆ ದೂರು ನೀಡಿದ್ದಾರೆ.

ಔರಾದ್ ಕರ್ ಅವರ ನಿರ್ದೇಶನದ ಮೇರೆಗೆ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿಗಳನ್ನು ಬಲೆಗೆ ಕೆಡವಿ ಬಂಧಿಸಿದ್ದಾರೆ. ಹೇಮಂತ್, ಸುನೀಲ್ ಅವರನ್ನು ಬಂಧಿಸಿದ ವಿಷಯ ತಿಳಿಯುತ್ತಿದ್ದಂತೆ ರಘು ಮತ್ತು ಮಲ್ಲೇಶ್ ಪರಾರಿಯಾಗಿದ್ದಾರೆ. ಬಳಿಕ ಪೇದೆ ಮಲ್ಲೇಶ್ ಅವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಉಳಿದ ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ. ಇದಿಷ್ಟು ನಡೆದ ಘಟನೆ. ಸತ್ಯಾಸತ್ಯತೆಗಳು ವಿಚಾರಣೆ ಬಳಿಕವಷ್ಟೇ ಗೊತ್ತಾಗಲಿದೆ.

English summary
Three people were arrested by the Central Crime Branch sleuths for blackmailing a 68-year-old doctor after filming him in a compromising position with a woman. While film actor Nayana Krishna and her associate Riya, said to be part of the gang, are absconding. 
 
Please Wait while comments are loading...