ನಟಿ ಶ್ರುತಿ ಹರಿಹರನ್ ಗೆ ಬೆಂಬಲ ಸೂಚಿಸಿದ ನೀತೂ ಶೆಟ್ಟಿ
ಕಳೆದ ಎರಡ್ಮೂರು ದಿನಗಳಿಂದ ಸ್ಯಾಂಡಲ್ ವುಡ್ ನಲ್ಲಿ ಎಲ್ಲರ ಬಾಯಲ್ಲೂ ಕೇಳಿಬರುತ್ತಿರುವ ಹೆಸರು ನಟಿ 'ಶ್ರುತಿ ಹರಿಹರನ್'. ಅದಕ್ಕೆ ಕಾರಣ ಆಕೆ ಅರ್ಜುನ್ ಸರ್ಜಾ ಮೇಲೆ ಮಾಡಿರುವ ಗಂಭೀರ ಆರೋಪ.!
ಅರ್ಜುನ್ ಸರ್ಜಾ ವಿರುದ್ಧ ಶ್ರುತಿ ಹರಿಹರನ್ ಆರೋಪಿಸಿದ ಮೇಲೆ ಹಲವರು ಆಕೆ ವಿರುದ್ಧ ಗುಡುಗಿದ್ದಾರೆ. ಆದ್ರೆ, ಚಿತ್ರ ನಟಿಯರು ಮಾತ್ರ ಶ್ರುತಿ ಹರಿಹರನ್ ಗೆ ಬೆಂಬಲ ಸೂಚಿಸಿದ್ದಾರೆ.
ಶ್ರುತಿ ಹರಿಹರನ್ ಪರವಾಗಿ ಶ್ರದ್ಧಾ ಶ್ರೀನಾಥ್ ದನಿಯೆತ್ತಿದ ಮೇಲೆ ನೀತೂ ಶೆಟ್ಟಿ ಕೂಡ ದನಿಗೂಡಿಸಿದ್ದಾರೆ.

''#ಮೀಟೂ ಚಳುವಳಿ ನಮ್ಮ ಕನ್ನಡ ಇಂಡಸ್ಟ್ರಿಯಲ್ಲೂ ಮಹತ್ವ ಪಡೆದಿದೆ. ಸಂಗೀತ ಭಟ್ ಹಾಗೂ ಶ್ರುತಿ ಹರಿಹರನ್ ತಮಗೆ ಆಗಿರುವ ಅನುಭವವನ್ನು ಹಂಚಿಕೊಂಡಿದ್ದಾರೆ. ನಾನು ಅವರನ್ನ ಸಪೋರ್ಟ್ ಮಾಡುವೆ''
''13 ವರ್ಷದ ಕೆರಿಯರ್ ನಲ್ಲಿ ಹಲವಾರು ಅನುಭವಗಳು ನನಗೆ ಆಗಿದೆ. ಇಷ್ಟ ಆಗದೇ ಇದ್ದರೂ, ಕೆಲವು ಸೀನ್ ಗಳನ್ನ ಮಾಡಿಸಿದ್ದಾರೆ. ಇದು ವೃತ್ತಿಪರತೆ ಅಲ್ಲ. ಯಾವುದೇ ಸೀನ್ ಮಾಡುವಾಗಲೂ ನಟಿಯ ಒಪ್ಪಿಗೆ ಪಡೆದುಕೊಳ್ಳುವುದು ಮುಖ್ಯ'' ಎಂದು ವಿಡಿಯೋವೊಂದರಲ್ಲಿ ನೀತೂ ಶೆಟ್ಟಿ ಹೇಳಿದ್ದಾರೆ.
ಜೊತೆಗೆ ಫೇಸ್ ಬುಕ್ ನಲ್ಲೂ ತಮ್ಮ ಅಭಿಪ್ರಾಯವನ್ನ ನೀತೂ ಶೆಟ್ಟಿ ಹಂಚಿಕೊಂಡಿದ್ದಾರೆ.


Click it and Unblock the Notifications











