For Quick Alerts
  ALLOW NOTIFICATIONS  
  For Daily Alerts

  ಇದೇ ತಿಂಗಳು ನಡೆಯಲಿದೆ ನಟಿ ನೇಹಾ ಪಾಟೀಲ್ ವಿವಾಹ ಮಹೋತ್ಸವ

  |

  'ಸ್ಮೈಲ್ ಪ್ಲೀಸ್' ಸೇರಿದಂತೆ ಕನ್ನಡದ ಹಲವು ಸಿನಿಮಾಗಳಲ್ಲಿ ನಾಯಕಿ ಆಗಿ ಅಭಿನಯಿಸಿರುವ ಕಿರುತೆರೆಯಲ್ಲೂ ಮಿಂಚಿರುವ ನಟಿ ನೇಹಾ ಪಾಟೀಲ್ ಗೆ ಮದುವೆ ಫಿಕ್ಸ್ ಆಗಿದೆ.

  ಇದೇ ತಿಂಗಳು... ಅಂದ್ರೆ ಫೆಬ್ರವರಿ 21 ಮತ್ತು 22 ರಂದು ನೇಹಾ ಪಾಟೀಲ್ ಕಲ್ಯಾಣ ನಡೆಯಲಿದೆ. ಬೆಂಗಳೂರಿನ ವಿಜಯನಗರ ಬಳಿ ಇರುವ ಶ್ರೀ ಬಸವೇಶ್ವರ ಸುಗುಣ ಕಲ್ಯಾಣ ಮಂಟಪದಲ್ಲಿ ನೇಹಾ ಪಾಟೀಲ್ ವಿವಾಹ ಮಹೋತ್ಸವ ನೆರವೇರಲಿದೆ.

  ಹುಬ್ಬಳ್ಳಿ ಮೂಲದ ನೇಹಾ ಪಾಟೀಲ್ ಬೆಂಗಳೂರಿನ ಎಂಜಿನಿಯರ್ ಪ್ರಣವ್ ಎಂಬುವರನ್ನು ವರಿಸಲಿದ್ದಾರೆ. ಇದು ಪಕ್ಕಾ ಅರೇಂಜ್ಡ್ ಮ್ಯಾರೇಜ್.

  ನಟಿ ನೇಹಾ ಪಾಟೀಲ್ ಗೆ ಕೂಡಿ ಬಂತು ಕಂಕಣ ಬಲ

  ಕುಟುಂಬಸ್ಥರ ಸಮ್ಮುಖದಲ್ಲಿ ನೇಹಾ ಪಾಟೀಲ್-ಪ್ರಣವ್ ನಿಶ್ಚಿತಾರ್ಥ ಕಳೆದ ಅಕ್ಟೋಬರ್ 19 ರಂದು ನಡೆದಿತ್ತು. ಈ ತಿಂಗಳು ಅದ್ಧೂರಿಯಾಗಿ ಮದುವೆ ನಡೆಯಲಿದೆ. ಚಿತ್ರರಂಗದವರು ಮತ್ತು ಕಿರುತೆರೆಯ ನಟ-ನಟಿಯರು ನೇಹಾ ಪಾಟೀಲ್ ಮದುವೆಗೆ ಸಾಕ್ಷಿ ಆಗಲಿದ್ದಾರೆ.

  ಅಂದ್ಹಾಗೆ, ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ 'ಜನುಮದ ಜೋಡಿ' ಧಾರಾವಾಹಿಯಲ್ಲಿ ನೇಹಾ ಪಾಟೀಲ್ ಅಭಿನಯಿಸಿದ್ದರು. ಬಳಿಕ ಡ್ಯಾನ್ಸ್ ರಿಯಾಲಿಟಿ ಶೋನಲ್ಲೂ ನೇಹಾ ಪಾಟೀಲ್ ಸ್ಪರ್ಧಿಯಾಗಿ ಭಾಗವಹಿಸಿದ್ದರು.

  English summary
  Kannada Actress Neha Patil to get married on Feb 21st and 22nd in Bengaluru.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X