For Quick Alerts
  ALLOW NOTIFICATIONS  
  For Daily Alerts

  'ಮುಂಗಾರು ಮಳೆ-2' ಸಿನಿಮಾದ ನಾಯಕಿ ನೇಹಾ ಶಟ್ಟಿ ತಂದೆ ಹರಿರಾಜ್ ಬಂಧನ

  By ಫಿಲ್ಮಿಬೀಟ್ ಡೆಸ್ಕ್
  |

  ಮುಂಗಾರು ಮಳೆ-2 ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಕಾಲಿಟ್ಟ ನಟಿ ನೇಹಾ ಶೆಟ್ಟಿ ತಂದೆ ಹರಿರಾಜ್ ಶೆಟ್ಟಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಜೂಜು ಅಡ್ಡಗಳನ್ನು ನಿರ್ಮಿಸಿ ಕಾನೂನು ಬಾಹಿರ ಚಟುವಟಿಕೆ ನಡೆಸುತ್ತಿದ್ದ ಆರೋಪದ ಮೇಲೆ ಹರಿರಾಜ್ ಶೆಟ್ಟಿಯನ್ನು ನಿನ್ನೆ (ಜೂನ್ 4) ಪೊಲೀಸರ್ ವಶಕ್ಕೆ ಪಡೆದ್ದಾರೆ.

  ಬೆಂಗಳೂರಿನಲ್ಲಿ ಸುಮಾರು 14ಕ್ಕೂ ಹೆಚ್ಚು ಕಡೆ ಜೂಜು ಅಡ್ಡಗಳನ್ನು ನಡೆಸುತ್ತಿದ್ದರು ಎನ್ನುವ ಮಾಹಿತಿ ತಿಳಿದುಬಂದಿದೆ. ಪೂಲ್ ಮತ್ತು ರಿ ಕ್ರಿಯೇಷನ್ ಹೆಸರಿನಲ್ಲಿ ಜೂಜು ನಿರ್ಮಿಸಿ ಧಂದೆ ನಡೆಸುತ್ತಿರುವುದಾಗಿ ತಿಳಿದು ಬಂದಿದೆ. ಹರಿರಾಜ್ ವಿರುದ್ಧ ಈಗಾಗಲೇ 19 ಪ್ರಕರಣಗಳು ದಾಖಲಾಗಿದೆ.

  ಹರಿರಾಜ್ ಜೂಜು ಅಡ್ಡ ಮೇಲೆ ಸಿಸಿಬಿ ದಾಳಿ ಮಾಡುತ್ತಿರುವುದು ಇದೇ ಮೊದಲಲ್ಲ. ಈ ಮೊದಲು ಸಹ ಅನೇಕ ಬಾರಿ ದಾಳಿ ನಡೆದಿದೆ. ಆದರೆ ಪ್ರಕರಣ ಕ್ಲೋಸ್ ಆಗುತ್ತಿದ್ದಂತೆ ಹರಿರಾಜ್ ಮತ್ತೆ ಅದೇ ಕೆಲಸವನ್ನು ಮುಂದುವರೆಕೊಂಡು ಹೋಗುತ್ತಿದ್ದರು.

  ಪೊಲೀಸರ ವಿರುದ್ಧವೇ ಸಿಟ್ಟಿಗೆದಿದ್ದ ಹರಿರಾಜ್ ಪೊಲೀಸರ ವಿರುದ್ಧ ಅಪಪ್ರಚಾರ ಮಾಡುತ್ತಿದ್ದರು ಎನ್ನುವ ಆರೋಪ ಕೂಡ ಇದೆ. ಸಾಮಾಜಿಕ ಜಾಲತಾಣದಲ್ಲಿ ಪೊಲೀಸರ ಬಗ್ಗೆ ಕೆಟ್ಟದಾಗಿ ಪ್ರಚಾರ ಮಾಡುತ್ತಿದ್ದರು ಎನ್ನಲಾಗಿದೆ. ಈ ಮೊದಲು ಗೂಂಡಾ ಕಾಯ್ದೆಯಡಿ ಹರಿರಾಜ್ ನನ್ನು ಬಂಧಿಸಿದ್ದರು. ಆದರೆ ಪೊಲೀಸರು ಸುಳ್ಳು ಪ್ರಕರಣ ದಾಖಲಿಸಿದ್ದಾರೆ ಎಂದು ಕೋರ್ಟ್ ನಲ್ಲಿ ಸ್ಟೇ ಪಡೆದು ಜೈಲಿನಿಂದ ಹೊರಬಂದಿದ್ದರು.

  ಪ್ರಾಣಿಗಳನ್ನು ದತ್ತು ಪಡೆದು ಕಾಪಾಡಿ ಎಂದು ಮನವಿ ಮಾಡಿಕೊಂಡ Darshan | Filmibeat Kannada

  ಇದೀಗ ಗೂಂಡ ಕಾಯ್ದೆ ತಡೆ ತೆರವಿಗೆ ಸಿಸಿಬಿ ಮನವಿ ಮಾಡಿತ್ತು. ಅರ್ಜಿಯನ್ನು ನ್ಯಾಯಾಲಯ ಪುರಸ್ಕರಿಸಿದ ಬಳಿಕ ಹರಿರಾಜ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದೀಗ ನಗರದ ಕುಖ್ಯಾತ ಜೂಜುಕೋರ ಎನ್ನುವ ಆರೋಪ ಕೂ ಹರಿರಾಜ್ ವಿರುದ್ಧ ಕೇಳಿಬಂದಿದೆ.

  English summary
  Kannada Actress Neha Shetty's father Hariraj Shetty Shetty arrested by CCB for running gambling center.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X