»   » ಪ್ರೀತಿಯ ತಂದೆ ಕಳೆದುಕೊಂಡ ನಟಿ ನಿಧಿ ಸುಬ್ಬಯ್ಯ

ಪ್ರೀತಿಯ ತಂದೆ ಕಳೆದುಕೊಂಡ ನಟಿ ನಿಧಿ ಸುಬ್ಬಯ್ಯ

Posted By:
Subscribe to Filmibeat Kannada

ಪ್ರೀತಿಯ ತಂದೆ ಬೊಳ್ಳಚಂಡ ಸುಭಾಷ್ ಸುಬ್ಬಯ್ಯ ರವರನ್ನು ಕಳೆದುಕೊಂಡ ನೋವಿನ ಮಡುವಿನಲ್ಲಿ ಮುಳುಗಿದ್ದಾರೆ ಕೊಡಗಿನ ಕುವರಿ, ಕನ್ನಡ ನಟಿ ನಿಧಿ ಸುಬ್ಬಯ್ಯ.

ಕ್ಯಾನ್ಸರ್ ಖಾಯಿಲೆಯಿಂದ ಬಳಲುತ್ತಿದ್ದ ಬೊಳ್ಳಚಂಡ ಸುಭಾಷ್ ಸುಬ್ಬಯ್ಯ ಭಾನುವಾರ ತಡ ರಾತ್ರಿ ಮೈಸೂರಿನಲ್ಲಿ ಕೊನೆಯುಸಿರೆಳೆದರು.

Kannada Actress Nidhi Subbaiah loses her father

ಗೋಕುಲಂ ನಿವಾಸಿ ಆಗಿದ್ದ ಬೊಳ್ಳಚಂಡ ಸುಭಾಷ್ ಸುಬ್ಬಯ್ಯ ರವರಿಗೆ 63 ವರ್ಷ ವಯಸ್ಸಾಗಿತ್ತು. ಮೂಲತಃ ವಿರಾಜಪೇಟೆ ತಾಲೂಕು ಐಮಂಗಲ ಗ್ರಾಮದವರಾದ ಬೊಳ್ಳಚಂಡ ಸುಭಾಷ್ ಸುಬ್ಬಯ್ಯ ರವರ ಪತ್ನಿ ಜಾನ್ಸಿ ಮತ್ತು ಏಕಮಾತ್ರ ಪುತ್ರಿ ನಟಿ ನಿಧಿ ಸುಬ್ಬಯ್ಯ. [ನಿಧಿ ಸುಬ್ಬಯ್ಯ 'ಪ್ರೇಮಕಥೆ' ತಿಳಿಯುವ ಆಸೆ ಇದ್ಯಾ.?]

ಕೊಡವ ಸಮಾಜದ ಫೆಡರೇಶನ್ ನ ಕಾರ್ಯದರ್ಶಿ ಆಗಿದ್ದ ಬೊಳ್ಳಚಂಡ ಸುಭಾಷ್ ಸುಬ್ಬಯ್ಯ ರವರ ಅಂತ್ಯ ಸಂಸ್ಕಾರ ನಿನ್ನೆ (ಸೋಮವಾರ, ಆಗಸ್ಟ್ 1) ನೆರವೇರಿದೆ.

English summary
Kannada Actress Nidhi Subbaiah lost her Father Bollachanda Subhash Subbaiah on late Sunday night (July 31st). Bollachanda Subhash Subbaiah was suffering from Cancer.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada