For Quick Alerts
  ALLOW NOTIFICATIONS  
  For Daily Alerts

  ಡ್ಯಾನ್ಸ್ ವರ್ಲ್ಡ್ ಕಪ್ ನಲ್ಲಿ ಚಿನ್ನ ಗೆದ್ದ ಕನ್ನಡ ಕಿರುತೆರೆ ನಟಿ

  |

  ಕ್ರಿಕೆಟ್ ವರ್ಲ್ಡ್ ಕಪ್, ಹಾಕಿ ವರ್ಲ್ಡ್ ಕಪ್, ಪುಟ್ ಬಾಲ್ ವರ್ಲ್ಡ್ ಕಪ್ ಹೀಗೆ ಕ್ರೀಡೆಯಲ್ಲಿ ವರ್ಲ್ಡ್ ಕಪ್ ಟೂರ್ನಿಗಳು ನಡೆಯುವುದು ಸಾಮಾನ್ಯ. ಆದರೆ, ಅನೇಕರಿಗೆ ಗೊತ್ತಿಲ್ಲದ ವಿಚಾರ ಅಂದ್ರೆ ಡ್ಯಾನ್ಸ್ ವರ್ಲ್ಡ್ ಕಪ್ ಕೂಡ ನಡೆಯುತ್ತೆ.

  ಡ್ಯಾನ್ಸ್ ವರ್ಲ್ಡ್ ಕಪ್ ನಲ್ಲಿ ಕನ್ನಡ ಕಿರುತೆರೆ ನಟಿ ನಿಶಾ ಅವರ ಚಿನ್ನದ ಪದಕ ಗೆಲ್ಲುವ ಮೂಲಕ ಭಾರತಕ್ಕೆ ಕೀರ್ತಿ ತಂದಿದ್ದಾರೆ. ಹೌದು, ಪೋರ್ಚುಗಲ್ ನ ಬಾಗ್ರಾದಲ್ಲಿ ನಡೆದ ಡ್ಯಾನ್ಸ್ ವರ್ಲ್ಡ್ ಕಪ್ ಸ್ಪರ್ಧೆಯಲ್ಲಿ ನಟಿ ನಿಶಾ ಅವರು ಭಾಗವಹಿಸಿ ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದಾರೆ.

  ಕನ್ನಡದ ಶ್ರೀ ವಿಷ್ಣು ದಶಾವತಾರ ಪೌರಾಣಿಕ ಧಾರಾವಾಹಿಯಲ್ಲಿ ಮುಖ್ಯಪಾತ್ರದಲ್ಲಿ ನಟಿಸಿದ್ದ ನಿಶಾ ಡ್ಯಾನ್ಸ್ ವರ್ಲ್ಡ್ ಕಪ್ ಸ್ಪರ್ಧೆಯಲ್ಲಿ ಅಮೋಘ ಪ್ರದರ್ಶನ ನೀಡಿ ಎಲ್ಲರ ಮೆಚ್ಚುಗೆ ಗಳಿಸಿಕೊಂಡಿದ್ದರು.

  ನಿಶಾ ಅವರು ಶಾಸ್ತ್ರೀಯ ನೃತ್ಯಪಟುವಾಗಿದ್ದು ತಮ್ಮ ಡ್ಯಾನ್ಸ್ ಪಾರ್ಟನರ್ ಅನಿರುದ್ಧ್ ಜೊತೆ ಡ್ಯಾನ್ಸ್ ವರ್ಲ್ಡ್ ಕಪ್ ಸ್ಪರ್ಧೆಯಲ್ಲಿ ಭಾಗವಹಿಸಿ ಭಾರತವನ್ನ ಪ್ರತಿನಿಧಿಸಿದ್ದರು. ಜಾನಪದ ಡುಯೇಟ್ ರಾಷ್ಟ್ರೀಯ ವಿಭಾದಲ್ಲಿ ಈ ಜೋಡಿ ಚಿನ್ನದ ಪದಕ ಗೆದ್ದಿದ್ದಾರೆ.

  ಅಂತಾರಾಷ್ಟ್ರೀಯ ಡ್ಯಾನ್ಸ್ ಸ್ಪರ್ಧೆಯಲ್ಲಿ ಸುಮಾರು 51ಕ್ಕೂ ಹೆಚ್ಚು ದೇಶದ ನೃತ್ಯ ಪಟುಗಳು ಭಾಗಿಯಾಗಿದ್ದರು. ಒಟ್ಟು 13 ವಿವಿಧ ವಿಭಾಗಗಳಲ್ಲಿ ಈ ಸ್ಪರ್ಧೆ ನಡೆದಿತ್ತು. ಆಡಿಷನ್ ಗಾಗಿಯೇ ಸುಮಾರು 20 ಸಾವಿರ ಮಂದಿ ಹಾಜರಾಗಿದ್ದರು. ಶ್ರೀ ವಿಷ್ಣು ದಶಾವತಾರ ಧಾರಾವಾಹಿ ಬಳಿಕ ತಮಿಳಿನ ಧಾರಾವಾಹಿಗಳಲ್ಲಿ ನಿಶಾ ನಟಿಸುತ್ತಿದ್ದಾರೆ.

  Read more about: serial ಧಾರಾವಾಹಿ
  English summary
  Kannada small screen actress nisha won gold medal in Dance world cup at porchugal.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X