ಬಾತ್‌ರೂಮ್ ಸ್ಟಾರ್ ನಿವೇದಿತಾ ಗೌಡ ಅವರ ಹೊಸ ವಿಡಿಯೋ ನೋಡಿದ್ರಾ ?
ರೀಲ್ಸ್ ಮಾಡುತ್ತಾ ಪಡ್ಡೆ ಹುಡುಗರ ಎದೆಯಲ್ಲಿ ಚಿಟ್ಟೆ ಹರಿಯ ಬಿಡುತ್ತಿರುವ ಮುದ್ದಿನ ಚೆಲುವೆ ನಿವೇದಿತಾ ಗೌಡ. ನಿವೇದಿತಾ ಗೌಡ ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಬಹಳ ಆಕ್ಟಿವ್ ಆಗಿರುವ ಬೆಡಗಿ. ಮುದ್ದು ಮುದ್ದಾಗಿ ಮಾತನಾಡುತ್ತಾ ಎಲ್ಲರ ಮನಸ್ಸು ಸೆಳೆಯುತ್ತಿರುವ ಚೆಲುವೆ ಇದೀಗ ಮತ್ತೊಮ್ಮೆ ರೀಲ್ಸ್ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಇತ್ತೀಚಿನ ದಿನಗಳಲ್ಲಿ ನಿವೇದಿತಾ ಗೌಡ ವಿಚ್ಛೇದನ ಆದ ಬಳಿಕ ತನಗಾದ ಕಷ್ಟಗಳನ್ನು ವಿವರಿಸಿದ್ದಾರೆ.
ಹಾಗೆಯೇ ಆಗ ತನ್ನ ಸಪೋರ್ಟ್ ಗೆ ಬಂದ ತಂದೆಯ ಬಗ್ಗೆ ಗುಣಗಾನ ಮಾಡಿದ್ದಾರೆ. ಆ ಕಾರಣಕ್ಕೆ ನಾನು ಇಲ್ಲಿ ಇರಲು ಸಾಧ್ಯ ಹಾಗೆಯೇ ತನ್ನ ಅಭಿಮಾನಿಗಳ ಮನರಂಜನೆ ನೀಡಲು ಸಾಧ್ಯ ಎನ್ನುವ ಮಾತನ್ನು ನಿವೇದಿತಾ ಗೌಡ ಹೇಳಿಕೊಂಡಿದ್ದಾರೆ. ಅನೇಕ ಜನರು ನಿವೇದಿತಾ ಗೌಡಗೆ ಬಹಳಷ್ಟು ನಿಂದನೆ ಮಾಡಿದ್ದರು. ಚಂದನ್ ಶೆಟ್ಟಿ ಜೊತೆಗೆ ವಿಚ್ಛೇದನ ಆದಾಗಲೂ ನಿವೇದಿತಾ ಗೌಡ ಹೆಚ್ಚಾಗಿ ಟ್ರೋಲ್ ಗೆ ಒಳಗಾಗಿದ್ದರು. ಆದರೆ ಅದೆಲ್ಲವನ್ನೂ ನಿವೇದಿತಾ ಗೌಡ ಕ್ಯಾರೆ ಮಾಡುತ್ತಿಲ್ಲ. ಆಕೆ ತಾನಾಯಿತು ತನ್ನ ಪಾಡಾಯಿತು ಎನ್ನುವ ಹಾಗೆ ಇರುತ್ತಾರೆ. ಇದೀಗ ರೀಲ್ಸ್ ಮಾಡಿ ಪಡ್ಡೆ ಹುಡುಗರ ತಲೆಕೆಡಿಸಿದ್ದಾರೆ ಎಂದು ಹೇಳಿದರೆ ತಪ್ಪಾಗದು.

ನಿವೇದಿತಾ ಗೌಡ ರೀಲ್ಸ್ ನೋಡಿ ಅಭಿಮಾನಿಗಳು ಸಖತ್ ಖುಷಿ ವ್ಯಕ್ತ ಪಡಿಸಿದ್ದಾರೆ. ಹಾಗೆಯೇ ಸಾಕಷ್ಟು ಜನ ಸೋ ಕ್ಯೂಟ್, ಸೂಪರ್ , ಬಾತ್ ರೂಮ್ ಸ್ಟಾರ್ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಇನ್ನು ಸಾಕಷ್ಟು ಜನರು ಲೈಕ್ ಮಾಡುತ್ತಿದ್ದಾರೆ. ನಿವೇದಿತಾ ಗೌಡ ಹೆಚ್ಚಾಗಿ ಬಾತ್ ರೂಂನಲ್ಲಿ ರೀಲ್ಸ್ ಮಾಡುವುದನ್ನು ನೋಡಿ ಅಭಿಮಾನಿಗಳು ಬಹಳಷ್ಟು ಖುಷಿ ವ್ಯಕ್ತ ಪಡಿಸಿದ್ದಾರೆ. ಇನ್ನು ಬೋಲ್ಡ್ ಡ್ರೆಸ್ ನಲ್ಲಿ ಮಿಂಚಿದ ನಿವೇದಿತಾ ಗೌಡ ನೋಡಿ ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ಖುಷಿಯಾಗಿದೆ. ಹಾಗೆಯೇ ಇತ್ತೀಚಿನ ದಿನಗಳಲ್ಲಿ ಸೀರೆಯುಟ್ಟು ಬಹಳ ಮುದ್ಧಾಗಿ ಡ್ಯಾನ್ಸ್ ಮಾಡುತ್ತಿದ್ದಾರೆ.
ಮುದ್ದು ರಾಕ್ಷಸಿ ಸಿನಿಮಾದಲ್ಲಿ ನಟಿಸಿದ ಚೆಲುವೆ
ನಿವೇದಿತಾ ಗೌಡ ಮುದ್ದು ರಾಕ್ಷಸಿ ಸಿನಿಮಾದಲ್ಲಿ ನಟನೆ ಮಾಡುತ್ತಿದ್ದಾರೆ. ಹೀರೋ ಪಾತ್ರದಲ್ಲಿ ಚಂದನ್ ಶೆಟ್ಟಿ ನಟಿಸಿದ್ದಾರೆ. ಹಾಗೆಯೇ ಇದೀಗ ಬಾಯ್ಸ್ ವರ್ಸಸ್ ಗರ್ಲ್ಸ್ ಸ್ಪರ್ಧಿಯಾಗಿ ಇನ್ನಷ್ಟು ಅಭಿಮಾನಿಗಳ ಮನಸ್ಸಿಗೆ ಹತ್ತಿರವಾಗುತ್ತಿದ್ದಾರೆ. ವಿಚ್ಛೇದನ ಆದ ಬಳಿಕ ನಿವೇದಿತಾ ಗೌಡ ಸಾಕಷ್ಟು ಜಾಲಿ ಮೂಡ್ ನಲ್ಲಿದ್ದಾರೆ. ಯಾರು ಏನೇ ಹೇಳಿದರೂ ಅವರ ಮಾತಿಗೆ ಡೊಂಟ್ ಕೇರ್ ಮಾಡುತ್ತಾರೆ. ರಿಯಾಲಿಟಿ ಶೋ ಮೂಲಕ ನಿವೇದಿತಾ ಗೌಡ ಸಾಕಷ್ಟು ಮನೋರಂಜನೆ ನೀಡುತ್ತಿರುತ್ತಾರೆ. ಹಾಗೆಯೇ ಸಾಕಷ್ಟು ಫೇಮಸ್ ಆಗಿದ್ದಾರೆ. ಆಗಾಗ ರೀಲ್ಸ್ ಹಾಗೂ ಫೋಟೋಗಳ ಮೂಲಕವೇ ನಿವಿ ಸಖತ್ ಸದ್ದು ಮಾಡ್ತಿದ್ದಾರೆ.
ರಿಯಾಲಿಟಿ ಶೋ ಮೂಲಕ ಸದ್ದು ಮಾಡುತ್ತಿರುವ ಬೆಡಗಿ
ನಿವೇದಿತಾ ಗೌಡ ಕಲರ್ಸ್ ಕನ್ನಡ ದ್ದಲ್ಲಿ ಪ್ರಸಾರವಾದ ಗಿಚ್ಚಿ ಗಿಲಿಗಿಲಿ ಕಾಮಿಡಿ ಶೋ ನಲ್ಲಿ ನಿವೇದಿತಾ ಗೌಡ ಕಾಣಿಸಿಕೊಂಡಿದ್ದರು. ಹಾಗೆಯೇ ಸಾಕಷ್ಟು ಜನರಿಗೆ ಮನೋರಂಜನೆ ನೀಡಿದ್ದರು.ಅದಾದ ಬಳಿಕ ಬಿಗ್ ಬಾಸ್ ಮೂಲಕ ಸಾಕಷ್ಟು ಮನೋರಂಜನೆ ನೀಡಿದ್ದಾರೆ ಹಾಗೆಯೇ ಸಾಕಷ್ಟು ಅಭಿಮಾನಿಗಳ ಅಭಿಮಾನವನ್ನು ಸಂಪಾದನೆ ಮಾಡಿದ್ದಾರೆ. ಹಾಗೆಯೇ ಮುದ್ದು ಮುದ್ದಾಗಿ ಮಾತನಾಡುತ್ತಾ ಎಲ್ಲರನ್ನೂ ನಗಿಸುತ್ತಿದ್ದ ಚೆಲುವೆಯ ನೋಟಕ್ಕೆ ಅಭಿಮಾನಿಗಳು ಮಾರು ಹೋಗಿದ್ದಾರೆ. ನಿವೇದಿತಾ ಗೌಡ ಇತ್ತೀಚಿನ ದಿನಗಳಲ್ಲಿ ಸಖತ್ ಮಾಡರ್ನ್ ಆಗಿ ಕಾಣಿಸಿಕೊಳ್ಳುತ್ತಿದ್ದು ಅಭಿಮಾನಿಗಳು ಕೊಂಚ ಮಂದಿ ಬೇಸರ ಮಾಡಿಕೊಂಡರೆ ಇನ್ನೂ ಹಲವಾರು ಜನ ನಿವೇದಿತಾ ಗೌಡ ಏಳಿಗೆ ಕಂಡು ಖುಷಿ ಪಡುತ್ತಿದ್ದಾರೆ .


Click it and Unblock the Notifications











