ಅಬ್ಬ, ಅಬ್ಬಬ್ಬಾ, ಕ್ಯಾಮರಾದಲ್ಲಿ ಸೆರೆಯಾಯ್ತು ನಿವೇದಿತಾ ಗೌಡ ನಾನಾ ಭಂಗಿ, ಕಣ್ಣರಳಿಸಿದ ಪಡ್ಡೆಹೈಕ್ಳು..!
ಈಗೀಗ ಬಟ್ಟೆ ಬಿಚ್ಚುವುದು ಅದೇ ಅವತಾರದಲ್ಲಿ ಫೋಟೊಗೆ ಪೋಸು ಕೊಡುವುದು ಎಲ್ಲವೂ ಸರ್ವೇ ಸಾಧಾರಣವಾಗಿದೆ. ಅದರಲ್ಲಿಯೂ ಸೋಶಿಯಲ್ ಮೀಡಿಯಾ ಸ್ಟ್ರಾಂಗ್ ಆಗುತ್ತಿದ್ದಂತೆ ಜನ ಕೂಡ ಇದನ್ನೇ ಬಯಸುತ್ತಾರೆ ಎಂದು ತಪ್ಪು ತಿಳಿದುಕೊಂಡು ಅನೇಕರು ಬಟ್ಟೆಯನ್ನು ಬಿಚ್ಚುವುದನ್ನೇ ಅಭ್ಯಾಸ ಮಾಡಿಕೊಳ್ಳುತ್ತಾರೆ. ಎಗ್ಗಿಲ್ಲದೇ ಸಿಗ್ಗಿಲ್ಲದೇ ತಮ್ಮ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಾರೆ. ಈ ಸಾಲಿಗೆ ನಿವೇದಿತಾ ಗೌಡ ಕೂಡ ಸೇರಿಕೊಂಡಿದ್ದಾರಾ ಗೊತ್ತಿಲ್ಲ. ಆದರೆ. ಈ ಅನುಮಾನ ಸದ್ಯಕ್ಕೆ ಅನೇಕರನ್ನು ಕಾಡುತ್ತಿದೆ.
ಹೌದು, ಚಂದನ್ ಶೆಟ್ಟಿ ಅವರಿಂದ ದೂರವಾದ ನಂತರ ಟ್ರೋಲಿಗರ ಪಾಲಿಗೆ ತಾಂಬೂಲವಾಗಿರುವ ನಿವೇದಿತಾ ಗೌಡ ಅವರ ಬಟ್ಟೆಯ ಸೈಜ್ ಕಳೆದ ಒಂದು-ಒಂದೂವರೆ ತಿಂಗಳಿಂದ ಕಡಿಮೆಯಾಗುತ್ತಲೇ ಇದೆ. ಮೊದಲೆಲ್ಲ ಡಿಸೆಂಟ್ ಲುಕ್‌ನಲ್ಲಿ ಕಾಣಿಸುತ್ತಿದ್ದ ನಿವೇದಿತಾ ಗೌಡ ಈಗೀಗ ಧಾರಾಳವಾಗಿ ಅಂಗಾಂಗ ಪ್ರದರ್ಶನವನ್ನು ಮಾಡುತ್ತಿದ್ದಾರೆ. ಬಿಕಿನಿಯಲ್ಲಿ ಬಳಕುತ್ತಿದ್ದಾರೆ. ಈ ಮೂಲಕ ಪಡ್ಡೆಹೈಕ್ಳು ನಿದ್ದೆಯಲ್ಲಿಯೂ ಮುಲುಕುವಂತೆ ಮಾಡುತ್ತಿದ್ದಾರೆ. ಇದಕ್ಕೆ ನಿವೇದಿತಾ ಗೌಡ ಸದ್ಯ ಹಂಚಿಕೊಂಡಿರುವ ಹೊಸ ವಿಡಿಯೋ ತಾಜಾ ಉದಾಹರಣೆ.

ವೈಟ್ ಕಲರ್ ಬಿಕಿನಿಯಲ್ಲಿ ಸೊಂಟ ಬಳುಕಿಸಿರುವ ನಿವೇದಿತಾ ಗೌಡ ನಾನಾ ಫೋಸ್‌ಗಳನ್ನು ನೀಡಿದ್ದಾರೆ. ತಮ್ಮ ಸೋಶಿಯಲ್ ಮೀಡಿಯಾದಲ್ಲಿ ರೀಲ್ಸ್ ಹಂಚಿಕೊಂಡಿದ್ದಾರೆ. ಎಂದಿನಂತೆ ಈ ವಿಡಿಯೋವನ್ನು ಕೂಡ ಜನ ಮುಗಿ ಬಿದ್ದು ನೋಡುತ್ತಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಕೇವಲ 22 ಗಂಟೆಯಲ್ಲಿ 145,912 ಲೈಕ್ಸ್‌ಗಳನ್ನು ಈ ವಿಡಿಯೋ ಪಡೆದುಕೊಂಡಿದೆ. ಇನ್ನೂ ತಮ್ಮ ಮನದ ಮಾತುಗಳನ್ನು ಕಾಮೆಂಟ್ ಮಾಡುವ ಮೂಲಕ ವ್ಯಕ್ತಪಡಿಸಿರುವ ವ್ಯಕ್ತಿಗಳ ಸಂಖ್ಯೆ 3000 ಮೇಲಿದೆ.
ಆ ಪೈಕಿ ಸಹಜವಾಗಿ ಅನೇಕರು ನಿವೇದಿತಾ ಗೌಡ ಅವರ ಕಾಲೆಳೆದಿದ್ದಾರೆ. ಕಿಡಿ ಕಾರಿದ್ದಾರೆ. ಕೆಲವರು ನಿವೇದಿತಾ ಗೌಡ ಅವರನ್ನು ಮಾಜಿ ನೀಲಿತಾರೆ ಮಿಯಾ ಖಲೀಫಾ ಜೊತೆ ಹೋಲಿಸಿದ್ದರೆ ಇನ್ನು ಕೆಲವರು ದಿನದಿಂದ ದಿನಕ್ಕೆ ಬಟ್ಟೆಯ ಸೈಜ್ ಕಡಿಮೆಯಾಗಲು ಕಾರಣವೇನು ಎನ್ನುವ ಪ್ರಶ್ನೆ ಮಾಡುತ್ತಿದ್ದಾರೆ. ಇನ್ನು ನಿವೇದಿತಾ ಗೌಡ ಕಳೆದೊಂದುವರೆ ತಿಂಗಳಿಂದ ಪ್ರವಾಸದಲ್ಲಿದ್ದರು ಈ ಹಿನ್ನೆಲೆ ಅಲ್ಲಿಯೇ ಇದ್ದು ಬಿಡಿ ಭಾರತಕ್ಕೆ ಬರಬೇಡಿ ಎಂಬ ಮನವಿಯನ್ನು ಕೂಡ ಕೆಲವರು ಮಾಡಿದ್ದು, ಮತ್ತೂ ಕೆಲವರು ನಿವೇದಿತಾ ಗೌಡ ಅವರ ಈ ನಾನಾ ಭಂಗಿಗಳನ್ನು ಸೆರೆ ಹಿಡಿಯುತ್ತಿರುವ ಆ ಪುಣ್ಯಾತ್ಮವಾದರು ಯಾರು ಎನ್ನುವ ಪ್ರಶ್ನೆ ಮಾಡಿದ್ದಾರೆ. ಇನ್ನು ಹಲವರು ಚಂದನ್ ಶೆಟ್ಟಿ ಅವರ ಹೆಸರನ್ನು ಪ್ರಸ್ತಾಪಿಸಿದ್ದಾರೆ. ಕೆಟ್ಟ ಕಾಮೆಂಟ್‌ಗಳನ್ನು ಮಾಡುವ ಮೂಲಕ ನಿವೇದಿತಾ ಗೌಡ ಅವರನ್ನು ನಿಂದಿಸುತ್ತಿದ್ದಾರೆ.
ಅಂದ್ಹಾಗೇ ಕೆಲ ದಿನಗಳ ಹಿಂದೆ ನಿವೇದಿತಾ ಗೌಡ ಹಾಕಿಕೊಳ್ಳೋಕೆ ಬಟ್ಟೆ ಇಲ್ಲ ಎಂದು ಹೇಳಿದ್ದರು. 30 ದಿನದ ಪ್ರವಾಸದಲ್ಲಿ 200 ಬಟ್ಟೆ ತಗೊಂಡು ಬಂದಿದ್ದೆ ಹಾಕಿಕೊಂಡಿದ್ದೇನೆ ಆದರೂ ನಾಳೆ ಉಡಲು ಏನೂ ಇಲ್ಲ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದರು. ನಿವೇದಿತಾ ಗೌಡ ಅವರ ಮಾತು ಕೂಡ ಈಗ ಅನೇಕರಿಗೆ ಆಹಾರವಾಗಿದೆ. ಹೀಗಾಗಿಯೇ ಹಾಕಿಕೊಳ್ಳೋಕೆ ಬಟ್ಟೆ ಇಲ್ಲ ಅಂತ ಹೀಗೆಲ್ಲ ಮಾಡೋದಾ ಎಂದು ಕೂಡ ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ನಿವೇದಿತಾ ಗೌಡ ಅವರ ವಿರುದ್ದ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸಂಸ್ಕ್ರತಿ-ಸಂಪ್ರದಾಯದ ಪಾಠ ಕೂಡ ಮಾಡುತ್ತಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದೆ.


Click it and Unblock the Notifications











