twitter
    For Quick Alerts
    ALLOW NOTIFICATIONS  
    For Daily Alerts

    ನಟಿ ನಿವೇದಿತಾ ನಿಗೂಢ ಸಾವಿನ ಸುತ್ತಾ ಎದ್ದಿದ್ದ ಅನುಮಾನದ ಹುತ್ತ

    |

    ಸತತ 24 ದಿನಗಳ ಕಾಲ ಬೆಂಗಳೂರಿನ ಮಲ್ಯ ಆಸ್ಪತ್ರೆಯ ಐಸಿಯು ಬೆಡ್‌ನಲ್ಲಿ ಕೋಮಾದಲ್ಲಿದ್ದ ನಟಿ ನಿವೇದಿತಾ ಜೈನ್ ಅನ್ನು ಜೂನ್ 10 ರಂದು ನಿಧನ ಎಂದು ಘೋಷಿಸಲಾಯಿತು. ಸುಂದರ ಮುಖದ ನಿವೇದಿತ ಸಾಯುವ ವೇಳೆಗೆ ಮುಖ ವಿಕಾರಗೊಂಡು ಕೈ, ಕಾಲುಗಳು ಮುರಿದುಕೊಂಡು ಯಮಯಾತನೆ ಅನುಭವಿಸಿದ್ದರು.

    Recommended Video

    ನಿವೇದಿತಾ ಜೈನ್ ಸಾವಿನ ಜೊತೆ ಕರ್ನಾಟಕ CM ಹೆಸರು ಥಳುಕು ಹಾಕಿಕೊಂಡಿದ್ದು ಯಾಕೆ? | Filmibeat Kannada

    ವೃತ್ತಿ ಜೀವನದ ಉತ್ತಂಗದಲ್ಲಿದ್ದ ನಟಿ ನಿವೇದಿತ ರಾಜರಾಜೇಶ್ವರಿ ನಗರದಲ್ಲಿ ದೊಡ್ಡ ಮನೆಯೊಂದರಲ್ಲಿ ಕುಟುಂಬದೊಂದಿಗೆ ವಾಸವಿದ್ದರು. ಮೇ 17, 1998 ರಂದು ಅದೇ ಮನೆಯ ಮೂರನೇ ಮಹಡಿಯಿಂದ ಕೆಳಗೆ ಬಿದ್ದ ನಿವೇದಿತಾ ಜೈನ್ ಅನ್ನು ಮಲ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು.

    ನಿವೇದಿತ ಜೈನ್ ಮೃತ ಎಂದು ಘೋಷಿಸುವ ಒಂದು ದಿನ ಹಿಂದಷ್ಟೆ ನಿವೇದಿತಾ ಗುಣಮುಖರಾಗುತ್ತಿದ್ದಾರೆ ಎಂದು ಕುಟುಂಬದವರು ಹೇಳಿದ್ದರು, ಮಾಧ್ಯಮಗಳಲ್ಲಿಯೂ ಆ ಬಗ್ಗೆ ವರದಿ ಆಗಿತ್ತು. ಆದರೆ ಅದಾದ ಮಾರನೇ ದಿನವೇ ನಿವೇದಿತ ಮೃತ ಎಂದು ಘೋಷಿಸಲಾಯಿತು. ಆದರೆ ಅವರ ಸಾವಿನ ಸುತ್ತ ಎದ್ದಿದ್ದ ಅನುಮಾನಗಳ ಹುತ್ತ ಇಂದಿಗೂ ಕರಗಿಲ್ಲ.

    ಕಡಿಮೆ ವಯಸ್ಸಿನಲ್ಲಿಯೇ ಸಾಕಷ್ಟು ಯಶಸ್ಸು

    ಕಡಿಮೆ ವಯಸ್ಸಿನಲ್ಲಿಯೇ ಸಾಕಷ್ಟು ಯಶಸ್ಸು

    ನಟಿ ನಿವೇದಿತಾ ಜೈನ್ ಅತ್ಯಂತ ಕಡಿಮೆ ಅವಧಿಯಲ್ಲಿಯೇ ಕನ್ನಡ ಚಿತ್ರರಂಗದಲ್ಲಿ ಛಾಪು ಮೂಡಿಸಿದ ಹಾಗೂ ದೊಡ್ಡ ಮಟ್ಟದ ಭರವಸೆ ಮೂಡಿಸಿದ್ದ ನಟಿ. ಕೇವಲ 17 ವರ್ಷಕ್ಕೆ ನಟನಾ ವೃತ್ತಿಗೆ ಬಂದ ನಿವೇದಿತ ಸಿನಿಮಾ ರಂಗದಲ್ಲಿ ಇದ್ದಿದ್ದು ಎರಡೇ ವರ್ಷವಾದರು ನೆನಪುಳಿವ ಸಿನಿಮಾಗಳಲ್ಲಿ ನಟಿಸಿದರು. ರಮೇಶ್ ಜೊತೆಗೆ 'ಅಮೃತವರ್ಷಿಣಿ', ಶಿವರಾಜ್ ಕುಮಾರ್ ಜೊತೆಗೆ ಸುಂದರ ಸಿನಿಮಾ 'ಪ್ರೇಮರಾಗ ಹಾಡು ಗೆಳತಿ' ಇನ್ನೂ ಹಲವು ಸಿನಿಮಾಗಳಲ್ಲಿ ನಟಿಸಿದ ನಿವೇದಿತಾ ಜೈನ್ ನಟಿಸಿದ್ದ ಒಂದೆರಡು ಸಿನಿಮಾಗಳಲ್ಲಿ ಸೋಲು ಕಂಡಿದ್ದರು ಸಹ.

    ಹೇಳಿಕೆಗಳಲ್ಲಿ ವಿರೋಧಾಭಾಸ

    ಹೇಳಿಕೆಗಳಲ್ಲಿ ವಿರೋಧಾಭಾಸ

    ನಿವೇದಿತಾ ಜೈನ್ ಸಾವಿನ ಬಗ್ಗೆ ಅನುಮಾನ ಏಳಲು ಮುಖ್ಯ ಕಾರಣ ಅವರ ಕುಟುಂಬದವರು ನೀಡಿದ ಹೇಳಿಕೆಗಳಲ್ಲಿ ಸ್ಪಷ್ಟತೆ ಇಲ್ಲದೇ ಇದ್ದದ್ದು. 'ನಿವೇದಿತಾ ನೃತ್ಯಾಭ್ಯಾಸ ಮಾಡುವಾಗ ಮಹಡಿಯಿಂದ ಕೆಳಗೆ ಬಿದ್ದರು' ಎಂದು ಮೊದಲಿಗೆ ಹೇಳಲಾಯಿತು. ಆ ನಂತರ 'ನಿವೇದಿತಾ ಮಿಸ್‌ ಇಂಡಿಯಾಗೆ ತಯಾರಿ ನಡೆಸುತ್ತಿದ್ದರು. ಕ್ಯಾಟ್ ವಾಕ್ ಅಭ್ಯಾಸ ಮಾಡುವಾಗ ಮಹಡಿಯಿಂದ ಬಿದ್ದರು' ಎನ್ನಲಾಯಿತು. ಇವೆಲ್ಲವೂ ನಿವೇದಿತಾ ಸಾವಿನ ಬಗ್ಗೆ ಅನುಮಾನ ಮೂಡಿಸಿದವು.

     ಸಿಎಂ ಹೆಸರೂ ಸಹ ಕೇಳಿಬಂದಿತ್ತು

    ಸಿಎಂ ಹೆಸರೂ ಸಹ ಕೇಳಿಬಂದಿತ್ತು

    ಹಲವರು, ನಿವೇದಿತಾ ಜೈನ್ ಆತ್ಮಹತ್ಯೆ ಮಾಡಿಕೊಂಡರು ಎಂದರು, ಆದರೆ ಈ ವಾದವನ್ನು ನಿವೇದಿತಾ ಜೈನ್ ಕುಟುಂಬದವರು ತಳ್ಳಿ ಹಾಕಿದರು. ನಿವೇದಿತಾ ಜೈನ್ ಸಾವಿನ ಪ್ರಕರಣದಲ್ಲಿ ಅಂದಿನ ಮುಖ್ಯಮಂತ್ರಿಗಳ ಹೆಸರೂ ಸಹ ಕೇಳಿಬಂತು. ನಿವೇದಿತಾ ಜೈನ್ ಮಹಡಿಯಿಂದ ಬಿದ್ದ ದಿನ ಐಶಾರಾಮಿ ಬಿಳಿ ಕಾರೊಂದು ವೇಗವಾಗಿ ನಿವೇದಿತಾ ಮನೆ ಮುಂದಿನಿಂದ ಹೋಯಿತು. ಅದು ಆಗಿನ ಸಿಎಂ ಅವರಿಗೆ ಸೇರಿದ್ದ ಕಾರು ಎಂದು ಗಾಳಿ ಸುದ್ದಿ ಹರಿದಾಡಿತು. ಆದರೆ ಯಾವುದೂ ಸಹ ನಿರೂಪಿತವಾಗಲಿಲ್ಲ ಬದಲಿಗೆ ಗಾಳಿ ಸುದ್ದಿಯಾಗಿಯೇ ಉಳಿಯಿತು.

    ಬಹುಬೇಗನೇ ಇಹಲೋಕ ತ್ಯಜಿಸಿದ ನಿವೇದಿತಾ

    ಬಹುಬೇಗನೇ ಇಹಲೋಕ ತ್ಯಜಿಸಿದ ನಿವೇದಿತಾ

    ಈಗಲೂ ಕನ್ನಡದ ನಟಿಯರ ಅಕಾಲಿಕ ಸಾವಿನ ವಿಷಯಗಳು ಚರ್ಚೆಗೆ ಬಂದಾಗ ನಿವೇದಿತಾ ಸಾವು ಚರ್ಚೆ ಆಗದೇ ಇರುವುದಿಲ್ಲ. ನಿವೇದಿತಾ ಆತ್ಮಹತ್ಯೆ ಮಾಡಿಕೊಂಡರು ಎಂದೇ ಇಂದಿಗೂ ಹಲವಾರು ಮಂದಿ ನಂಬಿದ್ದಾರೆ. ಹಲವು ಪತ್ರಕರ್ತರೂ ಸಹ ಇದನ್ನೇ ಹೇಳುತ್ತಾರೆ. ಆ ಅಪಘಾತ ನಡೆಯುವ ಮುನ್ನ ಪತ್ರಕರ್ತರೊಬ್ಬರು ಧಾರಾವಾಹಿ ವಿಷಯಕ್ಕೆ ಸಂಬಂಧಿಸಿದಂತೆ ನಿವೇದಿತಾ ಅವರನ್ನು ಭೇಟಿ ಆಗಿದ್ದರಂತೆ. ಅವರು ಆಗ ಹೇಳಿದ್ದಂತೆ ನಿವೇದಿತಾ ಬಹಳ ಬೇಸರದಲ್ಲಿದ್ದರು, ಅವರ ಮುಖದಲ್ಲಿ ಕಳೆಯೇ ಹೋಗಿತ್ತು ಎಂದಿದ್ದರು. ಏನೋ ಒಟ್ಟಿನಲ್ಲಿ ನಟಿ ನಿವೇದಿತಾ ಜೈನ್ ಬಹುಬೇಗನೇ ಹೋಗಿಬಿಟ್ಟರು ಎಂಬುದೊಂದೇ ಅಂತಿಮ ಸತ್ಯವಷ್ಟೆ.

    English summary
    Kannada actress Niveditha Jain fell from her house on May 17, 1998 and declared dead on June 10, 1998.
    Saturday, May 8, 2021, 10:03
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X