ಈ ವರ್ಷದ 'ಸೌತ್ ಫಿಲ್ಮ್ ಫೇರ್' ಕನ್ನಡ ನಟಿ ಪ್ರಶಸ್ತಿ ಯಾರಿಗೆ.?
2018ನೇ ಸಾಲಿನ ಸೌತ್ ಫಿಲ್ಮ್ ಫೇರ್ ಪ್ರಶಸ್ತಿ ಸಮಾರಂಭಕ್ಕೆ ಸಮಯ ಮತ್ತು ದಿನಾಂಕ ನಿಗದಿಯಾಗಿದೆ. ಈಗಾಗಲೇ ಕನ್ನಡದ ಅತ್ಯುತ್ತಮ ನಟ ವಿಭಾಗದಲ್ಲಿ ದರ್ಶನ್, ಸುದೀಪ್, ಪುನೀತ್, ಶಿವಣ್ಣ, ಗಣೇಶ್ ಅಂತಹ ಬಿಗ್ ಸ್ಟಾರ್ ಗಳು ಪೈಫೋಟಿ ನಡೆಸುತ್ತಿದ್ದಾರೆ.
ಇದೀಗ, ನಟಿಯರ ವಿಭಾಗದಲ್ಲಿ ಕೂಡ ಕಾಂಪಿಟೇಶನ್ ಹೆಚ್ಚಾಗಿದೆ. ಬಹುತೇಕ ಒಂದೇ ಗ್ರೂಪ್ ನ ನಟಿಯರು ನಾಮಿನೇಟ್ ಆಗಿದ್ದಾರೆ. ಒಬ್ಬರಿಗಿಂತ ಮತ್ತೊಂದು ವಿಭಿನ್ನ ಪಾತ್ರದ ಮೂಲಕ ಮೋಡಿ ಮಾಡಿರುವವರೇ.
ಹೀಗಾಗಿ, ಯಾರ ಮುಡಿಗೆ 'ಬೆಸ್ಟ್ ಆಕ್ಟ್ರೆಸ್' ಅವಾರ್ಡ್ ಹೋಗಲಿದೆ ಎಂಬುದು ಕುತೂಹಲ ಹೆಚ್ಚಿಸಿದೆ. ಹಾಗಿದ್ರೆ, ಯಾವೆಲ್ಲ ಕನ್ನಡ ಹೀರೋಯಿನ್ ಗಳು ರೇಸ್ ನಲ್ಲಿದ್ದಾರೆ ಎಂಬ ಪಟ್ಟಿ ಇಲ್ಲಿದೆ. ಓದಿ...

'ಶುದ್ಧಿ' ನಿವೇದಿತಾ
ಕಳೆದ ವರ್ಷ ತೆರೆಕಂಡಿದ್ದ 'ಶುದ್ಧಿ' ಸಿನಿಮಾ ವಿಶೇಷವಾಗಿ ಗಮನ ಸೆಳೆದಿತ್ತು. ಈ ಚಿತ್ರದ ನಟಿ ನಿವೇದಿತಾ ಅವರು ಈಗ ಸೌತ್ ಫಿಲ್ಮ್ ಫೇರ್ 2018ನೇ ಸಾಲಿನಲ್ಲಿ ಅತ್ಯುತ್ತಮ ನಟಿ ವಿಭಾಗದಲ್ಲಿ ನಾಮಿನೇಟ್ ಆಗಿದ್ದಾರೆ.

'ಚಮಕ್' ರಾಣಿ
ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ 'ಚಮಕ್' ಸಿನಿಮಾ ಕಳೆದ ವರ್ಷದ ಅಂತ್ಯದಲ್ಲಿ ಬಿಡುಗಡೆಯಾಗಿತ್ತು. ಈ ಚಿತ್ರದ ನಟನೆಗಾಗಿ ರಶ್ಮಿಕಾ ಸೌತ್ ಫಿಲ್ಮ್ ಫೇರ್ 2018ನೇ ಸಾಲಿನಲ್ಲಿ ಅತ್ಯುತ್ತಮ ನಟಿ ವಿಭಾಗದಲ್ಲಿ ನಾಮನಿರ್ದೇಶನಗೊಂಡಿದ್ದಾರೆ.

'ತಾರಕ್' ಚೆಲುವೆ
'ತಾರಕ್' ಚಿತ್ರದ ನಟನೆಗಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸೌತ್ ಫಿಲ್ಮ್ ಫೇರ್ ಪ್ರಶಸ್ತಿ ರೇಸ್ ನಾಮಿನೇಟ್ ಆಗಿದ್ದಾರೆ. ಅದೇ ಚಿತ್ರದ ಅಭಿನಯಕ್ಕಾಗಿ ನಟಿ ಶಾನ್ವಿ ಶ್ರೀವಾಸ್ತವ್ ಕೂಡ ನಟಿ ವಿಭಾಗದಲ್ಲಿ ನಾಮಿನೇಟ್ ಆಗಿದ್ದಾರೆ.

ಶ್ರದ್ಧಾ ಶ್ರೀನಾಥ್
'ಯುಟರ್ನ್' ಖ್ಯಾತಿ ನಟಿ ಶ್ರದ್ಧಾ ಶ್ರೀನಾಥ್ ಅವರು ಸೌತ್ ಫಿಲ್ಮ್ ಫೇರ್ 2018ನೇ ಸಾಲಿನಲ್ಲಿ ಅತ್ಯುತ್ತಮ ನಟಿ ವಿಭಾಗದಲ್ಲಿ ನಾಮನಿರ್ದೇಶನಗೊಂಡಿದ್ದಾರೆ. 'ಆಪರೇಷನ್ ಅಲಮೇಲಮ್ಮ' ಚಿತ್ರಕ್ಕಾಗಿ ರೇಸ್ ನಲ್ಲಿದ್ದಾರೆ. ರಿಷಿ ಈ ಚಿತ್ರದ ನಾಯಕರಾಗಿದ್ದು, ಸಿಂಪಲ್ ಸುನಿ ನಿರ್ದೇಶನ ಮಾಡಿದ್ದರು.

ಶ್ರುತಿ ಹರಿಹರನ್
ಸತೀಶ್ ನೀನಾಸಂ ಮತ್ತು ಶ್ರುತಿ ಹರಿಹರನ್ ಅಭಿನಯದ 'ಬ್ಯೂಟಿಫುಲ್ ಮನಸುಗಳು' ಚಿತ್ರಗಳ ಅಭಿನಯಕ್ಕಾಗಿ ನಟಿ ಶ್ರುತಿ ಸೌತ್ ಫಿಲ್ಮ್ ಫೇರ್ 2018ನೇ ಸಾಲಿನಲ್ಲಿ ಅತ್ಯುತ್ತಮ ನಟಿ ವಿಭಾಗದಲ್ಲಿ ನಾಮಿನೇಟ್ ಆಗಿದ್ದಾರೆ. ಜಯತೀರ್ಥ ಈ ಚಿತ್ರವನ್ನ ನಿರ್ದೇಶನ ಮಾಡಿದ್ದರು.


Click it and Unblock the Notifications











