ದರ್ಶನ್ ಬೆನ್ನಲ್ಲೇ ಭಾಗ್ಯ ಲಕ್ಷ್ಮೀಯ ಕುಸುಮಾ 'ಪದ್ಮಜಾ ರಾವ್'ಗೆ 03 ತಿಂಗಳು ಜೈಲು ಶಿಕ್ಷೆ..!

ಅಮ್ಮನ ಪಾತ್ರಕ್ಕೆ ಜೀವ ತುಂಬುವ ಮೂಲಕವೇ ಕರುನಾಡಿನೆಲ್ಲೆಡೆ ಮನೆ ಮಾತಾದವರು ಪದ್ಮಜಾ ರಾವ್. ಮುಂಗಾರು ಮಳೆಯಿಂದ ಆಚೆ ಹತ್ತಾರು ಚಿತ್ರಗಳಲ್ಲಿ ಮನಸಿನಲ್ಲಿ ಉಳಿಯುವಂತೆ ಅಮ್ಮನ ಪಾತ್ರವನ್ನು ನಿರ್ವಹಿಸಿದ ಪದ್ಮಜಾ ರಾವ್ ಕಿರುತೆರೆಯ ಬೇಡಿಕೆಯ ನಟಿ ಕೂಡ ಹೌದು. ಇಂಥಾ ಪದ್ಮಜಾ ರಾವ್ ಈಗ ಮೂರು ತಿಂಗಳು ಜೈಲು ಶಿಕ್ಷೆಯಾಗಿದೆ.

ಹೌದು, ಅಸಲಿಗೆ ನಿಮಗೆ ನೆನಪಿದ್ದರೆ, 2020ರ ಆಸು ಪಾಸಿನಲ್ಲಿ ಪದ್ಮಜಾ ರಾವ್ ಅವರ ವಿರುದ್ಧ ವಂಚನೆ ಆರೋಪ ಕೇಳಿ ಬಂದಿತ್ತು. ಯಾಕೆಂದರೆ.. ಪದ್ಮಜಾ ರಾವ್ ನಲವತ್ತು ಲಕ್ಷ ಕೈ ಸಾಲ ಪಡೆದಿದ್ದರು. ಇದಕ್ಕೆ ಭದ್ರತೆಯಾಗಿ ವೀರೂ ಟಾಕೀಸ್ ಸಂಸ್ಥೆಯ ಮಾಲೀಕ ಮತ್ತು ಮಂಗಳೂರು ಮೇರಿಹಿಲ್ ನಿವಾಸಿ ವೀರೇಂದ್ರ ಶೆಟ್ಟಿ ಅವರಿಗೆ ತಮ್ಮ ಖಾತೆಗೆ ಸಂಬಂಧಿಸಿದ ಚೆಕ್ ನೀಡಿದ್ದರು. ಆದರೆ ಆ ಚೆಕ್‌ನ್ನೂ ನಗದೀಕರಿಸಲು ಹಾಕಿದಾಗ ಚೆಕ್ ಬೌನ್ಸ್ ಆಗಿತ್ತು. ಈ ಹಿನ್ನೆಲೆ ನ್ಯಾಯಾಲಯದ ಮೆಟ್ಟಿಲನ್ನೇರಿದ್ದರು ವೀರೇಂದ್ರ ಶೆಟ್ಟಿ.

Kannada Actress Padmaja Rao Receives Three-Month Jail Sentence in Cheque Bounce Case

ಇನ್ನೂ.. ಪ್ರಕರಣದ ವಿಚಾರಣೆಯನ್ನು ನಡೆಸಿದ್ದ ಮಂಗಳೂರು ಐದನೇ ಜೆಎಂಎಫ್ ನ್ಯಾಯಾಲಯ ಆ ನಂತರ ಪದ್ಮಜಾ ರಾವ್ ಅವರಿಗೆ ಸಮನ್ಸ್ ನೀಡಿತ್ತು. ಆದರೆ ಮೂರು ಬಾರಿ ಕೂಡ ಪದ್ಮಜಾ ಅವರು ನೊಟೀಸ್‌ಗಳಿಗೆ ಉತ್ತರಿಸಿರಲಿಲ್ಲ. ಈ ಕಾರಣಕ್ಕೆ 2021ರಲ್ಲಿ ನ್ಯಾಯಾಲಯ ಪದ್ಮಜಾ ರಾವ್ ಅವರ ವಿರುದ್ಧ ಜಾಮೀನು ರಹಿತ ಬಂಧನ ವಾರೆಂಟ್ ಹೊರಡಿಸಿತ್ತು.

ವಾರೆಂಟ್ ಹೊರಡಿಸಲಾದ ನಂತರ ನ್ಯಾಯಾಲಯಕ್ಕೆ ಹಾಜರಾದ ಪದ್ಮಜಾ ರಾವ್ ಜಾಮೀನು ಪಡೆದಿದ್ದರು. ನಾನು ದೂರುದಾರರಿಂದ ಯಾವುದೇ ಸಾಲ ಪಡೆದಿಲ್ಲ. ಅವರಿಗೆ ಯಾವುದೇ ಚೆಕ್ ನೀಡಿಲ್ಲ ಎಂದು ನ್ಯಾಯಾಲಯದಲ್ಲಿ ಹೇಳಿಕೆ ನೀಡಿದ್ದರು. ತಮ್ಮ ಸಾಮಾಜಿಕ ಜಾಲತಾಣದಲ್ಲಿ ನಾನು ಮೊದಲಿನಿಂದಲೂ ಸ್ವಪ್ರಯತ್ನದಿಂದ, ಕಠಿಣ ಪರಿಶ್ರಮದಿಂದ, ಎಲ್ಲವನ್ನೂ ಎದುರಿಸಿ, ನೈತಿಕವಾಗಿ ಬೆಳೆದು ಬಂದಿರುತ್ತೇನೆ. ಇನ್ನು ಮುಂದೆಯೂ ಹೀಗೆಯೇ ಇರುತ್ತೇನೆ ಎಂದು ಬರೆದುಕೊಂಡಿದ್ದರು.

Kannada Actress Padmaja Rao Receives Three-Month Jail Sentence in Cheque Bounce Case

ಇನ್ನೂ ವೀರೇಂದ್ರ ಶೆಟ್ಟಿ ಅವರಿಂದನೇ ನಮಗೆ 52.70 ಲಕ್ಷ ವಂಚನೆಯಾಗಿದೆ . ಅವರ ವಿರುದ್ಧ ನಾವು ಬೆಂಗಳೂರಿನ ಜೆಪಿನಗರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಕ್ಕೆ ತಮ್ಮ ಕಕ್ಷಿದಾರರ ವಿರುದ್ಧ ಈ ಆರೋಪ ಮಾಡಿದ್ದಾರೆ ಎಂದು ಪದ್ಮಜಾ ರಾವ್ ಅವರ ಪರ ವಕೀಲರು ವಾದಿಸಿದ್ದರು. ಪದ್ಮಜಾ ಅವರ ಮನೆಯಿಂದ ಚೆಕ್ ಕಳುವು ಮಾಡಿ ಸಹಿಯನ್ನು ಪೋರ್ಜರಿ ಮಾಡಲಾಗಿದೆ ಎಂದು ಹೇಳಿದ್ದರು. ಆದರೆ ಅದಕ್ಕೆ ಪೂರಕವಾದ ಸಾಕ್ಷಿಗಳನ್ನು ಒದಗಿಸಲು ಅವರು ವಿಫಲರಾದರು.

ಈ ಹಿನ್ನೆಲೆ ಮಂಗಳೂರಿನ 08ನೇ ಜೆಎಂಎಫ್‌ಸಿ ನ್ಯಾಯಾಲಯವು 40 ಲಕ್ಷದ 20 ಸಾವಿರ ರೂಪಾಯಿಗಳನ್ನು ಪದ್ಮಜಾ ರಾವ್ ದಂಡ ಪಾವತಿಸಬೇಕು. ಅದರಲ್ಲಿ 40 ಲಕ್ಷದ 17 ಸಾವಿರ ಹಣವನ್ನು ದೂರುದಾರರಿಗೆ ನೀಡಿ ಉಳಿದ ಮೂರು ಸಾವಿರ ಹಣವನ್ನು ಸರ್ಕಾರಕ್ಕೆ ಪಾವತಿ ಮಾಡಬೇಕು ಎಂದು ತೀರ್ಪು ನೀಡಿದೆ. ಮೂರು ತಿಂಗಳ ಜೈಲು ಶಿಕ್ಷೆ ವಿಧಿಸಿ ಆದೇಶಿಸಲಾಗಿದೆ.

Kannada Actress Padmaja Rao Receives Three-Month Jail Sentence in Cheque Bounce Case

ಒಟ್ನಲ್ಲಿ ಕನ್ನಡ ಚಿತ್ರರಂಗದ ಕಲಾವಿದರು ವ್ಯೆಯಕ್ತಿಕ ವಿಚಾರಗಳಿಂದ ಸದ್ಯ ಸುದ್ದಿಯಲ್ಲಿದ್ದಾರೆ. ವಿವಾದಕ್ಕೀಡಾಗುತ್ತಿದ್ದಾರೆ. ಆ ಕಡೆ ದರ್ಶನ್ ಜೈಲುಪಾಲಾಗಿದ್ದರೆ, ಈ ಕಡೆ ಪದ್ಮಜಾ ರಾವ್ ಕೂಡ ಜೈಲಿಗೆ ಹೋಗುವ ಸಂದರ್ಭ ಎದುರಾಗಿದೆ. ಉಳಿದಂತೆ ಪದ್ಮಜಾ ರಾವ್ ಸದ್ಯಕ್ಕೆ ಭಾಗ್ಯ ಲಕ್ಷ್ಮೀ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.ಕುಸುಮಾ ಪಾತ್ರದ ಮೂಲಕ ಕಿರುತೆರೆ ಪ್ರೇಕ್ಷಕರಿಗೆ ಹತ್ತಿರವಾಗಿದ್ದಾರೆ. ಒಂದು ವೇಳೆ ಚೆಕ್ ಬೌನ್ಸ್ ಪ್ರಕರಣದಲ್ಲಿ ಪದ್ಮಜಾ ರಾವ್‌ ಜೈಲು ಪಾಲಾದರೆ ಅವರ ನಟನೆಯ ಪ್ರಾಜೆಕ್ಟ್‌ಗಳ ಕಥೆಯೇನು ಎನ್ನುವುದು ಸದ್ಯಕ್ಕೆ ಅನೇಕರಿಗೆ ಕಾಡುತ್ತಿರುವ ಪ್ರಶ್ನೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X