ಮಂತ್ರ ಮಾಂಗಲ್ಯದಂತೆ ಮದುವೆಯಾಗಿ ಕನ್ನಡಿಗರ ಮನಗೆದ್ದ ನಟಿ ಪೂಜಾ ಗಾಂಧಿ ಈಗ ಕವಿಶೈಲದ ಮಡಿಲಲ್ಲಿ!
ಕರುನಾಡಿನಲ್ಲಿ ಮುಂಗಾರುಮಳೆ ಸುರಿಸುತ್ತಾ ಬಂದ ನಟಿ ಪೂಜಾಗಾಂಧಿ. ಬೇರೆ ರಾಜ್ಯದಿಂದ ಬಂದ ಇವರು ಈಗ ಕನ್ನಡ, ಕರ್ನಾಟಕದ ವಿಚಾರದಲ್ಲಿ ತನಗೆ ಸಾಟಿ ಯಾರು ಇಲ್ಲ ಎಂದು ತೋರಿಸಿದ್ದಾರೆ. ನಾಡು, ನುಡಿಯ ಬಗ್ಗೆ ಅತಿಯಾದ ಅಭಿಮಾನ ಇಟ್ಟುಕೊಂಡು ಕನ್ನಡ ಮಾತನಾಡುವುದರ ಜತೆಗೆ ಕನ್ನಡ ಬರವಣಿಗೆಯನ್ನೂ ಕಲಿತಿದ್ದಾರೆ.
ಇಷ್ಟೇ ಅಲ್ಲದೆ ವಿಶ್ವಮಾನವತೆ ಸಾರಿದ ರಾಷ್ಟ್ರಕವಿ ಕುವೆಂಪು ಅವರ ಆಶಯದಂತೆ ಇತ್ತೀಚೆಗೆ ಉದ್ಯಮಿ ವಿಜಯ್ ಘೋರ್ಪಡೆ ಅವರ ಜತೆಗೆ ಮಂತ್ರ ಮಾಂಗಲ್ಯ ಪದ್ಧತಿಯಂತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಆಗ ಕನ್ನಡಿಗರು ಇವರನ್ನು ತಮ್ಮ ಮನೆ ಮಗಳು ಎಂದು ಗೌರವಿಸಿದ್ದರು. ಈಗ ಮತ್ತೆ ಕುವೆಂಪು ಅವರ ಮನೆ ಕುಪ್ಪಳಿಗೆ ಭೇಟಿ ನೀಡಿ ಕವಿಶೈಲದ ಮಡಿಲಿನಲ್ಲಿ ಕಾಲ ಕಾಳೆದಿದ್ದಾರೆ.

ಕವಿಶೈಲದಲ್ಲಿ ಪೂಜಾಗಾಂಧಿ- ವಿಜಯ್ ಘೋರ್ಪಡೆ
ನಟ ನಟಿಯರು ಮದುವೆಯಾದ ತಕ್ಷಣ ತಮ್ಮ ಹನಿಮೂನ್ ಅಥವಾ ಪ್ರವಾಸಕ್ಕಾಗಿ ವಿದೇಶವನ್ನು ಆಯ್ಕೆ ಮಾಡಿಕೊಳ್ಳುವುದು ಕಾಮನ್ ಎನಿಸಿಬಿಟ್ಟಿದೆ. ಅಂತಹ ನಟಿಯರ ಸಾಲಿನಲ್ಲಿ ಪೂಜಾ ಗಾಂಧಿ ವಿಭಿನ್ನವಾಗಿ ನಿಲ್ಲುತ್ತಾರೆ. ಪೂಜಾ ಗಾಂಧಿ ತಮ್ಮ ಪತಿ ವಿಜಯ್ ಘೋರ್ಪಡೆ ಜೊತೆಗೆ ಕುವೆಂಪು ಹುಟ್ಟಿ ಬೆಳೆದ ಜಾಗ ಕುಪ್ಪಳ್ಳಿಗೆ ಭೇಟಿ ನೀಡಿದ್ದಾರೆ.
ಕಳೆದ ತಿಂಗಳ ನವೆಂಬರ್ 29 ರಂದು ಕುವೆಂಪು ಆಶಯದಂತೆ ಮಂತ್ರ ಮಾಂಗಲ್ಯದ ಮೂಲಕ ಉದ್ಯಮಿ ವಿಜಯ್ ಘೋರ್ಪಡೆ ಅವರನ್ನು ವರಿಸಿದ್ದ ಪೂಜಾ ಗಾಂಧಿ, ಈಗ ಕವಿಯ ಮನೆಗೆ ಭೇಟಿ ನೀಡಿದ್ದಾರೆ. ಅಪ್ಪಟ ಕನ್ನಡತಿಯಂತೆ ಸೀರೆಯುಟ್ಟು ಪತಿಯ ಕೈ ಹಿಡಿದು ರಾಷ್ಟ್ರಕವಿ ಮನೆಯ ಸುತ್ತಮುತ್ತಾ ಓಡಾಡುತ್ತ ಕಾಲ ಕಳೆದಿದ್ದಾರೆ.
ಪೂಜಾಗಾಂದಿಗೆ ಅಭಿಮಾನಿಗಳ ಹಾರೈಕೆ
ಕವಿಶೈಲಕ್ಕೆ ಭೇಟಿ ನೀಡಿರುವ ಫೋಟೋಗಳನ್ನು ನಟಿ ಪೂಜಾ ಗಾಂಧಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಮಂತ್ರ ಮಾಂಗಲ್ಯದಂತೆ ಮದುವೆಯಾಗಿದ್ದಾಲೆ ಹಾರೈಸಿದ್ದ ಅಭಿಮಾನಿಗಳು ಈಗ ಮತ್ತಷ್ಟು ಪ್ರೀತಿ ತೋರಿಸುತ್ತಿದ್ದಾರೆ. ನಟಿಯ ನಟಿಯ ಸರಳತೆ, ಕನ್ನಡ ಹಾಗೂ ಕುವೆಂಪು ಅವರ ಮೇಲಿನ ಅಭಿಮಾನಕ್ಕೆ ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನವ ದಂಪತಿಗೆ ಶುಭ ಹಾರೈಸಿರುವ ಅಭಿಮಾನಿಗಳು ಪೂಜಾ ಗಾಂಧಿ ಅವರ ಸರಳತೆಗೆ ಹಾಗೂ ಕನ್ನಡ ಹಾಗೂ ಕುವೆಂಪು ಅವರ ಮೇಲಿನ ಅಭಿಮಾನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸದ್ಯ ಪೂಜಾ ಗಾಂಧಿ ಕವಿಶೈಲ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಹಚ್ಚ ಹಸಿರಿನ ತಾಣ ಕವಿಶೈಲ ಎಂತವರನ್ನಾದರೂ ತನ್ನತ್ತ ಸೆಳೆಯುತ್ತದೆ. ಜೊತೆಗೆ ಕುವೆಂಪು ಮೇಲಿನ ಅಭಿಮಾನಕ್ಕೂ ಈ ಜಾಗಕ್ಕೆ ಭೇಟಿ ನೀಡುವವರಿದ್ದಾರೆ.
ಸ್ಪಷ್ಟವಾಗಿ ಕನ್ನಡ ಬರೆಯಲು, ಮಾತಾಡಲು ಕಲಿತ ನಟಿ ಪೂಜಾ ಗಾಂಧಿ
ಕನ್ನಡ ಚಿತ್ರರಂಗಕ್ಕೆ ಬಂದ ಹೊತರಲ್ಲಿ ನಟಿ ಪೂಜಾ ಗಾಂಧಿಗೆ ಭಾಷೆಯ ಸಮಸ್ಯೆ ಹೆಚ್ಚಾಗಿತ್ತು. ಆದರೆ, ಪಟ್ಟು ಬಿಡದ ಅವರು ನಿಧಾನವಾಗಿ ಕನ್ನಡ ಕಲಿಯಲು ಶುರು ಮಾಡಿದ್ದರು. ಕನ್ನಡೆ ಮಾತಾಡಲು ಕಲಿತ ಬಳಿಕ ಅವರಿಗೆ ನಾಡಿನ ಇತಿಹಾದ ಬಗ್ಗೆ ತಿಳಿಯುವ ಕುತೂಹಲ ಹೆಚ್ಚಾಗಿ ಕನ್ನಡ ಓದಲು ಕಲಿಯಲು ಹೊರಟರು. ಈ ವೇಳೆಯಲ್ಲಿ ಅವರಿಗೆ ಒತ್ತಾಗಿ ನಿಂತಿದ್ದು, ಪ್ರಿಯಕರ ವಿಜಯ್ ಘೋರ್ಪಡೆ.
ಹೀಗಾಗಿ ಕನ್ನಡ ಕಲಿಯಲು ಕಾರಣರಾದ ಗುರುಗಳನ್ನೇ ವರಿಸಿ ಕರುನಾಡಿನ ಸೊಸೆಯಾಗಿದ್ದಾರೆ ನಟಿ ಪೂಜಾ ಗಾಂಧಿ. ಇತ್ತೀಚೆಗೆ ಕನ್ನಡ ಓದಲು, ಬರೆಯಲು ಹಾಗೂ ಕನ್ನಡ ಹಾಡುಗಳನ್ನು ಹಾಡಲು ಅಭ್ಯಾಸ ಮಾಡುತ್ತಿದ್ದರು. ಇದಕ್ಕೆ ಕನ್ನಡಿಗರು, ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು. ಸದ್ಯ ಸಿನಿಮಾಗಳಲ್ಲಿ ಅಷ್ಟೊಂದು ಬ್ಯುಸಿ ಇರದ ಇವರು, ಸಾಮಾಜಿಕ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.
ಸಾಮಾಜಿಕ ಮಾಧ್ಯಮಗಳಲ್ಲಿ ಸಕತ್ ಆಕ್ಟಿವ್ ಆಗಿರುವ ಪೂಜಾ ಗಾಂಧಿ, ತಮ್ಮ ಮದುವೆಗೆ ತಮ್ಮ ಕೈಯಿಂದಲೆ ಆಹ್ವಾನ ಪತ್ರಿಕೆ ಬರೆದಿದ್ದರು. ಅದು ಸಕತ್ ವೈರಲ್ ಆಗಿತ್ತು. ಈಗ ಮತ್ತೆ ಕುವೆಂಪು ಮನೆಯಲ್ಲಿ ಕುಳಿತು ಕನ್ನಡಿಗರ ಮನಗೆದ್ದಿದ್ದಾರೆ.


Click it and Unblock the Notifications











