For Quick Alerts
  ALLOW NOTIFICATIONS  
  For Daily Alerts

  ಎರಡನೇ ಬಾರಿ 'ತೆನೆ ಹೊತ್ತ' ನಟಿ ಪೂಜಾ ಗಾಂಧಿ

  By Bharath Kumar
  |

  ಜೆಡಿಎಸ್ ಪಕ್ಷವನ್ನ ಬಿಟ್ಟು ಹೋಗಿದ್ದ ಕನ್ನಡ ನಟಿ ಪೂಜಾ ಗಾಂಧಿ ಮತ್ತೆ ಜೆಡಿಎಸ್ ಸೇರಿಕೊಂಡಿದ್ದಾರೆ. ಇಂದು ಜೆಡಿಎಸ್ ಪಕ್ಷದ ಕಚೇರಿಯಲ್ಲಿ ಪಿಜಿಆರ್ ಸಿಂಧ್ಯ ನೇತೃತ್ವದಲ್ಲಿ ನಟಿ ಪೂಜಾ ಗಾಂಧಿ ಜೆಡಿಎಸ್ ಪಕ್ಷ ಸೇರ್ಪಡೆಗೊಂಡಿದ್ದಾರೆ.

  ಬಳಿಕ ಮಾತನಾಡಿದ ಅವರು ''ಮೊದಲು ದೇವೇಗೌಡ ಹಾಗೂ ಕುಮಾರಸ್ವಾಮಿ ಅವರಿಗೆ ಕ್ಷಮೆ ಕೇಳುತ್ತೇನೆ. ತಪ್ಪು ನಿರ್ಧಾರ ತೆಗೆದುಕೊಂಡು ಪಕ್ಷದಿಂದ ಹೊರಗೆ ಹೋಗಿದ್ದೆ. ಮತ್ತೆ ನನ್ನ ಮನೆಗೆ ಸೇರಿದ್ದೇನೆ. ನಾನು ಯಾವುದೇ ಹುದ್ದೆಯ ಆಕಾಂಕ್ಷಿಯಲ್ಲ. ಟಿಕೆಟ್ ಕೂಡ ಬೇಡ. ಸಾಮಾನ್ಯ ಕಾರ್ಯಕರ್ತೆಯಾಗಿ ಕೆಲಸ ಮಾಡುತ್ತೇನೆ'' ಎಂದರು.

  2012ರಲ್ಲಿ ಜೆಡಿಎಸ್ ಸೇರುವ ಮೂಲಕ ರಾಜಕೀಯ ವೃತ್ತಿ ಆರಂಭಿಸಿದ್ದ ಪೂಜಾ ಗಾಂಧಿ ಅದೇ ವರ್ಷ ಈ ಪಕ್ಷವನ್ನು ತೊರೆದಿದ್ದರು. ಬಳಿಕ, ಕರ್ನಾಟಕ ಜನತಾ ಪಕ್ಷ (ಕೆಜೆಪಿ) ಸೇರಿದ್ದ ಪೂಜಾ, ಅದನ್ನೂ ತೊರೆದು ಬಿಎಸ್ ಆರ್ ಕಾಂಗ್ರೆಸ್ ಸೇರಿದ್ದರು.

  ರಾಜಕೀಯ 'ರಣರಂಗ'ದಲ್ಲಿ ಕಾದಾಡಲಿರುವ ಸಿನಿಮಾ ಮಂದಿ ಇವರೇ ರಾಜಕೀಯ 'ರಣರಂಗ'ದಲ್ಲಿ ಕಾದಾಡಲಿರುವ ಸಿನಿಮಾ ಮಂದಿ ಇವರೇ

  2013ರ ವಿಧಾನಸಭೆ ಚುನಾವಣೆಯಲ್ಲಿ ಬಿಎಸ್ ಆರ್‌ ಕಾಂಗ್ರೆಸ್‌ ನಿಂದ ರಾಯಚೂರು ನಗರ ಕ್ಷೇತ್ರದಲ್ಲಿ ಕಣಕ್ಕಿಳಿದಿದ್ದ ಪೂಜಾ ಗಾಂಧಿ ಸೋಲು ಕಂಡಿದ್ದರು. ನಂತರ ಸಿನಿಮಾಗಳಲ್ಲಿ ಹೆಚ್ಚು ತೊಡಗಿಕೊಂಡಿದ್ದ ಪೂಜಾ ಮತ್ತೆ ರಾಜಕೀಯವಾಗಿ ಸಕ್ರೀಯರಾಗಲು ಮುಂದಾಗಿದ್ದಾರೆ.

  ಹೀಗಾಗಿ, ಎರಡನೇ ಬಾರಿ ಜೆಡಿಎಸ್ ಗೆ ಜೊತೆಯಾಗಿದ್ದು, ಮತ್ತೆ ತಮ್ಮ ರಾಜಕೀಯ ವೃತ್ತಿಯನ್ನ ಆರಂಭಿಸಿದ್ದಾರೆ. ಈ ಮೂಲಕ ದೇವೇಗೌಡರ ಪಕ್ಷಕ್ಕೆ ಮತ್ತಷ್ಟು ತಾರಾ ಬಲ ಹೆಚ್ಚಿದೆ. ಇತ್ತೀಚೆಗಷ್ಟೆ ನಟಿ ಅಮೂಲ್ಯಾ ಮತ್ತು ಹಿರಿಯ ನಟ ಶಶಿಕುಮಾರ್ ಅವರು ಜೆಡಿಎಸ್ ಪಕ್ಷ ಸೇರ್ಪಡೆಗೊಂಡಿದ್ದರು. 'ಮುಂಗಾರು ಮಳೆ', 'ಕೃಷ್ಣ', 'ತಾಜ್ ಮಹಲ್', 'ಬುದ್ಧಿವಂತ', 'ಅಭಿನೇತ್ರಿ', 'ತಿಪ್ಪಾಜಿ ಸರ್ಕಲ್', 'ದಂಡುಪಾಳ್ಯ' ಅಂತಹ ಚಿತ್ರಗಳಲ್ಲಿ ಪೂಜಾ ಗಾಂಧಿ ನಟಿಸಿದ್ದಾರೆ.

  English summary
  Sandalwood actress pooja Gandhi re-joined JDS today in JDS party office Bengaluru. She was in BSR congress earlier. She contested in last assembly election from Rayachuru.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X