ಸಂಯುಕ್ತ ಹೆಗ್ಡೆ ಬಳಿಕ ಬಿಕಿನಿ ತೊಟ್ಟ ಸಂಯುಕ್ತ ಹೊರನಾಡು: ಬೋಲ್ಡ್ ಲುಕ್ ಕೊಟ್ಟ ಕನ್ನಡದ ನಟಿಯರಿವರು!
ಬಾಲಿವುಡ್, ಹಾಲಿವುಡ್‌ಗಳಲ್ಲಿ ಮಾತ್ರವಲ್ಲದೇ ಕನ್ನಡದಲ್ಲೂ ಸಹ ನಟಿಯರು ಬಿಕಿನಿ ತೊಡುವ ಸಂಪ್ರದಾಯ ಈಗಿನಿಂದಲ್ಲ 70ರ ದಶಕದಿಂದಲೇ ಆರಂಭವಾಗಿದೆ. ಆಗಿನಿಂದಲೇ ಹೀರೊಯಿನ್‌ಗಳು ಬಿಕಿನಿ ತೊಟ್ಟು ಪಡ್ಡೆ ಹುಡುಗರ ಮೈ ಬೀಸಿ ಏರಿಸಿದ್ದಾರೆ.
70 ರ ದಶಕದಲ್ಲಿ ಜಯಂತಿ ಕೂಡ ಬಿಕಿನಿ ಧರಿಸಿದ್ದರು. ಇದಾದ ಬಳಿಕ ಕನಸಿನ ರಾಣಿ ಮಾಲಾಶ್ರೀ ಕೂಡ ಬಿಕಿನಿ ಧರಿಸಿ ಹಾಟ್ ಆಗಿ ಕಾಣಿಸಿಕೊಂಡಿದ್ದರು. ಇವರಾದ ಬಳಿಕ ಕನ್ನಡದ ಮೆರು ನಟಿಯರು ಕೂಡ ಬಿಕಿನಿ ತೊಟ್ಟು ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.
ಇತ್ತೀಚಿಗಂತೂ ಬಿಕಿನಿ ತೊಡುವುದು ನಟಿಯರಿಗೆ ಕಾಮನ್ ಆಗಿ ಬಿಟ್ಟಿದೆ. ಅದರಲ್ಲೂ ಕನ್ನಡದ ನಟಿಯರು ಕೂಡ ಬಿಕಿನಿ ತೊಟ್ಟು ಪೋಟೊಗಳನ್ನು ತಮ್ಮ ಸಾಮಾಜಿಕ ಜಾಲತಾಣದ ಮೂಲಕ ಹರಿಬಿಡುವುದು ಸಾಮಾನ್ಯವಾಗಿದೆ. ಸದ್ಯ ಇತ್ತೀಚೆಗಷ್ಟೇ ನಟಿ ಸಂಯುಕ್ತ ಹೆಗಡೆ ಕೂಡ ಬಿಕಿನಿಯಲ್ಲಿ ಕಾಣಿಸಿಕೊಂಡಿದ್ದರು. ಈಗ ಚಂದನವನದ ಮತ್ತೊಬ್ಬ ನಟಿ ಸಂಯುಕ್ತಾ ಹೊರನಾಡು ಕೂಡ ಬಿಕಿನಿಯಲ್ಲಿ ಪೋಸ್ ಕೊಟ್ಟಿದ್ದಾರೆ.

ಬಿಕಿನಿಯಲ್ಲಿ ಸಖತ್ ಹಾಟ್ ಲುಕ್ ಕೊಟ್ಟ ಸಂಯುಕ್ತಾ
ಸ್ಯಾಂಡಲ್‌ವುಡ್ ಬೆಡಗಿ ಸಂಯುಕ್ತಾ ಹೊರನಾಡು ನಿನ್ನೆ (ಮೇ 23) 31ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಈ ಹಿನ್ನೆಲೆ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಲು ಫೆಂಡ್ಸ್‌ಗಳ ಜೊತೆ ಮಾಲ್ಡೀವ್ಸ್‌ಗೆ ಹಾರಿದ್ದಾರೆ. ಸದ್ಯ ಅಲ್ಲಿನ ಪೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದರ ಜೊತೆಗೆ ಸಂಯುಕ್ತಾ ಬಿಕಿನಿ ಧರಿಸಿ ಪೋಟೊಗೆ ಫೋಸ್ ಕೊಟ್ಟಿರುವ ಪೋಟೊಗಳನ್ನು ಶೇರ್ ಮಾಡುವ ಮೂಲಕ ಪಡ್ಡೆ ಹುಡುಗರ ನಿದ್ದೆ ಕದ್ದಿದ್ದಾರೆ. ಮಾಲ್ಡೀವ್ಸ್‌ನಲ್ಲಿ ಎಂಜಾಯ್ ಮಾಡುತ್ತಿರುವ ನಟಿ ಸಂಯುಕ್ತಾ ಬೀಚ್‌ನಲ್ಲಿ ಬಿಕಿನಿ ಧರಿಸಿ ಪೋಟೊಗೆ ಪೋಸ್ ಕೊಟ್ಟಿದ್ದಾರೆ. ಸದ್ಯ ಈ ಪೋಟೊಗಳು ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನಟಿ ಬಿಕಿನಿ ಬೋಲ್ಡ್ ಪೋಟೊಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

ಕಿರಿಕ್ ಬೆಡಗಿ ಸಂಯುಕ್ತಾ ಬಿಕಿನಿ ಲುಕ್
ಕಿರಿಕ್ ಪಾರ್ಟಿ ಮೂಲಕ ಕನ್ನಡಿಗರ ಮನ ಗೆದ್ದಿದ್ದ ನಟಿ ಸಂಯುಕ್ತಾ ಹೆಗಡೆ ಸದ್ಯ ದುಬೈನಲ್ಲಿ ಸಖತ್ ಎಂಜಾಯ್ ಮಾಡ್ತಿದ್ದಾರೆ. ಅದರಲ್ಲೂ ನಟಿ ಬ್ಲೂ ಕಲರ್ ಬಿಕಿನಿ ಧರಿಸಿ ಮಸ್ತ್ ಪೋಟೊಶೂಟ್ ಮಾಡಿಸಿದ್ದಾರೆ. ಅಲ್ಲದೆ ಈ ಪೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಸದ್ಯ ಈ ಪೋಟೊಗಳು ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನಟಿಯ ಬೋಲ್ಡ್ ಲುಕ್ ಅಭಿಮಾನಿಗಳು ಫಿದಾ ಆಗಿದ್ದಾರೆ. ಸದ್ಯ ನಟಿ ಸಂಯುಕ್ತಾ ಬಿಕಿನಿ ಉಡುಪಿನಲ್ಲಿ ಹಾಟ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.

ಬಿಕಿನಿ ಅವತಾರದಲ್ಲಿ ಕಾಣಸಿಕೊಂಡಿದ್ದ ನಟಿ ಐಂದ್ರಿತಾ
ಸ್ಯಾಂಡಲ್‌ವುಡ್ ನಟಿ ಐಂದ್ರಿತಾ ರೇ ಕನ್ನಡದ ಹಲವು ಸ್ಟಾರ್ ನಟರ ಜೊತೆ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಸದ್ಯ ಈಗ ದಿಗಂತ್ ಜೊತೆ ಮದುವೆಯಾಗಿದ್ದು, ಮದುವೆ ಬಳಿಕ ಮತ್ತೆ ಸಿನಿಮಾರಂಗದಲ್ಲಿ ತೊಡಗಿಕೊಂಡಿದ್ದಾರೆ. ನಟಿ ಐಂದ್ರಿತಾ ರೇ ಕೂಡ ಒಂದು ಕಾಲದಲ್ಲಿ ಬಿಕಿನಿ ಧರಿಸಿ ಹಾಟ್ ಆಗಿ ಕಾಣಿಸಿಕೊಂಡಿದ್ದರು. 2012 ರ ಸಿಸಿಎಲ್ ಕ್ಯಾಲೆಂಡರ್ ಫೋಟೊಶೂಟ್‌ಗಾಗಿ ಕನ್ನಡದ ಕೆಲ ನಟಿಯರು ಬಿಕಿನಿ ಧರಿಸಿದ್ದರು. ಅದರಲ್ಲಿ ಐಂದ್ರಿತಾ ರೇ ಕೂಡ ಆ ಪೋಟೊಶೂಟ್ ಮಾಡಿಸಿ ಪಡ್ಡೆ ಹುಡುಗರ ಹೃದಯ ಕದ್ದಿದ್ದರು.

ತುಪ್ಪದ ಬೆಡಗಿಯ ಬಿಕಿನಿ ಪೋಸ್
ಗ್ಲಾಮರಸ್ ಕ್ಷೀನ್ ಆಗಿರುವ ನಟಿ ರಾಗಿಣಿ ದ್ವಿವೇದಿ ಕೂಡ ಕನ್ನಡದ ಪ್ರಮುಖ ನಟಿಯರಲ್ಲಿ ಒಬ್ಬರಾಗಿದ್ದಾರೆ. ಇವರು ಕೂಡ ಚಿತ್ರರಂಗದ ಆರಂಭದ ದಿನದಲ್ಲೇ ಬಿಕಿನಿ ಧರಿಸಿದ್ದರು. ಅಲ್ಲದೆ ಒಂದು ಕಮರ್ಷಿಯಲ್ ಮ್ಯಾಗಜೀನ್‌ಗಾಗಿ ರಾಗಿಣಿ ಬಿಕಿನಿ ತೊಟ್ಟು ಹಾಟ್ ಪೋಟೊಶೂಟ್ ಮಾಡಿಸಿದ್ದರು. ಈ ಪೋಟೊ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು. ಹೀಗೆ ಹಲವು ಕನ್ನಡದ ನಟಿಯರು ಒಂದಲ್ಲಾ ಒಂದು ಕಡೆ ಬಿಕಿನಿ ತೊಟ್ಟು ಹಾಟ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.


Click it and Unblock the Notifications











