»   » ನಟಿ ಪ್ರೇಮಾ ದಾಂಪತ್ಯದಲ್ಲಿ ಬಿರುಕು, ವಿಚ್ಛೇದನಕ್ಕಾಗಿ ಅರ್ಜಿ

ನಟಿ ಪ್ರೇಮಾ ದಾಂಪತ್ಯದಲ್ಲಿ ಬಿರುಕು, ವಿಚ್ಛೇದನಕ್ಕಾಗಿ ಅರ್ಜಿ

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಬಹುಭಾಷಾ ನಟಿ ಪ್ರೇಮಾ ಅವರ ದಾಂಪತ್ಯದಲ್ಲಿ ಬಿರುಕು ಉಂಟಾಗಿದೆ. ವಿವಾಹ ವಿಚ್ಛೇದನ ಕೋರಿ ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯದಲ್ಲಿ ಬುಧವಾರ(ಮಾರ್ಚ್ 02) ಅರ್ಜಿ ಸಲ್ಲಿಸಿದ್ದಾರೆ.

ವಿಚ್ಛೇದನ ಕೋರಿ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲು ಖುದ್ದು ಪ್ರೇಮಾ ಅವರು ಬಂದಿದ್ದರು. ಹಿಂದೂ ವಿವಾಹ ಕಾಯ್ದೆ ಸೆಕ್ಷನ್ 13 ಅಡಿಯಲ್ಲಿ ಪರಸ್ಪರ ಒಪ್ಪಿಗೆ ಮೂಲಕ ಇಬ್ಬರು ವಿಚ್ಛೇದನ ಬಯಸಿರುವುದಾಗಿ ಅರ್ಜಿಯಲ್ಲಿ ಹೇಳಿದ್ದಾರೆ.

ಕೊಡಗು ಮೂಲದ ಪ್ರೇಮಾ ಅವರು 2006ರಲ್ಲಿ ತಮ್ಮ ಸಮುದಾಯದವರೇ ಆದ ಉದ್ಯಮಿ ಜೀವನ್ ಅಪ್ಪಚ್ಚು ಅವರನ್ನು ವರಿಸಿದ್ದರು. 1995ರಲ್ಲಿ ಶಿವರಾಜ್ ಕುಮಾರ್ ಅಭಿನಯದ ಸವ್ಯಸಾಚಿ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು. ನಂತರ ಉಪೇಂದ್ರ ನಿರ್ದೇಶನದ 'ಓಂ' ಚಿತ್ರದ ಮಾಧುರಿ ಪಾತ್ರದ ಮೂಲಕ ಮನೆ ಮಾತಾದರು. ನಮ್ಮೂರ ಮಂದಾರ ಹೂವೇ,ಯಜಮಾನ ಸೇರಿದಂತೆ ಅನೇಕ ಜನಪ್ರಿಯ ಚಿತ್ರಗಳಲ್ಲಿ ನಟಿಸಿದ್ದಾರೆ.

ಈ ಸುದ್ದಿ ಓದುತ್ತಿದ್ದಂತೆ ಕನ್ನಡ ಚಿತ್ರರಂಗದ ಸೆಲೆಬ್ರಿಟಿಗಳ ವಿವಾಹ ವಿಚ್ಛೇದನ ಪ್ರಕರಣಗಳು ಸಾಕಷ್ಟು ಅಭಿಮಾನಿಗಳ ಕಣ್ಮುಂದೆ ಸುಳಿಯುತ್ತವೆ, ಸುದೀಪ್- ಪ್ರಿಯಾ, ಶೃತಿ -ಮಹೇಂದರ್, ಅನುಪ್ರಭಾಕರ್-ಕೃಷ್ಣಕುಮಾರ್, ರಾಜೇಶ್ ಕೃಷ್ಣನ್-ರಮ್ಯಾ ಹೀಗೆ ಪಟ್ಟಿ ಸಾಗುತ್ತದೆ. [ಪೂರ್ತಿ ವರದಿ ಇಲ್ಲಿ ಓದಿ]

ಅರ್ಜಿ ಸಲ್ಲಿಸಿದ ತಕ್ಷಣ ವಿಚ್ಛೇದನ ಸಿಗುವುದಿಲ್ಲ

ಪರಸ್ಪರ ಒಪ್ಪಿಗೆ ಇದ್ದು ದಂಪತಿ ಕೌಟುಂಬಿಕ ಕೋರ್ಟೀಗೆ ಅರ್ಜಿ ಸಲ್ಲಿಸಿದ ತಕ್ಷಣ ವಿಚ್ಛೇದನ ಮಂಜೂರು ಆಗುವುದಿಲ್ಲ. ಇಬ್ಬರ ನಡುವೆ ಕೊನೆ ಕ್ಷಣದಲ್ಲಿ ಸಂಧಾನ ಮಾತುಕತೆ, ರಾಜಿ ಒಪ್ಪಂದ ನಡೆದು ಇಬ್ಬರು ಒಂದಾಗಲು ಕೋರ್ಟ್ ಕಾಲಾವಕಾಶ ನೀಡುತ್ತದೆ. ಈ ಅವಧಿ 6 ತಿಂಗಳಿನಿಂದ 1 ವರ್ಷ ತನಕ ಇರುತ್ತದೆ.

ಜನಪ್ರಿಯ ತಾರೆ, ಪ್ರಬುದ್ಧ ನಟಿ

ನೆರವಂಡಾ ಚೆಂಗಪ್ಪ ಪ್ರೇಮ (39 ವರ್ಷ) ಅವರು ಕನ್ನಡ ಅಷ್ಟೇ ಅಲ್ಲದೆ, ತೆಲುಗು, ತಮಿಳು, ಮಲಯಾಳಂ ಚಿತ್ರಗಳಲ್ಲಿ ನಟಿಸಿದ್ದಾರೆ. ಸವ್ಯಸಾಚಿ ಮೊದಲ ಚಿತ್ರ 2009ರಲ್ಲಿ ನಟಿಸಿದ್ದ ಶಿಶಿರ ಅವರ ಕೊನೆ ಚಿತ್ರ. ಜನಪ್ರಿಯ ಕಮರ್ಷಿಯಲ್ ಚಿತ್ರಗಳ ನಡುವೆ ಮರ್ಮ, ಸಿಂಗಾರೆವ್ವ, ಶಿಶಿರ ಸೇರಿದಂತೆ ಸದಭಿರುಚಿ ಚಿತ್ರಗಳಲ್ಲಿ ನಟಿಸಿ ವಿಮರ್ಶಕರ ಮನಗೆದ್ದಿದ್ದರು.

ಅನೇಕ ಪ್ರಶಸ್ತಿಗಳು ಸಂದಿವೆ

ಓಂ ಚಿತ್ರಕ್ಕಾಗಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ, ಕನಸುಗಾರ ಚಿತ್ರಕ್ಕಾಗಿ ಫಿಲಂಫೇರ್, ತೆಲುಗಿನ ದೇವಿ ಚಿತ್ರಕ್ಕಾಗಿ ನಂದಿ ಪ್ರಶಸ್ತಿ ಗಳಿಸಿದ್ದಾರೆ. 70ಕ್ಕೂ ಅಧಿಕ ಕನ್ನಡ ಚಿತ್ರ, 28 ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ತಲಾ 2 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ಸ್ಟಾರ್ ನಟರುಗಳ ಜೊತೆ ನಟನೆ

ಡಾ. ವಿಷ್ಣುವರ್ಧನ್, ಶಿವರಾಜ್ ಕುಮಾರ್, ರಮೇಶ್ ಅರವಿಂದ್, ಮೋಹನ್ ಲಾಲ್, ವಿ ರವಿಚಂದ್ರನ್ ಸೇರಿದಂತೆ ಅನೇಕ ಸ್ಟಾರ್ ನಟರುಗಳ ಜೊತೆ ನಟಿಸಿದ್ದಾರೆ.

English summary
Kannada Actress Prema has filed divorce petition in Bengaluru family court under section 13 B. Prema also appeared before the court and submitted the plea. Court is yet to assign court /mediation center in this case.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada