For Quick Alerts
  ALLOW NOTIFICATIONS  
  For Daily Alerts

  ನಟಿ 'ಪ್ರೇಮ' ಸಂಸಾರ 'ಜೀವನ'ದಲ್ಲಿ ಬಿರುಕು! ಅಸಲಿ ಕಾರಣವೇನು?

  By Harshitha
  |

  ನೋಡಿದ ತಕ್ಷಣ ಮನೆ ಮಗಳು ಅನಿಸೋವಂತಹ ಮುಗ್ಧ ನೋಟ, ನೋಡುಗರ ಮನದಲ್ಲಿ ಸ್ಥಿರವಾಗಿ ನೆಲೆಸುವಂತಹ ಅಭಿನಯ, ಅಂತಹ ಅಭಿನಯದಿಂದ ಕೇವಲ ಮೂರನೇ ಚಿತ್ರಕ್ಕೆ ರಾಜ್ಯ ಪ್ರಶಸ್ತಿ ಪಡೆದುಕೊಂಡ ಪ್ರತಿಭಾವಂತ ನಟಿ ಪ್ರೇಮ.

  90 ರ ದಶಕದಲ್ಲಿ ಇಡೀ ಕನ್ನಡ ಚಿತ್ರರಂಗವನ್ನೇ ಆಳಿದ 'ಕೊಡಗಿನ ಕುವರಿ' ಅಪ್ಪಟ 'ಚೆಲುವಿ' ಪ್ರೇಮ ವೈವಾಹಿಕ ಬದುಕ್ಕಲ್ಲಿ ಇದೀಗ ಬಿರುಗಾಳಿ ಎದ್ದಿದೆ. ನಟಿ 'ಪ್ರೇಮ' ಸಂಸಾರ 'ಜೀವನ'ನಲ್ಲಿ ಬಿರುಕು ಮೂಡಿದೆ. [ಕನ್ನಡ ಥಳಕು ಬಳುಕಿನ ಲೋಕದಲ್ಲಿ ದಾಂಪತ್ಯದ ಹುಳುಕು]

  2006ರಲ್ಲಿ ಕೊಡಗಿನ ಜೀವನ್ ಅಪ್ಪಚ್ಚು ಎಂಬುವರನ್ನ ವಿವಾಹವಾಗಿದ್ದ ನಟಿ ಪ್ರೇಮ ಈಗ ವಿಚ್ಛೇದನ ಕೋರಿ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ.

  10ನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳುವ ಮುನ್ನವೇ ನಟಿ ಪ್ರೇಮ ಮದುವೆ ಮುರಿದು ಬೀಳುವ ಹಂತಕ್ಕೆ ಬಂದಿದೆ. ಇದಕ್ಕೆ ಕಾರಣವೇನು? ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ಕಿಸಿ....

  ಹಿಂದು ವಿವಾಹ ಕಾಯ್ದೆ ಪ್ರಕಾರ ವಿಚ್ಛೇದನ ಅರ್ಜಿ

  ಹಿಂದು ವಿವಾಹ ಕಾಯ್ದೆ ಪ್ರಕಾರ ವಿಚ್ಛೇದನ ಅರ್ಜಿ

  ಹಿಂದು ವಿವಾಹ ಕಾಯ್ದೆ ಸೆಕ್ಷನ್ 13 ಅಡಿಯಲ್ಲಿ ಪರಸ್ಪರ ಒಪ್ಪಿಗೆ ಮೇರೆಗೆ ನಟಿ ಪ್ರೇಮ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದಾರೆ. [ನಟಿ ಪ್ರೇಮಾ ದಾಂಪತ್ಯದಲ್ಲಿ ಬಿರುಕು, ವಿಚ್ಛೇದನಕ್ಕಾಗಿ ಅರ್ಜಿ]

  ವಿಚ್ಛೇದನಕ್ಕೆ ಕಾರಣವೇನು?

  ವಿಚ್ಛೇದನಕ್ಕೆ ಕಾರಣವೇನು?

  ನಟಿ ಪ್ರೇಮ ಹಾಗೂ ಪತಿ ಜೀವನ್ ಅಪ್ಪಚ್ಚು ನಡುವಿನ ವೈಮನಸ್ಯ ವಿಚ್ಛೇದನಕ್ಕೆ ಕಾರಣ ಎನ್ನಲಾಗಿದೆ. ಜೀವನ್ ಅಪ್ಪಚ್ಚು ಬಗ್ಗೆ ನಟಿ ಪ್ರೇಮ ವಿಶ್ವಾಸ ಕಳೆದುಕೊಳ್ಳಲು ಒಂದು ಸುಳ್ಳು ಕಾರಣ ಅಂತ ಟಿವಿ9 ಕನ್ನಡ ವಾಹಿನಿ ವರದಿ ಮಾಡಿದೆ. [ಚಂದ್ರವಂಶ ಚಿತ್ರಕ್ಕೆ ನಾ ಒಲ್ಲೆ ಎಂದ ಪ್ರೇಮಾ!]

  ಸಾಫ್ಟ್ ವೇರ್ ಎಂಜಿನಿಯರ್ ಅಲ್ಲವೇ ಜೀವನ್?

  ಸಾಫ್ಟ್ ವೇರ್ ಎಂಜಿನಿಯರ್ ಅಲ್ಲವೇ ಜೀವನ್?

  ಮದುವೆಗೂ ಮುನ್ನ ಸಾಫ್ಟ್ ವೇರ್ ಎಂಜಿನಿಯರ್ ಅಂತ ಹೇಳಿಕೊಂಡಿದ್ದ ಜೀವನ್ ಅಪ್ಪಚ್ಚು ಓರ್ವ ಉದ್ಯಮಿ ಅನ್ನೋದು ನಟಿ ಪ್ರೇಮಗೆ ಮದುವೆ ನಂತರ ಗೊತ್ತಾಗಿದೆ. [ತಾಯಿ ಪಾತ್ರ ಬೇಡವೆಂದ ಮಂದಾರ ಹೂ ಪ್ರೇಮ]

  ನಟಿಸುವುದು ಪ್ರೇಮಗೆ ಇಷ್ಟವಿರಲಿಲ್ಲ?

  ನಟಿಸುವುದು ಪ್ರೇಮಗೆ ಇಷ್ಟವಿರಲಿಲ್ಲ?

  ಟಿವಿ9 ಕನ್ನಡ ವಾಹಿನಿ ಮಾಡಿರುವ ವರದಿ ಪ್ರಕಾರ, ಹೀರೋಯಿನ್ ಪಟ್ಟದಿಂದ ದೂರವಾಗುತ್ತಿದ್ದ ಸಂದರ್ಭದಲ್ಲಿ ನಟಿ ಪ್ರೇಮ ಮದುವೆ ಆದರು. ವಿವಾಹದ ಬಳಿಕ ನಟಿಸಲು ಇಚ್ಛಿಸದ ಪ್ರೇಮ ಎಲ್ಲರಂತೆ ಗಂಡ-ಮನೆ-ಮಕ್ಕಳು ಅಂತ ಸಾಂಸಾರಿಕ ಜೀವನ ಅನುಭವಿಸಲು ಬಯಸಿದ್ದರು.

  ಪ್ರೇಮ ಇಚ್ಛೆಗೆ ಒಪ್ಪದ ಜೀವನ್ ಕುಟುಂಬ

  ಪ್ರೇಮ ಇಚ್ಛೆಗೆ ಒಪ್ಪದ ಜೀವನ್ ಕುಟುಂಬ

  ಆದರೆ, ಕೊಡಗಿನ ಜೀವನ್ ಅಪ್ಪಚ್ಚು ಮನೆಯವರಿಗೆ ನಟಿ ಪ್ರೇಮ ದುಡಿಯಬೇಕು, ಅದರಿಂದ ಬಂದ ಹಣದಲ್ಲಿ ತಾವು ಐಶಾರಾಮಿ ಜೀವನ ಸಾಗಿಸಬೇಕು ಎಂಬ ಬಯಕೆ. ನಟಿ ಪ್ರೇಮ ಹಾಗೂ ಜೀವನ್ ಅಪ್ಪಚ್ಚು ನಡುವೆ ಕಲಹ ವೈಮನಸ್ಯ ಉಂಟಾಗಲು ಇದೇ ಕಾರಣ ಅಂತ ಟಿವಿ9 ಕನ್ನಡ ವಾಹಿನಿ ವರದಿ ಮಾಡಿದೆ.

  ಪ್ರತ್ಯೇಕ ವಾಸ?

  ಪ್ರತ್ಯೇಕ ವಾಸ?

  ಕಲಹ ಹೆಚ್ಚಾದಂತೆ ಪ್ರತ್ಯೇಕವಾಗಿ ವಾಸಿಸಲು ನಟಿ ಪ್ರೇಮ ಮುಂದಾದರು ಎನ್ನಲಾಗಿದೆ. ಅಂದಿನ ವೈಮನಸ್ಯ ಈಗ ಕೋರ್ಟ್ ಮೆಟ್ಟಿಲೇರುವಂತೆ ಮಾಡಿದೆ.

  'ಕ್ಷಣ ಕ್ಷಣ' ಚಿತ್ರದಲ್ಲಿ ನಟಿಸಿದರು!

  'ಕ್ಷಣ ಕ್ಷಣ' ಚಿತ್ರದಲ್ಲಿ ನಟಿಸಿದರು!

  ಮದುವೆ ಆದ ಒಂದೇ ವರ್ಷದಲ್ಲಿ ಸುನೀಲ್ ಕುಮಾರ್ ದೇಸಾಯಿ ನಿರ್ದೇಶನದ 'ಕ್ಷಣ ಕ್ಷಣ' ಚಿತ್ರದಲ್ಲಿ ನಟಿ ಪ್ರೇಮ ಅಭಿನಯಿಸಿದರು. ಅದಾದ ಬಳಿಕ ಮತ್ತೆ ಚಿತ್ರರಂಗದಿಂದ ದೂರ ಸರಿದರು ನಟಿ ಪ್ರೇಮ.

  'ಶಿಶಿರ'ದಲ್ಲಿ ಅಭಿನಯ

  'ಶಿಶಿರ'ದಲ್ಲಿ ಅಭಿನಯ

  2009 ರಲ್ಲಿ ಮಂಜು ಸ್ವರಾಜ್ ನಿರ್ದೇಶನದ 'ಶಿಶಿರ' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು ನಟಿ ಪ್ರೇಮ.

  ಕ್ಯಾನ್ಸರ್ ಇತ್ತಾ?

  ಕ್ಯಾನ್ಸರ್ ಇತ್ತಾ?

  ನಟಿ ಪ್ರೇಮ ಅನಾರೋಗ್ಯದಿಂದ ಬಳಲುತ್ತಿರುವ ಕಾರಣ ಚಿತ್ರಗಳಲ್ಲಿ ಅಭಿನಯಿಸುತ್ತಿಲ್ಲ ಅಂತ ಹಿಂದೊಮ್ಮೆ ಗಾಂಧಿನಗರದಲ್ಲಿ ಗಾಸಿಪ್ ಹಬ್ಬಿತ್ತು. 'ಶಿಶಿರ' ಚಿತ್ರದಲ್ಲಿ ನಟಿ ಪ್ರೇಮರವರ ಶಾರ್ಟ್ ಹೇರ್ ಸ್ಟೈಲ್ ನೋಡಿ, ಕ್ಯಾನ್ಸರ್ ಇದೆ ಅಂತ ಗುಲ್ಲೆದ್ದಿತ್ತು. [ನಟಿ ಪ್ರೇಮಾ ಮೇಲೆ ಹಾರಾಡಿದ ಗಾಸಿಪ್ ಗೂಬೆ]

  ಎಲ್ಲಾ ಗಾಸಿಪ್ ಗಳಿಗೂ ತೆರೆ ಎಳೆದ ಪ್ರೇಮ

  ಎಲ್ಲಾ ಗಾಸಿಪ್ ಗಳಿಗೂ ತೆರೆ ಎಳೆದ ಪ್ರೇಮ

  ''ನಾನು ಆರೋಗ್ಯವಾಗಿದ್ದೀನಿ. ತಂದೆ-ತಾಯಿ ಹಾಗೂ ಕನ್ನಡ ಜನತೆಯ ಆಶೀರ್ವಾದದಿಂದ ನಾನು ಚೆನ್ನಾಗಿದ್ದೀನಿ. ನನಗೆ ಏನೂ ಆಗಿಲ್ಲ'' ಅಂತ ಮಾಧ್ಯಮಗಳಿಗೆ ನಟಿ ಪ್ರೇಮ ಸ್ಪಷ್ಟನೆ ನೀಡಿದ್ದರು.

  ಫೋಟೋಶೂಟ್ ಮಾಡಿದ್ದ ನಟಿ ಪ್ರೇಮ

  ಫೋಟೋಶೂಟ್ ಮಾಡಿದ್ದ ನಟಿ ಪ್ರೇಮ

  ಇತ್ತೀಚೆಗಷ್ಟೇ ನಟಿ ಪ್ರೇಮ ಫೋಟೋಶೂಟ್ ಒಂದರಲ್ಲಿ ಮಿಂಚಿದ್ದರು. ಇದನ್ನ ನೋಡಿ ನಟಿ ಪ್ರೇಮ ಬದುಕ್ಕಲ್ಲೀಗ 'ಆಲ್ ಈಸ್ ವೆಲ್' ಅಂತ ಎಲ್ಲರೂ ಭಾವಿಸುವಾಗಲೇ ಈಗ ಶಾಕಿಂಗ್ ನ್ಯೂಸ್ ಕೊಟ್ಟಿದ್ದಾರೆ. [ಮಾಡೆಲಿಂಗ್ ಕ್ಷೇತ್ರಕ್ಕೆ ಬಲಗಾಲಿಟ್ಟು ಬಂದ ಪ್ರೇಮಾ]

  ರಾಜಿ ಸಂಧಾನ ಬಾಕಿ ಇದೆ

  ರಾಜಿ ಸಂಧಾನ ಬಾಕಿ ಇದೆ

  ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರೂ, ಕೌಟುಂಬಿಕ ನ್ಯಾಯಾಲಯದಲ್ಲಿ ರಾಜಿ ಸಂಧಾನ ಮುರಿದು ಬಿದ್ದರೆ ಮಾತ್ರ ಡಿವೋರ್ಸ್ ಸಿಗಲಿದೆ.

  English summary
  TV 9 Kannada Channel reports the reason behind Kannada Actress Prema to file divorce petition in Bengaluru Family Court under section 13B.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X